ರಸ್ತೆ ಸುಧಾರಣೆಯಾಗದಿದ್ದರೆ ಇಂಡಿ-ಸಿಂದಗಿ ರಸ್ತೆ ಬಂದ-ನೊಂದ ಗ್ರಾಮಸ್ಥರು ಆಗ್ರಹ.

 ರಸ್ತೆ ಸುಧಾರಣೆಯಾಗದಿದ್ದರೆ ಇಂಡಿ-ಸಿಂದಗಿ ರಸ್ತೆ ಬಂದ-ನೊಂದ ಗ್ರಾಮಸ್ಥರು ಆಗ್ರಹ.               


                          ವಿಜಯಪುರ-ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಗ್ರಾಮದಿಂದ  ಮಸಳಿಗೆ ಹೋಗುವ ಹಳೆಯ ಡಾಂಬರೀಕರಣ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು,ಈ ರಸ್ತೆಯ ಮೇಲೆ ರೈತರು ಶಾಲಾ ಮಕ್ಕಳು ಹಾಗೂ ವಿಕಲಚೇತನರು ಹಾದುಹೋಗಬೇಕಾದರು ಅವರು ಬೆಂಕಿ-ಮುಳ್ಳಿನ ಮೇಲೆ ನಡೆದಂತೆ ಆಗುತ್ತದೆ.ಈ ರಸ್ತೆ ಸುಧಾರಣೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರೂ ಯಾರೂ ಇತ್ತ ಕಡೆ ಗಮನಿಸುತ್ತಿಲ್ಲ.ಸುಮಾರು ವಷ೯ಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಮನವಿಗಳು ಮಾತ್ರ ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ.ಆದರೆ ಕೆಲವು ಅಧಿಕಾರಿಗಳು,ಗುತ್ತಿಗೆದಾರರು ಸೇರಿ ಶಾಮೀಲಾಗಿ ಉಪಯೋಗಕ್ಕೆ ಬಾರದ ಮಣ್ಣು ಹಾಕಿ, ಸಾಕಷ್ಟು ಹಣ ಲೂಟಿ ಮಾಡಿದ್ದಾರೆ.ರಸ್ತೆ ಮಾತ್ರ ಸೊನ್ನೆ.ಆದರೆ ಈ ರಸ್ತೆ ಯ ಮೇಲೆ ಹಾದು ಹೋಗಲು ರೈತ ಗ್ರಾಮಸ್ಥರಿಗೆ ಶಾಲಾ ಮಕ್ಕಳಿಗೆ,ಅಂಗವಿಕಲರಿಗೆ,ಹೀಗೆ ಅನೇಕ ರೀತಿಯಿಂದ ತೊಂದರೆಯಾಗುತ್ತಿರುವುದರಿಂದ ಅಂದಾಜು 200 ಗ್ರಾಮಸ್ಥರು ಸೇರಿ ಸಂಬಂಧಿಸಿದ  ಅಧಿಕಾರಿಗಳಿಗೆ ರಸ್ತೆ ಸುಧಾರಣೆ ಮಾಡಿಕೊಡಿ,ಇಲ್ಲವಾದರೆ ಇಂಡಿ-ಸಿಂದಗಿ ಮೇನ್ ರೋಡ್ ಬಂದು ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಆಗ್ರಹಿಸಿ ಇಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯರಾದ ಸಿಧ್ಧಾರಾಮ ದೇ ತಳವಾರ.ಭಿಮರಾಯ ನಿಂ ಅವಜಿ.ಸಂಗನಬಸವ ಭೀ ಹೂಗಾರ.ಶಿವರಾಜ ಜಿ ತೇಲಿ.ರಾಜು ಬಾ ಬಡಿಗೇರ.ನಾಗಯ್ಯ ಶಿ ಮಠಪತಿ.ಕ ರಮೇಶ ಅವಧಿ.ರಜಾಕ ರಾ ಮುಲ್ಲಾ.ಈರಣ್ಣ ಶಿ .ತಳವಾರ.ಕೆಂಪೆಗೌಡ ಡಂಬಳ.ಭೋಗಣ್ಣ ತಳವಾರ.ಇತರರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು