ಮುಸ್ಲಿಂ ಪರ್ಸನಲ್ ಲಾವ ಬೋರ್ಡ್ ಕರ್ನಾಟಕ ಕೆರೆಯ ಹಿನ್ನೆಲೆಯಲ್ಲಿ ವಕ್ಫ್ ಕಾಯಿದೆ ವಿರೋಧಿಸಿ ಪಟ್ಡಣದ ಹಲವು ಮಸೀದಿಯಲ್ಲಿ ಜುಮ್ಮಾ ನಮಾಜದ ನಂತರ ನೂರಾರು ಯುವಕರು ಮಾನವ ಸರಪಳಿ ನಿರ್ಮಾಣ ಮಾಡಿ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.

 ಇಂಡಿ.  ಮುಸ್ಲಿಂ ಪರ್ಸನಲ್ ಲಾವ ಬೋರ್ಡ್ ಕರ್ನಾಟಕ ಕೆರೆಯ ಹಿನ್ನೆಲೆಯಲ್ಲಿ  ವಕ್ಫ್ ಕಾಯಿದೆ ವಿರೋಧಿಸಿ  ಪಟ್ಡಣದ ಹಲವು ಮಸೀದಿಯಲ್ಲಿ  ಜುಮ್ಮಾ ನಮಾಜದ ನಂತರ ನೂರಾರು ಯುವಕರು ಮಾನವ ಸರಪಳಿ ನಿರ್ಮಾಣ ಮಾಡಿ  ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು. 


ಪಟ್ಟಣದ ಮಸೀದಿಯ  ಆಡಳಿತ ಮಂಡಳಿಯ ವತಿಯಿಂದ ಮಾನವ ಸರಪಳಿ ನಿರ್ಮಾಣ ಮಾಡಿ ವಕ್ಫದ ಕಾಯಿದೆ ಹಿಂಪಡೆಯಬೇಕು ಎಂದು ಬೋರ್ಡ್ ಹಿಡಿದು  ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಮುಖಂಡರು  ಮುಸ್ಲಿಂ ಕಾನೂನಿನಂತೆ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿಯಾಗಿದೆ. ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ. ಬಿಜೆಪಿ ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಆದರೆ, ಅದರ ಯೋಜನೆಗಳು ಫಲ ನೀಡುವುದಿಲ್ಲ’ ಎಂದು ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಮರ ಮಸೀದಿಗಳು, ಈದ್ಗಾಗಳು, ಮದರಸಾಗಳು, ದರ್ಗಾಗಳು, ಖಾಂಖಾಗಳು, ಸ್ಮಶಾನಗಳು ಮತ್ತು ದತ್ತಿ ಸಂಸ್ಥೆಗಳನ್ನು ವಂಚಿಸುವ ಗುರಿಯನ್ನು ಹೊಂದಿರುವ ಒಂದು ದುಷ್ಟ ಪಿತೂರಿಯಾಗಿದೆ


"ಈ ಕಾನೂನು ಅಸಂವಿಧಾನಿಕವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ಮುಸ್ಲಿಮರ ವಿರುದ್ಧ ಪೂರ್ವಾಗ್ರಹವನ್ನು ಪ್ರತಿಬಿಂಬಿಸುತ್ತದೆ. ಈ ಕಾನೂನು ಮುಸ್ಲಿಂ ಸಮುದಾಯದ ಮೇಲೆ ಅನಗತ್ಯ ನಿರ್ಬಂಧಗಳನ್ನು ವಿಧಿಸುತ್ತದೆ ಮತ್ತು ಭವಿಷ್ಯದಲ್ಲಿ ವಕ್ಫ್ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ನಕಾರಾತ್ಮಕ ಪರಿಣಾಮಗಳು ಮತ್ತು ಸಂಘರ್ಷಕ್ಕೆ ಕಾರಣವಾಗಬಹುದು" ಎಂದು ಹೇಳಿಕೆಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯು ಅಂತಹ ಒಂದು ಉದಾಹರಣೆಯಾಗಿದೆ. ಮುಸ್ಲಿಂ ಸಮುದಾಯದ ಕಲ್ಯಾಣ ಮತ್ತು ಪ್ರಯೋಜನಕ್ಕಾಗಿ ನಮ್ಮ ಪೂರ್ವಜರು ವಕ್ಫ್ ಮಂಡಳಿಯನ್ನು ರಚಿಸಿದ್ದರು. ಇದು ವಕ್ಫ್ ಅನ್ನು ನಾಶಮಾಡಲು ಮತ್ತು ಮುಸ್ಲಿಮರನ್ನು ಗುರಿಯಾಗಿಸಲು ಮೋದಿ ಸರ್ಕಾರದ ತಂತ್ರವಾಗಿದೆ" ಎಂದು ಹೇಳಿದರು.


ವಕ್ಫ್ ಕಾಯ್ದೆ ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ಎಲ್ಲಾ ಅಲ್ಪಸಂಖ್ಯಾತರು ಮತ್ತು ನ್ಯಾಯವನ್ನು ಪ್ರೀತಿಸುವ ಎಲ್ಲಾ ಜನರ ಸಮಸ್ಯೆಯಾಗಿದೆ ಎಂದು ಹೇಳಿದರು. "ಸರ್ಕಾರವು ವಕ್ಫ್ ಕಾಯ್ದೆಯ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಇದು ಸಂವಿಧಾನದ ರಕ್ಷಣೆಗೆ ಸಂಬಂಧಿಸಿದ ವಿಷಯವಾಗಿದೆ" ಎಂದು ಅವರು ಹೇಳಿದರು.

ಧರ್ಮಗಳ ಗುರುಗಳಾದ ಸಾದ್ದುದಿನ್ ಕಾಸ್ಮಿ,  ಫೈರೋಜ್ ಬಾಗವಾನ್,  ಹಾಫೀಜ್ ಸದ್ದಾಂ ಶೇಖ್, ಶಾಕಿರ್  ಮುಲ್ಲಾ,  ಇಲಿಯಾಸ್ ಬೋರಮಣಿ,  ಅಬ್ದುಲ್ ರಶೀದ್ ಅರಬ, ಅಬ್ದುಲ್ ರೆಹಮಾನ, ಹುಮಾಯುನ್ ಬಿಲ್ವಾರ್,  ಮಮ್ಮದ್ ಗುಲ್ಬರ್ಗ,  ಪುರಸಭೆ ಸದಸ್ಯರು  ಅಸ್ಲಾಂ ಕಣೆ, ಅಯುಬ್ ಬಾಗವಾನ್, ಅಸ್ಲಾಂ ಪಟೇಲ್,  ಮುನ್ನಾ ಬಾಗವಾನ,  ಅಬ್ದುಲ್ ರಶೀದ್ ಮುಗಳಿ,  ಜಾವಿದ ಮೊಮಿನ್, ಶಕೀಲ  ಚೌದರಿ, ಮೊಮ್ಮದ್ ಫಾರೂಕ ತುರ್ಕಿ,  ರಫೀಕ್ ಇಂಡಿಕರ್, ಹಸನ ಮುಜಾವರ, ಜೈನುದ್ದೀನ್ ಬಾಗವಾನ್,  ಮನ್ಸೂರ್ ಸುಂಬಾಡ್, ರಶೀದ ಮೂಗಾಳಿ, ಶಕಿಲ್, ಮುಬಾರಕ್ ಕೋಲಾರ, ಯುನೂಸ್ ರೆವೋಕರ, ಬಿ.ಕೆ.ಅತ್ತಾರ, ಇಬ್ರಾಹಿಂ ಮಾಕಾನದಾರ, ಮಹಿಬೂಬ ಜಾಗಿರದಾರ, ಖಾಜಾ ಇಂಡಿಕರ, ಸಿಕಂದರ ಮುಲ್ಲಾ, ರಸೂಲ ಕಲವಾಂತ್ ಸೇರಿದಂತೆ ಅನೇಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು