ಒಂದು ತಿಂಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ ವೃತ್ತ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲ ಎಂದರೆ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮುತ್ತಿಗೆ ಹಾಕಲಾಗುವುದು.
ಇಂಡಿ. ಒಂದು ತಿಂಗಳೊಳಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ವತ್ತದ ಕಾಮಗಾರಿ ಹಾಗೂ ಬುದ್ಧ ವಿಹಾರ ಕಾಮಗಾರಿ ಪ್ರಾರಂಭಿಸಬೇಕು ಎಂದು ನಾಗೇಶ ತಳಕೇರಿ ಆಗ್ರಹಿಸಿದ್ದಾರೆ.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ವೃತ್ತ ಹಾಗೂ ಬುದ್ಧ ವಿಹಾರ ಕಾಮಗಾರಿಯನ್ನು ಒಂದು ತಿಂಗಳ ಒಳಗೆ ಪ್ರಾರಂಭಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್.ಪಿ.ಐ.) ಪಕ್ಷದ ಅಧ್ಯಕ್ಷ ನಾಗೇಶ ತಳಕೇರಿ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಶಾಸಕರು ಹಾಗೂ ಅಧಿಕಾರಿಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಅಮರ್ ಇಂಟರ್ನ್ಯಾಷನಲ್ ಹೋಟೇಲ್‌ನಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿ ಬಾರಿಯೂ ನಮ್ಮ ದಲಿತ ಸಮಾಜಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಅಭಿವೃದ್ಧಿ ಯೋಜನೆಗಳಲ್ಲಿ ನಮ್ಮ ಹಕ್ಕಿನ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ನಮಗೆ ಕೇವಲ ಚುನಾವಣೆಯ ವೇಳೆಯಲ್ಲಿ ಮತ ಕೇಳುವುದಕ್ಕಾಗಿ ಮಾತ್ರ ನೆನಪಿಸುತ್ತದೆ, ಆದರೆ ನಮ್ಮ ಬೇಡಿಕೆಗಳನ್ನು ನಿರಂತರವಾಗಿ ಕಡೆಗಣಿಸಿದೆ,” ಎಂದು ಆರೋಪಿಸಿದರು.
ಸಮಾಜದ ಹಿತಕ್ಕಾಗಿ ಹೋರಾಟ, “ಅಂಬೇಡ್ಕರ್ ವೃತ್ತ ಹಾಗೂ ಬುದ್ಧ ವಿಹಾರ ನಿರ್ಮಾಣ ನಮ್ಮ ಸಮುದಾಯದ ಆತ್ಮಗೌರವದ ಪ್ರಶ್ನೆ. ನಾವು ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಸಂಬಂಧಿಸಿದವರನ್ನು ಕೇಳಿದರು ಉಡಾಪೆಯ ಉತ್ತರ ನೀಡುತ್ತಾ ಬಂದಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಕೆಲಸ ಪ್ರಾರಂಭಿಸಬೇಕು,” ಎಂದು ಒತ್ತಾಯಿಸಿದರು.
“ಒಂದು ತಿಂಗಳ ಗಡುವು ಕೊಟ್ಟಿದ್ದೇವೆ. ಅದರೊಳಗೆ ಕಾಮಗಾರಿ ಪ್ರಾರಂಭವಾಗದಿದ್ದರೆ, ಶಾಸಕರ ಮನೆಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ, ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಹೋರಾಟಕ್ಕೆ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳು, ವಿವಿಧ ಎಲ್ಲಾ ಸಂಘಟನೆ ಸೇರಿ ಪ್ರತಿಭಟನೆ ಮಾಡಲಾಗುವುದು.
ಈ ಸಂದರ್ಭದಲ್ಲಿ ವಿರುಪಾಕ್ಷ ಕಾಳೆ, ಅಂಬೇಡ್ಕರ್ ಕಾಂಬಳೆ, ಗೌತಮ ಬನಸೋಡೆ, ಬಾಬು ಕಾಂಬಳೆ, ಪರಸುರಾಮ ಕಾಂಬಳೆ, ಮರೆಪ್ಪ ಮೇಲಿನಕೆರಿ, ಆಕಾಶ ಝಳಕಿ, ಹುಚ್ಚಪ್ಪ ಕಾಳೆ, ಇಬ್ರಾಹಿಮ್ ಮಸಿಬನಾಳ, ನಿತೀನ ಬನಸೋಡೆ, ಮಲಕಪ್ಪ ತಳಕೇರಿ, ಪರಶುರಾಮ ಎಂಟಮಾಣ, ಸೇರಿದಂತೆ ಇತರರು ಇದ್ದರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ