ದೇಶದ ರಕ್ಷಣೆಯಲ್ಲಿ ಶೌರ್ಯ ಮೆರೆದ ಸೈನಿಕ ತೌಫೀಕ್ ಯಾಳಗಿಗೆ ಇಂಡಿ ಪಟ್ಟಣದಲ್ಲಿ ವಿಜೃಂಭಣೆಯಿಂದ ಸ್ವಾಗತ

 ದೇಶದ ರಕ್ಷಣೆಯಲ್ಲಿ ಶೌರ್ಯ ಮೆರೆದ ಸೈನಿಕ ತೌಫೀಕ್ ಯಾಳಗಿಗೆ ಇಂಡಿ ಪಟ್ಟಣದಲ್ಲಿ ವಿಜೃಂಭಣೆಯಿಂದ ಸ್ವಾಗತ


ಇಂಡಿ: ನಮ್ಮ ದೇಶದ ಪ್ರಧಾನಮಂತ್ರಿ ಹಾಗು ಸಾಮಾನ್ಯ ಜನರು ಇಂದು ನೆಮ್ಮದಿಯ ನಿದ್ದೆ ಮಾಡುತ್ತಿರುವುದು, ನಮ್ಮ ಹೆಮ್ಮೆಯ ಸೈನಿಕರ ನಿದ್ದೆಇಲ್ಲದೆ ಸೇವೆಯಿಂದ ಮಾತ್ರ ಸಾಧ್ಯವಾಗಿದೆ” ಎಂದು ಮೌಲಾನಾ ಶಾಕೀರ ಹುಸೇನ್ ಕಾಸ್ಮಿ ಹೇಳಿದರು. ಅವರು ಇಂಡಿ ಪಟ್ಟಣದಲ್ಲಿ ನಡೆದ ಸೈನಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


16 ವರ್ಷಗಳ ಕಾಲ ಭಾರತ ಸೇನೆಯಲ್ಲಿರುವು ಶ್ರೇಷ್ಠ ಸೇವೆ ಸಲ್ಲಿಸಿದ ಪ್ರತಿಯೊಂದು ಮೂಲೆಗೂ ತನ್ನ ಕರ್ತವ್ಯದ ಛಾಪು ಬೀರಿ, ಇದೀಗ ನಿವೃತ್ತಿಯಾಗಿರುವ ತೌಫೀಕ್ ಲಡ್ಲೆಮಶಾಕ್ ಯಾಳಗಿ ಅವರು ಇಂದು ತಮ್ಮ ತಾಯ್ನಾಡಿಗೆ ಹಿಂದಿರುಗಿದ್ದಾರೆ. ಈ ಸುದಿನವನ್ನು ಸಂಭ್ರಮದವಾಗಿ ಆಚರಿಸಲು ಇಂಡಿ ಪಟ್ಟಣದ ವಿವಿಧ ಸಂಘಟನೆಗಳು ಸಹಕರಿಸಿ, ಸೈನಿಕನಿಗೆ ಗೌರವಪೂರ್ವಕ ಸ್ವಾಗತ ಕಾರ್ಯಕ್ರಮ ಆಯೋಜಿಸಿತು.


ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ರ್ಯಾಲಿ ನಡೆಸಿ, ಸೈನಿಕ ತೌಫೀಕ್  ಯಾಳಗಿಯವರನ್ನು ಮೆರವಣಿಗೆ ಮಾಡಲಾಯಿತು. ಮಾಜಿ ಸೈನಿಕರು, , ಸಾರ್ವಜನಿಕರು, ಸಂಘಟನೆಗಳ ಸದಸ್ಯರು, ಯುವಕರು ಮತ್ತು ಹಿರಿಯರು ಪಾಲ್ಗೊಂಡು ದೇಶಭಕ್ತಿ ಘೋಷಣೆಗಳಿಂದ ಪೂರ್ಣಗೊಂಡ ಏಕಮಾತ್ರ ವಾತಾವರಣ ನಿರ್ಮಾಣವಾಯಿತು.


ಮೆರವಣಿಗೆ ನಂತರ ಅಮರ್ ಫಂಕ್ಷನ್ ಹಾಲ್‌ನಲ್ಲಿ ಸನ್ಮಾನ ಸಮಾರಂಭ ನಡೆಯಿತು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಮುದಾಯದ ಹಿರಿಯರು, ರಾಜಕೀಯ ನಾಯಕರು ಹಾಗೂ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೌಫೀಕ್ ಯಾಳಗಿಯವರಿಗೆ ಸ್ಮೃತಿಪತಕ, ಪುಷ್ಪಮಾಲೆ ಹಾಗೂ ಗೌರವ ಪತ್ರ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೈನಿಕ ತೌಫೀಕ್ ಯಾಳಗಿ, “ಭಾರತ ಮಣ್ಣಿಗೆ ನಾನು ಎಲ್ಲವನ್ನೂ ಕೊಡಲು ಸಿದ್ಧನಾಗಿದ್ದೆ. 16 ವರ್ಷಗಳ ಕಾಲ ನನ್ನ ದೇಶದ ಗಡಿಗಳನ್ನು ರಕ್ಷಿಸುವ ಗೌರವ ನನಗೆ ಸಿಕ್ಕಿದ್ದು ಹೆಮ್ಮೆಪಡುವ ವಿಷಯ. ಈಗ ತಾಯ್ನಾಡಿಗೆ ಹಿಂದಿರುಗಿರುವಾಗ ನಿಮ್ಮ ಈ ಪ್ರೀತಿಯಿಂದ ತುಂಬಿ ಹೋಗಿದ್ದೇನೆ” ಎಂದು ಭಾವುಕ ಮಾತುಗಳ ಮೂಲಕ ಎಲ್ಲರ ಮನಗೆದ್ದರು.

ಈ ಸಂದರ್ಭದಲ್ಲಿ ಸಾನಿದ್ಯವನ್ನು ರಾಚೋಡೆಶ್ವರ ಸ್ವಾಮಿ ತಡವಲಗಾ ಇವರು ವಹಿಸಿ ಮಾತನಾಡಿದ ಅವರು ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ. ಮಳೆ–ಗಾಳಿ ಶೀತವನ್ನು ಲೆಕ್ಕಿಸದೇ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನರು ಎಂದು. ಯುವಕರು ದೇಶಸೇವೆ ಸಲ್ಲಿಸಲು ಮುಂದೆ ಬರಬೇಕು ಇದು ಹೆಮ್ಮೆಯ ಕೆಲಸ‘ ಎಂದ ಹೇಳಿದರು


ಪುರಸಭೆ ಅಧ್ಯಕ್ಷರಾದ ಲಿಂಬಾಜಿ ರಾಠೋಡ, ಪುರಸಭೆ ಉಪಾಧ್ಯಕ್ಷ ಜಹಾಂಗೀರ್ ಸೌದಾಗಾರ,  ಮೌಲಾನಾ ಶಾಕೀರ ಹುಸೇನ್ ಕಾಸ್ಮಿ, ಮೌಲಾನಾ ಸಾದುದ್ದಿನ ಕಾಸ್ಮಿ, ಮುಫ್ತಿ ಅಬ್ದುಲ್ ರಹಮಾನ್‌ ಅರಬ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ, ಶಬ್ಬಿರ ಖಾಜಿ, ಅಸ್ಲಂ ಕಡನಣಿ,  ಅನೀಲಗೌಡ ಬಿರಾದಾರ, ಯಮನಾಜಿ ಸಾಳೊಂಕೆ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷರು ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ,  ಮೌಲಾನಾ ಉಮಾರ ಜಾಮಯಿ, ಮೌಲಾನಾ ಮುಕ್ತಾರ ಉಮರಿ, ಅರಷದ ಹಾಫಿಜಸಾಬ, ಜಹಾಂಗೀರ್ ದೇಸಾಯಿ, ಮಸ್ತಾಕ ಇಂಡಿಕರ, ಶಿವು ಬಿಸನಾಳ, ರಯಿಸ್ ಆಸ್ಟೇಕರ, ಮಜಿದ ಸೌದಾಗರ, ಶಿಕ್ಷಕ ಮಹಿಬೂಬ ಲ್ಕಡಹಾರ, ಹನಿಫ್ ಜಾಗೀರ, ಇರಶಾದ ಬೋರಾಮಣಿ, ಪೋಲಿಸ್ ನವಾಜ್ ಬಿರಾದಾರ, ಪೋಲಿಸ್ ಮಹೇಶ ಕೂಳಿ,ನವಾಜ ಮಕಾಂದಾರ, ರಿಯಾಜ ಕನ್ನೂಳಿ,  ಶಫೀಕ್ ರೂಗಿ, ಸೇರಿದಂತೆ ಅನೇಕರು ಇದ್ದರೂ. ಮುನ್ನಾ ಡಾಂಗೆ ಸ್ವಾಗತ ಹಾಗೂ ವಂದನಾರಪಣೆ ಮಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು