ಅಂಜುಮನ್ ಕಮಿಟಿಯ ಕಾಂಪ್ಲೆಕ್ಸಿನ ಮೇಲೆ ನಡೆಯುತ್ತಿರುವ ಅನಧಿಕೃತವಾಗಿ ಕಟ್ಟಡ ಕಾರ್ಯವನ್ನು ಕೂಡಲೇ ನಿಲ್ಲಿಸಲು ಆಗ್ರಹ
ಇಂಡಿ: ಪಟ್ಟಣದ ಮಹಾವೀರ ವೃತ್ತದಲ್ಲಿ ಇರುವ ಅಂಜುಮನ್ ಕಮಿಟಿಯ ಕಾಂಪ್ಲೆಕ್ಸಿನ ಮೇಲೆ ನಡೆಯುತ್ತಿರುವ ಅನಧಿಕೃತವಾಗಿ ಕಟ್ಟಡ ಕಾರ್ಯವನ್ನು ಕೂಡಲೇ ನಿಲ್ಲಿಸಲು ಇಂಡಿ ತಹಶೀಲ್ದಾರ್ ಮತ್ತು ಪುರಸಭೆ ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಆದರೂ ಕೂಡ ಅಂಜುಮನ್ ಕಮಿಟಿಯು ಈ ನೋಟಿಸ್‌ಗಳನ್ನೂ ಲೆಕ್ಕಿಸದೇ ತಾವು ನಿರ್ಧರಿಸಿದಂತೆ ಕೆಲಸ ಮುಂದುವರೆಸುತ್ತಿದೆ ಕೂಡಲೆ ಇಂಡಿ ಪುರಸಭೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳಿಯ ನಿವಾಸಿ ಸಗೀರ ಮುಲ್ಲಾ ಆಗ್ರಹಿಸಿದರು. .
ಈಗಿರುವ ಅಂಜುಮನ್ ಕಮಿಟಿಯ ಅವಧಿ ಎರಡು ತಿಂಗಳು ಹಿಂದೆ ಮುಕ್ತಾಯವಾಗಿದೆ. ಆದರೆ ಇಲ್ಲೆಯವರೆಗೂ ನೂತನ ಸಮಿತಿಯ ಚುನಾವಣೆ ಜರುಗದಿರುವುದರಿಂದ ಈ ಸಮಿತಿಯು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಅರ್ಹವಲ್ಲ. ಇತ್ತ, ಈ ಸಮಿತಿಯು ತಮ್ಮ ಅವಧಿ ಮುಗಿದರೂ, ಕಾನೂನು ಮೀರಿ ಕೃತ್ಯಗಳಲ್ಲಿ ತೊಡಗಿಕೊಂಡಿದ್ದು ಅಂಜುಮನ್ ಕಮಿಟಿಯ ಆಸ್ತಿಗೆ ನಷ್ಟವನ್ನುಂಟು ಮಾಡುತ್ತಿದೆ.
ಅಂಜುಮನ್ ಕಮಿಟಿಯ ಸದಸ್ಯರು ಪಟ್ಟಣದ ಕೆಲ ಜನರಿಂದ ಹಣವನ್ನು ಪಡೆದು ಪುರಸಭೆ ಅನುಮತಿ ಇಲ್ಲದೆ ಅನಧಿಕೃತ ರೀತಿಯಲ್ಲಿ ಅಂಗಡಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಅಂಜುಮನ್ ಸಮಿತಿಯು ತಕ್ಷಣವೇ ಈ ಅನಧಿಕೃತವಾಗಿ ನಿರ್ಮಿಸುತ್ತಿದ್ದ ನಿರ್ಮಾಣವನ್ನು ನಿಲ್ಲಿಸದಿದ್ದರೆ, ಸರ್ಕಾರದ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಅಂಜುಮನ್ ಸಂಸ್ಥೆಯೇ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿಯನ್ನುಂಟು ಮಾಡಲಿದೆ. ಆದಷ್ಟು ಬೇಗನೆ ವಕ್ಪ್ ಅಧಿಕಾರಿಗಳು ಹಾಗೂ ಇಂಡಿ ಅಂಜುಮನ್ ಕಮಿಟಿಯವರು ಇಂಡಿ ಅಂಜುಮನ್ ಇಸ್ಲಾಂ ಕಮಿಟಿಗೆ ಚುನಾವಣೆ ಘೋಷಣೆ ಮಾಡಿ ಹೊಸ ಕಮಿಟಿ ರಚಣೆ ಮಾಡಬೇಕು ಎಂದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ