ಲಿಂಗ ಸಮಾನತೆ ಸಾರುವ ಹರದೇಶಿ-ನಾಗೇಶಿ ಪದಗಳು- ಸಿ ಎಂ ಬಂಡಗರ

ಲಿಂಗ ಸಮಾನತೆ ಸಾರುವ ಹರದೇಶಿ-ನಾಗೇಶಿ ಪದಗಳು-

ಸಿ ಎಂ ಬಂಡಗರ



ಇಂಡಿ: ಹರದೇಶಿ-ನಾಗೇಶಿ ಪದಗಳು ಪ್ರೀತಿ, ವಾತ್ಸಲ್ಯ, ಮತ್ತು ಹೃದಯ ವೈಶಾಲ್ಯತೆಯನ್ನು ಬಿಂಬಿಸುತ್ತವೆ. ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಈ ಪದಗಳು ಲಿಂಗ ಸಮಾನತೆ ಸಾರುತ್ತವೆ  ಎಂದು ಸಾಹಿತಿ ಸಿ ಎಂ ಬಂಡಗರ ಹೇಳಿದರು.

       ಗುರುವಾರದಂದು ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ, ಭೀಮಾoತರಂಗ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಕೇಂದ್ರ ಇಂಡಿ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅವರ ಸಹಯೋಗದಲ್ಲಿ ಹಮ್ಮಿಕೊಂಡ ಗೀಗಿ ಸಂಭ್ರಮ, ಸನ್ಮಾನ ಸಮಾರಂಭ, ಹರದೇಶಿ-ನಾಗೇಶಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ 'ಹರದೇಶಿ-ನಾಗೇಶಿ ಸ್ವರೂಪ'-ಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದರು.

       ಜನಪದ ಸಾಹಿತ್ಯದಲ್ಲಿ ಹರದೇಶಿ-ನಾಗೇಶಿ ಕಲಾವಿದರು ಬದುಕಿನ ಸಂಕೀರ್ಣ ಸ್ಥಿತಿಯನ್ನು ಮೂಲ ವಸ್ತುವನ್ನಾಗಿಸಿಕೊಂಡು ಗದ್ಯ-ಪದ್ಯಗಳ ಮೂಲಕ ಜನರಿಗೆ ತಿಳಿಹೇಳುವರು.  ಹರದೇಶಿ-ನಾಗೇಶಿ ಕಲೆಯು ಅಪ್ಪಟ ಗ್ರಾಮೀಣ ಕಲೆಯಾಗಿದ್ದು, ಇದು ಪ್ರೇಕ್ಷಕರನ್ನು ತನ್ನದೇ ಆದ ಭಾವನಾತ್ಮಕತೆಯೊಂದಿಗೆ ಸೆಳೆಯುತ್ತದೆ ಎಂದು ಹೇಳಿದ ಅವರು ಜೀವನ ಅನುಭವವನ್ನು ಮೌಖಿಕ ಸಂಪ್ರದಾಯದಲ್ಲಿ ಅಭಿವ್ಯಕ್ತಿ ಪಡಿಸಿ ತಲೆಮಾರಿಗೆ ಕೊಂಡೊಯುತ್ತವೆ ಜಾಗತೀಕರಣದ ಜಾಡ್ಯವನ್ನು ಪ್ರತಿರೋಧ ನೆಲೆಯಲ್ಲಿ ಪ್ರವಹಿಸುತ್ತವೆ ಎಂದು ಹೇಳಿದರು.

      ಅಧ್ಯಕ್ಷತೆ ವಹಿಸಿದ್ದ ಸಾಲೋಟಗಿಯ ಸಾಹಿತಿ ಗೀತಯೋಗಿ ಮಾತನಾಡಿ, ಹರದೇಶಿ-ನಾಗೇಶಿ ಪದಗಳು

ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಈ ಪದಗಳ ಬಳಕೆ ವ್ಯಾಪಕವಾಗಿ ಕಾಣುತ್ತೇವೆ ಎಂದು ಹೇಳಿದರು.

        ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ವೆಂಕಪ್ಪ ಅಂಬಾಜಿ ಸುಗತೇಕರ, ಶಿಕ್ಷಕ ಸಾಹಿತಿ ಸಂತೋಷ ಬಂಡೆ, ಶಿಕ್ಷಕ ವೈ ಜಿ ಬಿರಾದಾರ, ಎ ಎಸ್ ಗಾಣಿಗೇರ, ಆಯ್ ಬಿ ಸುರಪುರ ಉಪಸ್ಥಿತರಿದ್ದರು.

      ಶಿಕ್ಷಕಿ ಸರೋಜಿನಿ ಮಾವಿನಮರ ಕಾರ್ಯಕ್ರಮ ನಿರ್ವಹಿಸಿದರು. ಮದರಿಯ ಭಾಗಪ್ಪ ತಳವಾರ ತಂಡದಿಂದ ಹರದೇಶಿ ಸ್ವರೂಪ, ಗಣಿಹಾರದ ರೇಣುಕಾ ಮಾದರ ತಂಡದಿಂದ ನಾಗೇಶಿ ಸ್ವರೂಪ, ಸಾಲೋಟಗಿಯ ಬಸವೇಶ್ವರ ರೈತ ಹಂತಿ ಸಂಘದ ರಾಮಗೊಂಡ ಕಾಳಿ ಅವರ ಹಂತಿ ಹಾಡು, ಹನಮಂತ ಸುಗತೇಕರ ತಂಡದಿಂದ ಗೊಂದಲು ಹಾಡಿನ ಪ್ರದರ್ಶನ ಜರುಗಿದ್ದು ವಿಶೇಷವಾಗಿತ್ತು.

       ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ ಎಂ ಎಂ ಪಡಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಇಂಡಿ ತಾಲೂಕಾಧ್ಯಕ್ಷ ರಾಘವೇಂದ್ರ ಕುಲಕರ್ಣಿ,ಸಂಘದ ಕಾರ್ಯದರ್ಶಿ ಪಿ ಬಿ ಕತ್ತಿ,

ಪ್ರಾಚಾರ್ಯೆ ಸುಧಾ ಸುಣಗಾರ,  ಆರ್ ವ್ಹಿ ಪಾಟೀಲ, ಸಂಗನಗೌಡ ಹಚಡದ, ನಿಂಗನಗೌಡ ಬಿರಾದಾರ, ಬಿ ಸಿ ಭಗವಂತಗೌಡರ,ಸದಾನಂದ ಈರಣಕೇರಿ, ಎಂ ಎಸ್ ಹಯಾಳಕರ, ಬಿ ಎಸ್ ಹಣಮಶೆಟ್ಟಿ, ಎಸ್ ಆರ್ ಗವಸಾಣಿ, ಶಿವಲಿಂಗ ಕಲಬುರ್ಗಿ, ಎಸ್ ಎಂ ಕಡಕೋಳ, ಎಂ ಜೆ ಪಾಟೀಲ ಸೇರಿದಂತೆ ಕಾಲೇಜಿನ ಉಪನ್ಯಾಸಕ ಬಳಗ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು