ಸದ್ದಿಲ್ಲದೆ ಹಾಳಾಗುತ್ತಿರುವ ದೇಶದ ಆಸ್ತಿ ಎಂದರೆ ಯುವಕರು, ಹಲವಾರು ಮಾದಕ ದ್ರವ್ಯಗಳ ಸೇವನೆಯಿಂದ ಸಾವಿಗಿಡಾಗುತ್ತಿರವುದು ಕಳವಳಕಾರಿ ಸಂಗತಿ ಎಂದು ಬಿ.ಹೆಚ.ಇ ಓ ವೈ.ಎಂ.ಪೂಜಾರ ಹೇಳಿದರು.

 ಇಂಡಿ : ಸದ್ದಿಲ್ಲದೆ ಹಾಳಾಗುತ್ತಿರುವ ದೇಶದ ಆಸ್ತಿ ಎಂದರೆ ಯುವಕರು, ಹಲವಾರು ಮಾದಕ ದ್ರವ್ಯಗಳ  ಸೇವನೆಯಿಂದ ಸಾವಿಗಿಡಾಗುತ್ತಿರವುದು ಕಳವಳಕಾರಿ ಸಂಗತಿ ಎಂದು ಬಿ.ಹೆಚ.ಇ ಓ ವೈ.ಎಂ.ಪೂಜಾರ   ಹೇಳಿದರು.



ಅವರು ತಾಲೂಕಿನ ಲಚ್ಚಾಣ ಗ್ರಾಮದ  ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಮಾದಕ ದ್ರವ್ಯ ಹಾವಳಿ ನಿಯಂತ್ರಣದ ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

   ಮಗು ಅಂಗಳದಲ್ಲಿ ಆಡುತ್ತ ಅಂಗನವಾಡಿಗೆ ಹೋಗಿ ಮನೆಗೆ ಬರುತ್ತದೆ ಬೆಳವಣಿಗೆ ಆದಂತೆ ಪ್ರಾಥಮಿಕ ಶಾಲೆಗೆ ಹೋಗುವ ಮಗು, ಕಲಿಕೆಯ ಹಂತದಲ್ಲಿ ಅನುಕರಣೆಯಿಂದ ದುಶ್ಚಟಗಳಿಗೆ ದಾಸರಾಗುತ್ತಾರೆ.

ಅದೇ ರೀತಿ ಹಿರಿಯರಿಂದ, ಸ್ನೇಹಿತರಿಂದ, ಮದುವೆ ಸಮಾರಂಭ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಾಗ ಸಮೂಹದ ಒತ್ತಡ ಮಧ್ಯದಲ್ಲಿ 10 ರಿಂದ 19 ವರ್ಷದ ಮಕ್ಕಳು

 ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.



    ಅತ್ತ ಬಾಲ್ಯನು ಅಲ್ಲ, ಇತ್ತ ಯೌವ್ವನವೂ ಅಲ್ಲ, ಪ್ರೌಢಾವಸ್ಥೆಯಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ಸದ್ದಿಲ್ಲದೆ ಹಾಳಾಗುತ್ತಿರುವದರಿಂದ ಕುಟುಂಬ, ಸಮಾಜ, ಗ್ರಾಮ, ರಾಜ್ಯ, ದೇಶಕ್ಕೆ ಗಂಡಾಂತರ ಸಮಸ್ಯೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ 10 ರಿಂದ 15 ವರ್ಷದೊಳಗಿನ ಮಕ್ಕಳು  ಶೇಕಡ 15 ರಷ್ಟು ಮಕ್ಕಳು ಪ್ರತಿ ಗ್ರಾಮಗಳಲ್ಲಿ  ತಂಬಾಕು ಮೂಲ ಉತ್ಪನ್ನಗಳ ತಂಬಾಕು, ಗುಟುಕಾ, ಪಾನ್, ಬೀಡಿ, ಸಿಗರೇಟಗಳಂತಹ ಧೂಮಪಾನ ಸೇವನೆಯಿಂದ ಹಾಗೂ ಡಿಜಿಟಲ್ ಮೊಬೈಲ ಬಳಕೆಯಿಂದ ಇತ್ತ ನಗರ ಪಟ್ಟಣಗಳಲ್ಲಿ ಯುವಕರು ಪ್ರತಿಷ್ಟೆಗಾಗಿ ಡ್ರಗ್ಸು, ಇಂಜಕ್ಷನ್, ನಶೆ, ಅಫಿಮು, ಕೋಕಾ, ಗಾಂಜಾ ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ. ಕ್ಯಾನ್ಸರ್ ಪಿಡಿತ ಕಾಯಿಲೆಗಳಿಗೆ  ತುತ್ತಾಗುತ್ತಿದ್ದಾರೆ. ಕುಟುಂಬ ಮತ್ತು ದೇಶದ ಆರ್ಥಿಕ ವ್ಯವಸ್ಥೆ ಹಾಳಾಗುತ್ತಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಮೂಲಕ ಬದುಕು ರೂಪಿಸುವುದು ಅನಿವಾರ್ಯವಾಗಿದೆ.  ಶಾಲಾ ಕಾಲೇಜುಗಳಲ್ಲಿ ವಸತಿ ನಿಲಯಗಳ ಹತ್ತಿರದಲ್ಲಿರುವ, ತಂಬಾಕು ಮೂಲ ಉತ್ಪನ್ನಗಳು, ಅಂಗಡಿಗಳು, ಮಧ್ಯ ಮಾರಾಟ ಅಂಗಡಿಗಳು, ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. 


ಮಕ್ಕಳು 4ನೇ ತರಗತಿಯಿಂದ ಪದವಿ ಪೂರ್ವ ತನಕ ಮಕ್ಕಳ ಮನಸ್ಸು ಗೊಂದಲದ ಗೂಡಾಗಿರುತ್ತದೆ ಎಂದರು.

  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಫ್.ದರ್ಗಾ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯ ವಿವಾಹಗಳು ತಡೆಗಟ್ಟಲು ಸಮುದಾಯದಲ್ಲಿ ಮೂಢನಂಬಿಕೆ ತಪ್ಪು ಕಲ್ಪನೆ ಹೋಗಲಾಡಿಸಲು ಅರಿವು ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸಂಘ, ಸಂಸ್ಥೆಗಳು ಸಹಕಾರ ಮಾಡಬೇಕು ಎಂದರು.

   ಶಾಲೆಯ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಪನ್ಯಾಶಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು