ಸಮಾಜದ ಕಟ್ಟ ಕಡೆಯ ಮಹಿಳೆ ಕೂಡಾ ಧೈರ್ಯದಿಂದ ತಮ್ಮ ಜೀವನ ಬದುಕಲು ಬೇಕಾಗಿರುವ ಬೆಂಬಲ ನೀಡುವ ಧ್ಯೇಯದೊಂದಿಗೆ ಆಧ್ಯಾ ಟ್ರಸ್ಟ ಪ್ರಾರಂಭ

 ವಿಜಯಪುರ   ಆಧ್ಯಾ ಟ್ರಸ್ಟ ಎಂಬ  ಸಂಘಪ್ರಾರಂಭಿಸಲಾಯಿತು.ಸಂಘದ ಅಧ್ಯಕ್ಷರಾದ ಸೌ.ಪಲ್ಲವಿ ಶಂಕರರಾವ್ ಜೋಶಿ (ಅಜರೇಕರ) ಅವರು ಮಾತನಾಡಿ ಮಹಿಳೆ ಅಂದರೆ ಶಕ್ತಿ, ಸತ್ಯಯುಗದಿಂದ ಪ್ರಸ್ತುತ ಕಲಿಯುವವರೆಗೂ  ಮಹಿಳೆಯರು ಸಮಾಜದ ಏಳ್ಗೆಯಲ್ಲಿ ತಮ್ಮ ಸಹಭಾಗಿತ್ವ ತೋರಿಸುತ್ತಾ ಬಂದಿದ್ದಾರೆ. 


 ಸಮಾಜದ ಕಟ್ಟ ಕಡೆಯ ಮಹಿಳೆ ಕೂಡಾ ಧೈರ್ಯದಿಂದ ತಮ್ಮ ಜೀವನ ಬದುಕಲು ಬೇಕಾಗಿರುವ ಬೆಂಬಲ ನೀಡುವ ಧ್ಯೇಯದೊಂದಿಗೆ ಆಧ್ಯಾ ಟ್ರಸ್ಟ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು. ಜಯಶ್ರೀ ಕೊಡೇಕಲ್ , ಸವಿತಾ ಗಲಗಲಿ,  ಜಯಶ್ರೀ ಕುಲಕರ್ಣಿ ಅವರ ಸಂಘಟನಾ ಚಾತುರ್ಯ ಮತ್ತು ಮಹಿಳೆಯರ ಬಗ್ಗೆ ಇರುವ ಕಾಳಜಿ ನೋಡಿ ಕೆಲವೋಮ್ಮೆ ಆಶ್ಚರ್ಯವಾಗುತ್ತದೆ. ಮನೆಯ ಕೆಲಸದ ಜೊತೆ  ಸಮಾಜಮುಖಿ ಕೆಲಸದಲ್ಲಿಯೂ ಸಹ ಮುಂಚೂಣಿಯಲ್ಲಿರುವುದು ಶ್ಲಾಘನೀಯ. ಅನಿವಾರ್ಯ ಕಾರಣಗಳಿಂದ ಈ ಕಾರ್ಯಕ್ರಮದಲ್ಲಿ ಗೈರಾಗಿದ್ದ ಖ್ಯಾತ ವೈದರಾದ ಡಾ. ವಿದ್ಯಾ ತೊಬ್ಬಿ ಅವರು ನನಗೆ ಕರೆ ಮಾಡಿ ಆದ್ಯಾ ಟ್ರಸ್ಟ ಜೊತೆ ಕೈ ಜೋಡಿಸಿ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

 


ಸೌ ಶೈಲಜಾ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ ಪಲ್ಲವಿ ಜೋಶಿ (ಮಾತಾಜಿ) ಅವರು ಮಹಿಳೆಯರ ಉನ್ನತಿಯ ಧ್ಯೇಯದೊಂದಿಗೆ ಕೆಲಸ ಪ್ರಾರಂಭಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ಮಹಿಳೆಯರು ಕೂಡಾ ಸಂಘಟನೆ ಮಾಡಬಹುದು ಯಾವುದೇ ಭೇದ ಭಾವ ಇಲ್ಲದೆ ಒಂದಾಗಿ ಸಮಾಜದ ಏಳಿಗೆಗಾಗಿ ಶ್ರಮಿಸಬಹುದು ಎಂದು ವಿವರಿಸಿದರು.


 

ಮಹಾನಗರ ಪಾಲಿಕೆ ಸದಸ್ಯರಾದ ಸೌ ಸ್ವಪ್ನಾ ಕಣಮುಚನಾಳ  ಮಾತನಾಡಿ, ಸ್ತ್ರೀ ಶಕ್ತಿ - ಸ್ತ್ರೀ ಸಬಲೀಕರಣ ಎಂದು ಭಾಷಣ ಮಾಡುವ ಸಾಕಷ್ಟು ಜನರನ್ನು ನೋಡಿದ್ದೇವೆ, ಆದರೆ ಮಾತಾಜಿ ಅವರು ಭಾಷಣ ಮಾಡದೆ  ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಆಧ್ಯಾತ್ಮಿಕ ಹಾಗೂ  ಸಾಮಾಜಿಕ ಕಾರ್ಯಗಳಿಗಾಗಿ ಪ್ರಾರಂಭಿಸಿದ ಆದ್ಯಾ ಟ್ರಸ್ಟಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು. ಸೀಮಾ ದೇಸಾಯಿ ಹಾಗೂ ಪೂಜಾ ಪಾಟೀಲ ಕಾರ್ಯಕ್ರಮದ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಮಂಗಲಾ ಪಾಟೀಲ್ ಯತ್ನಾಳ್, ಡಾ. ಜಯಶ್ರೀ ಮುಂಡೆವಾಡಿ,  ಸವಿತಾ ಜಾಲವಾದಿ, ನಿವೇದಿತಾ ಕುಲಕರ್ಣಿ, ರಾಧಿಕಾ ಗಲಗಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು