ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತನ್ನು ನಾಶಮಾಡಿ ನಗರೀಕರಣ ಜೀವನ ಒಪ್ಪಿಕೊಂಡಿದ್ದಾನೆ. ಹಾಗಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ.
ದಿನಾಂಕ 5/06/2035 ರಂದು ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತç ವಿಭಾಗ, ಎನ್.ಎಸ್.ಎಸ್, ಯುತ್ ರೆಡ್‌ಕ್ರಾಸ್ ಮತ್ತು ರೇಂರ‍್ಸ್ & ರೋರ‍್ಸ್ ಘಟಕದ ಅಡಿಯಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ ಅವರು ಮಾತನಾಡುತ್ತ “ಹಸಿರೇ ಉಸಿರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಪ್ರಪಂಚದಾದ್ಯAತ ಪರಿಸರವನ್ನು ನಾಶಮಾಡಿ ಕಾಂಕ್ರೀಟ್ ಹಾಸಿಗೆಯನ್ನು ಹಾಕುತ್ತಿರುವದರಿಂದ ನಾವು ಕೆಲವೇ ವರ್ಷಗಳಲ್ಲಿ ವಿನಾಶದ ಹಾದಿ ತುಳಿಯುತ್ತಿದ್ದೇವೆ. ಕೈಗಾರಿಕರಣ, ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿ ಹತ್ತು ಹಲವು ಕಾರಣಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದ ಮನುಷ್ಯನಲ್ಲಿ ಹೃದಯ, ಉಸಿರಾಟ ಸಂಬAಧಿತ ಕಾಯಿಲೆ, ಕ್ಯಾನ್ಸರ್‌ನಂತಹ ಮಾರಕ ರೋಗಗಳಂತಹ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಪರಿಸರ ಉಳಿವಿಗಾಗಿ ವಿಶೇಷ ಕಾಳಜಿವಹಿಸಬೇಕು. ಅಲ್ಲದೆ ಮನೆಗೊಂದು ಸಸಿಯನ್ನು ನೆಟ್ಟು ಪೋಷಿಸಬೇಕು. ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಅರಣ್ಯ ಸಂಪತನ್ನು ನಾಶಮಾಡಿ ನಗರೀಕರಣ ಜೀವನ ಒಪ್ಪಿಕೊಂಡಿದ್ದಾನೆ. ಹಾಗಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ಲಭ್ಯವಿರುವ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮರ-ಗಿಡಗಳನ್ನು ನೆಟ್ಟು ಪೋಷಿಸುವದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯ. ಈ ವರ್ಷದ ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ಮಣಿಸಿ’ ಎಂದಾಗಿದ್ದು, ಇದರಡಿಯಲ್ಲಿ ಈಗ ಕೆಲಸ ನಿರ್ವಹಿಸಬೇಕಾಗಿದೆ.” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ವಿಶ್ವಾಸ ಕೋರವಾರ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಶ್ರೀ.ಶ್ರೀಶೈಲ, ರೇಂರ‍್ಸ್ & ರೋರ‍್ಸ್ ಘಟಕದ ಅಧಿಕಾರಿಗಳಾದ ಡಾ.ಶ್ರೀಕಾಂತ ರಾಠೋಡ, ಶ್ರೀ.ಮಲ್ಲಿಕಾರ್ಜುನ ಕೋಣದೆ, ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ