ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ ಗುರಿಯಾಗಬೇಕು :- ರಿಯಾಜ್ ಫಾರೂಖಿ

 ವಿಜಯಪುರ: ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ ಗುರಿಯಾಗಬೇಕೆಂದು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್ ರಿಯಾಜ್ ಫಾರೂಖಿ ಅವರು ವಿದ್ಯಾರ್ಥಿನಿಯರ ಸಮೂಹಕ್ಕೆ ಕರೆ ನೀಡಿದರು.

  ಅವರು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ 

ಬಿಎ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ‘ಸೇತು ತರಬೇತಿ’ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ವಿದ್ಯಾರ್ಥಿನಿಯರು ಕ್ಲಾಸರೂಮಿನಲ್ಲಿ ಮಾತ್ರ ಕಲಿಯದೇ ಹೊರಗಿನ ಪರಿಸರದಲ್ಲಿ ಕಲಿಯುವದು ಬಹಳಷ್ಟಿದೆ ಎಂದರು. ವಿದ್ಯಾರ್ಥಿನಿಯರು ವಿಚಾರ ಸಂಕಿರಣ, ಶೈಕ್ಷಣಿಕ ಸಮಾವೇಶ, ತಜ್ಞರ ಜೊತೆ ಜೊತೆ ಚರ್ಚೆ ಮುಂತಾದವುಗಳ ಮೂಲಕ ಕಲಿಯುವದು ಅತ್ಯವಶ್ಯ ಎಂದು ಒತ್ತಿ ಹೇಳಿದರುಇನ್ನೋರ್ವ ಅತಿಥಿ ಅಂಜುಮನ್ ಮಹಾವಿದ್ಯಾಲಯದ ಉರ್ದುವಿಬಾಗದ ಮುಖ್ಯಸ್ಥರಾದ ಡಾ. ಸೈಯದ ಅಲಿಮುಲ್ಲಾ ಹುಸೇನಿ ಮಾತನಾಡಿ ಶಿಕ್ಷಣದಲ್ಲಿ ಮಾನವೀಯತೆ ಮುಖ್ಯ ಎಂದು ನುಡಿದರು. ಪ್ರಾಚರ‍್ಯರಾದ ಡಾ. ಎಚ್.ಕೆ.ಯಡಹಳ್ಳಿ ಉಪಪ್ರಾಚರ‍್ಯರಾದ ಡಾ. ಹಾಜಿರಾ ಪರವೀನ, ಪ್ರೊ. ಎಂ.ಎA.ಬಾಗಲಕೋಟ, ಡಾ. ಎಲ್.ಐ.ನದಾಫ, ಪ್ರೊ. ಅಂಬ್ರೀನ್ ಸಬಾ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕು. ಆಸ್ಮಾ ನಾಗರದಿನ್ನಿ ಪವಿತ್ರ ಖುರಾನ್ ಹಾಗೂ ಕು. ಪೃಥ್ವಿ, ಕು. ವಿದ್ಯಾ ಭಗವದ್ಗೀತೆ ಪಠಿಸಿದರು. ಕು. ಸುಗ್ರಾ ಪಟೇಲ್ ಅತಿಥಿಗಳನ್ನು ಪರಿಚಯಿಸಿದರು. ಕು. ಮುಜೀಬಾ ಸರ್ವರನ್ನು ಸ್ವಾಗತಿಸಿದರು. ಕು. ಆಫ್ಸಾ ಸಾಂಗ್ಲಿಕರ ಕೊನೆಯಲ್ಲಿ ವಂದಿಸಿದರು. ಕಾಲೇಜಿನಲ್ಲಿ ಪ್ರಾಧ್ಯಾಪಕ ಹಾಗೂ ಕಚೇರಿ ಸಿಬ್ಬಂದಿ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು