ಉಜ್ವಲ ಸೇವಾ ಪಯಣದ ಕೊನೆಯ ಹಂತಕ್ಕೆ ಬಂದಿರುವು ನಿಮ್ಮ ಸೇವೆಯ ಪ್ರತಿ ಕ್ಷಣವೂ ಬೆಳ್ಳಿ ಪುಟಗಳಾಗಿ ಉಳಿದಿವೆ ಎಂದು ಶಿಕ್ಷಕರಾದ ಅಲಿಶೇರ ಮುಲ್ಲಾ
ಚಡಚಣ. ಉಜ್ವಲ ಸೇವಾ ಪಯಣದ ಕೊನೆಯ ಹಂತಕ್ಕೆ ಬಂದಿರುವು ನಿಮ್ಮ ಸೇವೆಯ ಪ್ರತಿ ಕ್ಷಣವೂ ಬೆಳ್ಳಿ ಪುಟಗಳಾಗಿ ಉಳಿದಿವೆ ಎಂದು ಶಿಕ್ಷಕರಾದ ಅಲಿಶೇರ ಮುಲ್ಲಾ ಹೇಳಿದರು.
ಪಟ್ಟಣದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಲಕ್ಷ್ಮಿ ನಗರದಲ್ಲಿ ಕನ್ನಡ ಶಿಕ್ಷಕಿಯಾಗಿ ತಮ್ಮ ಉಜ್ವಲ ಸೇವೆಯನ್ನು ಸಲ್ಲಿಸಿದ ಶ್ರೀಮತಿ ಸುವರ್ಣ ಬಿ. ತೇಲಿ ಅವರು ದಿನಾಂಕ 31-07-2025 ರಂದು ವಯೋನಿವೃತ್ತಿ ಹೊಂದಿರುವ ಅವರಿಗೆ ಬಿಳಕೊಡುವ ಸಮಾರಂಭದಲ್ಲಿ ಮಾತನಾಡಿದರು.
ತಮ್ಮ ಮಿತಭಾಷಿತ್ವ, ಸರಳತೆಯ ಜೀವನಶೈಲಿ, ಶಿಸ್ತುಪರತೆ ಮತ್ತು ಶಿಕ್ಷಕಿಯಾಗಿ ತೋರಿದ ಬದ್ಧತೆಯು ನಮಗೆ ಸದಾ ಮಾದರಿಯಾಗಿದೆ. ನಾನೂ ಮತ್ತು ನನ್ನ ಉರ್ದು ಶಾಲೆಯ ಎಲ್ಲ ವಿದ್ಯಾರ್ಥಿಗಳು ತಮ್ಮ ಸೇವೆಯಿಂದ, ಮಾರ್ಗದರ್ಶನದಿಂದ ಮತ್ತು ಪ್ರೇರಣೆಯಿಂದ ಬಹಳಷ್ಟು ಕಲಿತಿದ್ದೇವೆ.
ನಿಮ್ಮ ನಿವೃತ್ತಿ ಜೀವನವು ಸುಖಶಾಂತಿಯಿಂದ ಕೂಡಿರಲಿ. ದೇವರು ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡಲಿ ಎಂಬುದು ನಮ್ಮ ಹಾರೈಕೆ. ನಿಮ್ಮ ಸೇವೆ, ಸ್ಮೃತಿಗಳು ಮತ್ತು ಪ್ರೀತಿ ನಮ್ಮೊಂದಿಗೆ ಸದಾ ಇರುತ್ತವೆ ಎಂದರು.
ಮುಖ್ಯಗುರು ಮಾತೆ ಶೈನಾಜ್ ಬಾಬಾನಗರ್ ಅಧ್ಯಕ್ಷತೆ ವಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶಿರಾಜ ನದಾಫ, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ದಸ್ತಗೀರಸಾಬ ನದಾಫ, ಸದ್ಯಸರು, ಗೈಬಿಸಾಬ ಬುಕಾರಿ, ಫಿರೋಜಖಾನ ಗೋಡಿಹಾಳ, ಮುಬೀನಾ ಶೇಖ, ಮೈರುನಬಿ, ನದಾಫ, ನೂರಜಹಾನ, ಸಾವಳಸಂಗ ಇತರರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ