ಇಂಡಿ ಪುರಸಭೆಗೆ ನಗರಸಭೆ ಯಾಗಿ ಮೇಲ್ದರ್ಜೆಯಾಗಿದ್ದು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ರವರಿಗ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಭಿನಂದನೆ ಹೇಳಿದರು.
ಇಂಡಿ ಪುರಸಭೆಗೆ ನಗರಸಭೆ ಯಾಗಿ ಮೇಲ್ದರ್ಜೆಯಾಗಿದ್ದು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ರವರಿಗ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಭಿನಂದನೆ ಹೇಳಿದರು.
ಇಂಡಿ: ಇಂಡಿ ಪುರಸಭೆಯನ್ನು ನಗರಸಭೆ ಹುದ್ದೆಗೆ ಮೇಲ್ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಇಮ್ರಾನ ಮುಜಾವರ ಅವರು ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ. ರವರಿಗೆ ಅಭಿನಂದನೆ ಅರ್ಪಿಸಿದ್ದಾರೆ.
ಇಮ್ರಾನ ಮುಜಾವರ ಅವರು ಮಾತನಾಡಿ “ಇಂಡಿ ತಾಲ್ಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಾಲಾ, ಕಾಲೇಜುಗಳ ಸ್ಥಾಪನೆ, ಇತ್ತೀಚಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂಡಿ ಕ್ಷೇತ್ರಕ್ಕೆ ಕರೆಸಿ ಜಿಟಿಟಿಸಿ ಕಾಲೇಜ್, ನೀರಾವರಿ ಯೋಜನೆಗಳ ಜಾರಿಗೆ ಮೂಲಕ ರೈತರಿಗೆ ಶಾಶ್ವತ ನೀರಿನ ಸೌಲಭ್ಯ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳು, ಆರೋಗ್ಯ ಕೇಂದ್ರಗಳ ಬಲವರ್ಧನೆ ಹಾಗೂ ಮಾರುಕಟ್ಟೆ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ ಅನೇಕ ಪ್ರಮುಖ ಯೋಜನೆಗಳನ್ನು ನಮ್ಮ ಶಾಸಕರು ಯಶಸ್ವಿಯಾಗಿ ಮಾಡಿದ್ದಾರೆ. ಈ ಕಾರ್ಯಗಳಿಂದ ಇಂಡಿ ಭವಿಷ್ಯದ ಜಿಲ್ಲೆ ಆಗುವ ಅರ್ಹತೆಯನ್ನು ಸಂಪಾದಿಸಿದೆ.”
ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನಿರ್ಧಾರದಿಂದ ಇಂಡಿ ನಗರದ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ. ಹೆಚ್ಚಿನ ಅನುದಾನ, ಸುಧಾರಿತ ನಗರ ಸೇವೆಗಳು ಹಾಗೂ ಯೋಜನಾ ಸೌಲಭ್ಯಗಳು ದೊರಕುವ ಸಾಧ್ಯತೆ ಇದೆ.
ಸ್ಥಳೀಯರು ಹೇಳುವಂತೆ, ಈ ನಿರ್ಧಾರವು ಇಂಡಿ ತಾಲೂಕಿನ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ್ದು, ಭವಿಷ್ಯದ ಜಿಲ್ಲೆ ಎಂಬ ಕನಸಿಗೆ ಇನ್ನೊಂದು ಹೆಜ್ಜೆ ಮುನ್ನಡೆ ಸಿಕ್ಕಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ