ನಾದ ಪಂಚಾಯತದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ.

 ನಾದ ಪಂಚಾಯತದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ. 



  ಇಂಡಿ-  ತಾಲೂಕಿನ  ನಾದ ಕೆಡಿ ಗ್ರಾಮಪಂಚಾಯತದಲ್ಲಿ ಇಂದು 79ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.ಡಾ.ಬಿ.ಆರ್.ಅಂಬೇಡ್ಕರ, ಮಹಾತ್ಮ ಗಾಂಧೀಜಿ,ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಪೈಗಂಬರ್ ದೇಸಾಯಿ,ಶರಣಪ್ಪ ತಾವರಖೇಡ,ಹಾಗೂ ಮುತ್ತಪ್ಪ ಸಿನ್ನೂರ ಇವರಿಂದ ಪೂಜೆ ನೇರವೇರಿಸ್ಪಟ್ಟಿತು.ನಂತರ ಗ್ರಾ.ಪಂ.ಅಧ್ಯಕ್ಷರಾದ ಶ್ರೀ ಸಿಧರಾಯಗೌಡ ಐರೋಡಗಿ ಇವರು ಧ್ವಜಾರೋಹಣ ಮಾಡಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಲೋಣಿ ಇವರು ರಾಷ್ಟ್ರದ ಸ್ವಚ್ಚತಾ ಅಭಿಯಾನ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ನಂತರ ಸಭೆಯನ್ನುದ್ದೇಶಿಸಿ ಸ್ವಾತಂತ್ರ್ಯ ಎಂದರೆ ಕೇವಲ ಹೊರಗಿನ ಆಳ್ವಿಕೆಯಿಂದ ಮುಕ್ತಿಯಾಗುವುದಿಲ್ಲ.ಅದು ನಮ್ಮ ಆಲೋಚನೆ,ನಂಬಿಕೆ,ಮಾತು ಮತ್ತು ಕ್ರೀಯೆಯಲ್ಲಿ ಸ್ವತಂತ್ರರಾಗಿರುವುದನ್ನು ಸೂಚಿಸುತ್ತದೆ ಎಂದು ಹೇಳಿದರು.ಗ್ರಾ.ಪಂ.ಅಧ್ಯಕ್ಷರಾದ ಶ್ರೀ ಸಿಧರಾಯಗೌಡ ಐರೋಡಗಿಯವರುಮಾತನಾಡಿ-ಪ್ರತಿವಷ೯ಅಗಸ್ಟ್15ರಂದು ನಾವು ಈ ದಿನವನ್ನು ಆಚರಿಸುತ್ತೇವೆ .1947ಅಗಸ್ಟ್ 15ರಂದು ದೀಘ೯ಕಾಲದ ಹೋರಾಟ ಮತ್ತು ಅನೇಕ ಸ್ವಾತಂತ್ರ್ಯ ಸೈನಿಕರ ತ್ಯಾಗದಿಂದ ಭಾರತವು ಬ್ರೀಟಿಷರ ಆಳ್ವಿಕೆಯಿಂದ ಮುಕ್ತವಾಯಿತು.ಆ ದಿನದಿಂದ ಪ್ರತಿ ಭಾರತೀಯನು ತಲೆಯನ್ನು ಎತ್ತಿಕೊಂಡು ,ಸ್ವಾಭಿಮಾನದಿಂದ ಬದುಕಲು ಆರಂಭಿಸಿದನು.ಅಂತಹ ಸ್ವಾಭಿಮಾನ ಭಾರತೀಯರಾದ ನಾವೆಲ್ಲರೂ ಉಳಿಸಿ,ಬೆಳೆಸಿಕೊಂಡು ಹೋಗುವುದು ನಮ್ಮ-ನಿಮ್ಮೆಲ್ಲರ ಕತ೯ವ್ಯ ಎಂದು ಹೇಳಿದರು.ಗ್ರಾ.ಪಂ.ಸದಸ್ಯರಾದ ಪರಶುರಾಮ ಬಾಸಗಿಯವರು ಮಾತನಾಡಿ--ಸ್ವಾತಂತ್ರ್ಯ ಪಡೆಯುವುದು ಸುಲಭವಾದುದ್ದಲ್ಲ,ಹಲವು ತಲೆಮಾರುಗಳು ತಮ್ಮ ಜೀವನ ,ಕುಟುಂಬ ಸುಖ ಸೌಕರ್ಯಗಳನ್ನು ಬಲಿದಾನ ಮಾಡಿದರು.ಮಹಾತ್ಮಾ ಗಾಂಧೀಜಿ,ನೇಹರೂಜೀ ಸುಭಾಷಚಂದ್ರ ಬೋಸ್, ಸಂಗೋಳ್ಳಿ ರಾಯಣ್ಣ,ಇತರೆ ಅನೇಕ ಹೋರಿಟಗಾರರು ತಮ್ಮ ರಕ್ತ ಮತ್ತು ಪ್ರಾಣವನ್ನು ದೇಶಕ್ಕಾಗಿ ಅಪಿ೯ಸಿದರು ಅವರ ತ್ಯಾಗವೇ ಇಂದು ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಎಂದು ಹೇಳಿದರು.ಈಸಂದರ್ಭದಲ್ಲಿ ಗ್ರಾಮಪಂಚಾಯತ ಕಾಯ೯ದಶಿ೯ಗಳಾದ  ಶ್ರೀ ಸೋಮಣ್ಣ ತೊಂಟಾಪುರ ಕರವಸೂಲಿಗಾರರಾದ ಶ್ರೀಶೈಲ ಸರೂರ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು,ಶಿಕ್ಷಕರು ,ಅಂಗನವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು