ತಿಡಗುಂದಿಯಲ್ಲಿನ ತೋಟಗಾರಿಕೆ ಸಂಶೋಧನಾ ಕೇಂದ್ರವನ್ನು ಮುಖ್ಯ ತೋಟಗಾರಿಕೆ ಸಂಶೋಧನಾ ಕೇಂದ್ರವಾಗಿ ಘೋಷಿಸುವಂತೆ ಡಾ. ಎಂ. ಬಿ. ಪಟ್ಟಣಶೆಟ್ಟಿ ಆಗ್ರಹ


ತಿಡಗುಂದಿಯಲ್ಲಿನ ತೋಟಗಾರಿಕೆ ಸಂಶೋಧನಾ ಕೇಂದ್ರವನ್ನು ಮುಖ್ಯ ತೋಟಗಾರಿಕೆ ಸಂಶೋಧನಾ ಕೇಂದ್ರವಾಗಿ ಘೋಷಿಸುವಂತೆ ಡಾ. ಎಂ. ಬಿ. ಪಟ್ಟಣಶೆಟ್ಟಿ ಆಗ್ರಹ


    ವಿಜಯಪುರ ಜಿಲ್ಲೆಯು ದ್ರಾಕ್ಷಿ, ದಾಳಿಂಬೆ, ಲಿಂಬೆ, ಸೀತಾಫಲ, ಪೇರಲ ಮುಂತಾದ ಉಷ್ಣ ವಲಯದ ಹಣ್ಣಿನ ಬೆಳೆಗಳಿಗೆ ಇಡೀ ಭಾರತ ದೇಶದಲ್ಲಿಯೇ ಹೆಸರು ವಾಸಿಯಾಗಿದ್ದು, ಸುಮಾರು ೩೦ ಸಾವಿರ ಹೇ. ಪ್ರದೇಶದಲ್ಲಿ ದ್ರಾಕ್ಷಿ, ೭ ಸಾವಿರ ಹೇ. ಪ್ರದೇಶದಲ್ಲಿ ಲಿಂಬೆ, ೧೦ ಸಾವಿರ ಹೇ. ಪ್ರದೇಶದಲ್ಲಿ ದಾಳಿಂಬೆ ಮತ್ತು ಇತರೆ ಉಷ್ಣ ವಲಯದ ಹಣ್ಣಿನ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆಯಲ್ಲದೇ, ತರಕಾರಿ, ಹೂ, ಮತ್ತು ಸಾಂಬಾರ ಬೆಳೆಗಳಾದ ಮೆನಸಿನಕಾಯಿ, ಅಜಿವಾನ, ಉಳ್ಳಾಗಡ್ಡೆ ಬೆಳೆಗಳನ್ನೂ ಸಹ ಗಣನೀಯ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಎಲ್ಲ ತೋಗಾರಿಕೆ ಬೆಳೆಗಳಿಂದ ವಾರ್ಷಿಕ ಸುಮಾರು ೧೦ ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದ್ದು, ರೈತರ ಮತ್ತು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೋಟಗಾರಿಕೆ ಬೆಳೆಗಳು ಪ್ರಮುಖ ಪಾತ್ರವಹಿಸಿವೆ.

     ಈ ವಿಷಯಕ್ಕೆ ಸಂಭAಧೀಸಿದAತೆ  ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಅಧೀನದಲ್ಲಿರುವ, ತಿಡಗುಂದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ತೋಟಗಾರಿಕೆ ಮತ್ತು ವಿಸ್ತರಣಾ ಕೇಂದ್ರ’, ತೋಟಗಾರಿಕೆ ರೈತರಿಗೆ ಅವಶ್ಯವಿರುವ ತಂತ್ರಜ್ಞಾನ ಮತ್ತು ಮಾಹಿತಿ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಆದರೆ, ಈ ಕೇಂದ್ರದಲ್ಲಿ ಸಿಬ್ಬಂದಿ (ವಿಜ್ಞಾನಿಗಳ), ಅತ್ಯಾಧುನಿಕ ಪ್ರಯೋಗಾಲಯ 

(ಐಚಿboಡಿಚಿಣoಡಿಥಿ ಜಿoಡಿ ಣesಣiಟಿg ಠಿಟಚಿಟಿಣ mಚಿಣeಡಿiಚಿಟs), ಕ್ಷೇತ್ರ ಭೇಟಿಗಾಗಿ ವಾಹನ, ತೋಟಗಾರಿಕೆ ಉತ್ಪನ್ನಗಳÀ 

ಮೌಲ್ಯವರ್ಧನೆ ಸೌಲಭ್ಯಗಳು, ಸಿಬ್ಬಂದಿಯ ವಸತಿ ನಿಲಯಗಳು ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಅಗತ್ಯವಾದ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಸಕಾಲದಲ್ಲಿ ಒದಗಿಸಲು ಸಾದ್ಯವಾಗುತ್ತಿಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದ್ದು, ಇದಕ್ಕಾಗಿ ರೈತರು ನೆರೆಯ ಮಹಾರಾಷ್ಟೃ ರಾಜ್ಯಕ್ಕೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆಯಲ್ಲದೇ, ಸದ್ಯಕ್ಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳ ಮೇಲೂ ಸಹ ಕೆಲಸದ ಒತ್ತಡ ಹೆಚ್ಚಾಗಿ, ರೈತರಿಗೆ ಸಕಾಲದಲ್ಲಿ ಸಮರ್ಪಕ ಸೇವೆ ಒದಗಿಸುವಲ್ಲಿ ತೊಂದರೆಯಾಗುತ್ತಿದೆ. ಇದಲ್ಲದೇ ಈ ಕೇಂದ್ರವು ಇಡೀ ವಿಜಯಪುರ ಜಿಲ್ಲೆಗೆ,  ತೋಟಗಾರಿಕೆ ಬೆಳೆಗಳಿಗೆನೇ ಮೀಸಲಾದ ಸಂಶೋಧನಾ ಮತ್ತು ವಿಸ್ತರಣಾ ಸೇವೆಗಳನ್ನು ಒದಗಿಸುವ ಏಕೈಕ ಕೇಂದ್ರವಾಗಿದೆ. 


    ಆದಕಾರಣ, ತಿಡಗುಂದಿಯಲ್ಲಿರುವ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವನ್ನು ಮುಖ್ಯ ತೋಟಗಾರಿಕಾ ಸಂಶೋಧನಾ  ಕೇಂದ್ರವನ್ನಾಗಿ (ಒಚಿiಟಿ ಊoಡಿಣiಛಿuಟಣuಡಿe ಖeseಚಿಡಿಛಿh Sಣಚಿಣioಟಿ) ಮೇಲ್ದರ್ಜೆಗೇರಿಸಿ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಾಂತ್ರಿಕ ಸಿಬ್ಬಂದಿ (ವಿಜ್ಞಾನಿಗಳು), ಪ್ರಯೋಗಾಲಯ, ಸಿಬ್ಬಂದಿಗಳ ವಸತಿನಿಲಯಗಳು, ವಾಹನಗಳು, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಸೌಲಭ್ಯಗಳು  ಮುಂತಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಈ ಭಾಗದ ತೋಟಗಾರಿಕೆ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಲು ಆಗ್ರಹಿಸಿ ಜಿಲ್ಲೆಯ ತೋಟಗಾರಿಕೆ ರೈತರ ಪರವಾಗಿ ಡಾ, ವಿಷ್ಣುವರ್ಧನ್, ಗೌರವಾನ್ವಿತ ಕುಲಪತಿಗಳು, ತೋ.ವಿ.ವಿ. ಬಾಗಲಕೋಟ ರವರನ್ನು ಅವರ ಕಛೇರಿಯಲ್ಲಿ ತೋ.ವಿ.ವಿ ಬಾಗಲಕೋಟದ ಸಂಶೋಧನಾ ಪರಿಷತ್ತಿನ (ಖeseಚಿಡಿಛಿh ಅouಟಿಛಿiಟ) ಸದಸ್ಯರಾದ ಡಾ. ಎಂ.ಬಿ. ಪಟ್ಟಣಶೆಟ್ಟಿ ರವರು ದಿನಾಂಕ. ೨೪.೦೬.೨೦೨೫ ರಂದು ಭೇಟಿಯಾಗಿ  ಪರವಾಗಿ ಮನವಿ ಸಲ್ಲಿಸಿದರು. 

   ಡಾ. ಎಂ. ಬಿ. ಪಟ್ಟಣಶೆಟ್ಟಿ

   ಸದಸ್ಯರು, ಸಂಶೋಧನಾ ಪರಿಷತ್ತು

  ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು