ಒಂದು ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಆ ಭಾಗದಲ್ಲಿ ಶೈಕ್ಷಣಿಕವಾಗಿ ಬೆಳವಣಿಗೆಯಾದಾಗ ಮಾತ್ರ ಎಲ್ಲ ವಿಧದಲ್ಲು ಅಭಿವೃದ್ದಿ ಹೊಂದಲು ಸಾಧ್ಯ.
ಇಂಡಿ: ಒಂದು ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಆ ಭಾಗದಲ್ಲಿ ಶೈಕ್ಷಣಿಕವಾಗಿ ಬೆಳವಣಿಗೆಯಾದಾಗ ಮಾತ್ರ ಎಲ್ಲ ವಿಧದಲ್ಲು ಅಭಿವೃದ್ದಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೈಕ್ಷಣಿಕ ನೀತಿ ಕೂಡಾ ಬವದಲಾವಣೆ ಮಾಡುವುದು ಅತಿ ಅವಶ್ಯಕವಾಗಿದೆ. ನಾವು ಮುಂದಿನ ದಿನಮಾನಗಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಸೂಪರ ಪವರ್ ದೇಶವಾಗಿ ಹೊರಹೊಮ್ಮಲಿದ್ದು ಆ ದೀಸೆಯಲ್ಲಿ ಸಂಕಲ್ಪ ಮಾಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೭೯ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ನಾವು ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ನಮ್ಮ ಪೂರ್ವಜರನ್ನು ಸ್ಮರಿಸಿ ಗೌರವದಿಂದ ಕಾಣುವ ದಿನವಾಗಿದ್ದು ಭವ್ಯ ಭಾರತ ದೇಶ ಸಂಸ್ಕೃತಿ ಆಚಾರ ವಿಚಾರದಲ್ಲಿ ಶ್ರೀಮಂತವಾಗಿದೆ. ಸ್ವಾತಂತ್ರö್ಯಕ್ಕಾಗಿ ಅನೇಕ ಜನ ತ್ಯಾಗ ಬಲಿದಾನ ಮಾಡಿದ್ದರ ಫಲವಾಗಿ ಇಂದು ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತ ದೇಶವನ್ನು ಸ್ವತಂತ್ರ ರಾಷ್ಟçವಾಗಿ ಅಭಿವೃದ್ದಿಯತ್ತ ಸಾಗುತ್ತಿದೆ. ಸರ್ವ ವಿಧದಲ್ಲು ಸರ್ವ ಶ್ರೇಷ್ಠ ಭಾರತ ದೇಶÀವಾಗಬೇಕು ಎಂಬ ಅಂಬೇಡಕರ ಮತ್ತು ಗಾಂಧೀಜಿಯವರ ಕನಸಾಗಿದ್ದು ಅದನ್ನು ನನಸಾಗಿಸಲು ಎಲ್ಲರ ಪ್ರಯತ್ನ ಅಗತ್ಯವಾಗಿದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ತಹಸೀಲ್ದಾರ ಬಿ.ಎಸ್.ಕಡಕಬಾವಿ ಸ್ವಾಗತಿಸಿದರು.
ವೇದಿಕೆಯ ಮೇಲೆ ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಾಲೂಕಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ತಾಪಂ ಇಒ ಡಾ||ಭೀಮಾಶಂಕರ ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಜಮಾದಾರ ಇದ್ದರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಪೋಲಿಸ, ಹೋಮಗಾರ್ಡ್ಸ, ಎನ್.ಸಿ.ಸಿ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿ ತಂಡಗಳಿAದ ಗೌರವ ವಂದನೆ ಸ್ವಿಕರಿಸಿದರು.
ಈ ಸಂದರ್ಭದಲ್ಲಿ ರಾಷ್ಟçಪತಿ ಪ್ರಶಸ್ತಿಗೆ ಭಾಜನರಾಗಿರುವ ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್ ಇವರಿಗೆ ತಾಲೂಕಾ ಆಡಳಿತದಿಂದ ಸನ್ಮಾನಿಸಿ ಗೌರಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ಹಾಗೂ ಹೈನುಗಾರಿಕೆ, ಕುರಿ ಸಾಕಾಣಿಕೆ ಕಸುಬಿನಲ್ಲಿ ಯಶಶ್ವಿಯಾದ ಇತರರ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪಿಡಬ್ಲುಡಿ ಇಲಾಖೆಯ ದಯಾನಂದ ಮಠ, ತೊಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಕೃಷಿ ಇಲಾಖೆ ಮಹಾದೇವಪ್ಪ ಏವೂರ, ಹೇಸ್ಕಾಂ ಅಧಿಕಾರಿ ಮೆಂಡೆಗಾರ, ಜಿಪಂ ಅಧಿಕಾರಿ ಶಿವಾಜಿ ಬನಸೋಡೆ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಬಿಸಿಎಮ್ ಅಧಿಕಾರಿ ಗದ್ಯಾಳ, ಪಶು ಅಧಿಕಾರಿ ಅಡಕಿ, ನೌಕರರ ಸಂಘದ ಅಧ್ಯಕ್ಷ ಬಿ.ಎ.ರಾವೂರ, ಕಂದಾಯ ನೀರಿಕ್ಷಕರಾದ ಪಂಡಿತ ಕೊಡಹೊನ್ನ, ಗುನ್ನಾಪೂರ, ಭೀಮಣ್ಣ ಕವಲಗಿ, ಜಾವಿದ ಮೋಮಿನ, ಪುರಸಭೆ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಗುರುಗಳು, ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.
ಫೋಟೋ ಕ್ಯಾಪ್ಸನ್ ೧೫ ಇಂಡಿ ೦೧: ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ಜರುಗಿದ ೭೯ನೇ ಸ್ವಾತಂತ್ರೊö್ಯÃತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.





ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ