ಶಮ್ಸ್ ಶಾಲೆಯಲ್ಲಿ ಮೊಹಮ್ಮದಿಯಾ ನಾತ್ ಕಮೀಟಿ ವತಿಯಿಂದ ತಾಲೂಕಾ ಮಟ್ಟದ ಇಸ್ಲಾಮಿಕ್ ಕ್ವಿಜ್ ಮತ್ತು ನಾತ್ ಸ್ಪರ್ಧೆ ಕಾರ್ಯಕ್ರಮ

 ಇಂಡಿ:  ನಗರದಲ್ಲಿರುವ ಶಮ್ಸ್ ಶಾಲೆಯಲ್ಲಿ ವಿಜಯಪುರದ ಮೊಹಮ್ಮದಿಯಾ ನಾತ್ ಸಮಿತಿಯ ವತಿಯಿಂದ ತಾಲೂಕಾ ಮಟ್ಟದ ಇಸ್ಲಾಮಿಕ್ ಕ್ವಿಜ್ ಮತ್ತು ನಾತ್ ಸ್ಪರ್ಧೆ ಆಯೋಜಿಸಲಾಯಿತು. 


ಈ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ್ ಮೊಮಿನ್ ಮಾತನಾಡಿ, “ಇಂದು ನಮ್ಮ ಸಮುದಾಯಕ್ಕೆ ಇಂತಹ ಸ್ಪರ್ಧೆಗಳನ್ನು ನಡೆಸುವುದು ಬಹಳ ಅಗತ್ಯವಾಗಿದೆ. ಮೊಹಮ್ಮದಿಯಾ ನಾತ್ ಸಮಿತಿ ಕಳೆದ 43 ವರ್ಷಗಳಿಂದ ನಾತ್ ಸ್ಪರ್ಧೆ ಹಾಗೂ ಕ್ವಿಜ್‌ಗಳನ್ನು ನಡೆಸಿ ಬರುತ್ತಿದೆ. ಇಂಡಿಯ ಪರವಾಗಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ. ನೀವು ಇದೇ ರೀತಿ ಉತ್ತಮ ಕೆಲಸಗಳನ್ನು ಮುಂದುವರೆಸಬೇಕು. ನಾವು ಎಲ್ಲಾ  ರೀತಿಯ ಸಹಾಯ ಬೇಕಾದರೂ ನಿಮ್ಮೊಂದಿಗೆ ನಿಂತಿದ್ದೇವೆ” ಎಂದು ಹೇಳಿದರು.


ವಿಜಯಪುರ ಸಮಿತಿಯ  ಅಬ್ದುಲ್ ರಜಾಕ್ ಕೋಲಾರ  ಮಾತನಾಡಿ, “43 ವರ್ಷಗಳ ಹಿಂದೆ ನಾವು ಮಕ್ಕಳಲ್ಲಿ ಹಜ್ರತ್ ಮುಹಮ್ಮದ್ (ಸ.ಅ.ವ) ಅವರ ಪ್ರೀತಿ ಬೆಳೆಸಲು ನಾತ್ ಸ್ಪರ್ಧೆ ಆರಂಭಿಸಿದ್ದೇವೆ. ಕಳೆದ 12 ವರ್ಷಗಳಿಂದ ನಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಗಮನದಲ್ಲಿಟ್ಟುಕೊಂಡು ಇಸ್ಲಾಮಿಕ್ ಕ್ವಿಜ್ ಸ್ಪರ್ಧೆ ಕೂಡ ಪ್ರಾರಂಭಿಸಿದ್ದೇವೆ. ಇಂದು ಸ್ಪರ್ಧೆ ಮಾಡುತಿರುವ ಎಲ್ಲಾ ಮಕ್ಕಳು ಕೇವಲ ಒಂದು ತಿಂಗಳ ಅವದಿಯಲ್ಲಿ  1400ಕು  ಹೆಚ್ಚು ಪ್ರಶ್ನೆಗಳನ್ನು ಒದಿಬಂದು ಇಲ್ಲಿ ಸ್ಪರ್ಧೆ ಮಾಡುತ್ತಿದ್ದ.   ಇಂದು ನಮ್ಮ ಕಮೀಟಿಯ ಎಲ್ಲಾ  ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲಾಹ ನಮ್ಮ ಈ ಕಾರ್ಯವನ್ನು ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಅಬ್ದುಲನಬಿ  ಜಮಾದಾರ ಮಾತನಾಡಿ, “ನಮ್ಮ ಸಮಿತಿ ಅಲ್ಲಾಹನ ಕೃಪೆಯಿಂದ ಇಂದು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲಾ , ದೇಶದ ಅನೇಕ ರಾಜ್ಯಗಳಲ್ಲಿ ಸಹ ಈ  ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮದ ಉದ್ದೇಶ ನಮ್ಮ ಮಕ್ಕಳಿಗೆ ಪ್ರವಾದಿ ಮುಹಮ್ಮದ್ (ಸ.ಅ.ವ) ಅವರ ಉಪದೇಶಗಳು ಹಾಗೂ ಅವರ ಜೀವನವನ್ನು ಪರಿಚಯಿಸುವುದಾಗಿದೆ”ಎಂದು ಹೇಳಿದರು.

 ರಸ ಪ್ರಶ್ನೆಯಲ್ಲಿ  ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ನಾತ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಆಯ್ಕೆ ಮಾಡಲಾಯಿತು.


ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಇಂಡಿಯ ಮಾಡಲ್ ಪಬ್ಲಿಕ್  ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಫರಹೀನ ಶೇಖ್, ಹಾಗೂ ಬಿಬಿ ಖತಿಜಾ ಬಾಗವಾನ  ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಹಾಗೂ ದ್ವಿತೀಯ ಸ್ಥಾನವನ್ನು  ಶಮ್ಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು  ಜೈನಬ್ ಭಾಸಗಿ ಹಾಗೂ ಫರಹೀನ ಮುಲ್ಲಾ ಪಡೆದರು. ಹಾಗೂ ತೃತೀಯ ಸ್ಥಾನ ಬಾಲ ಭಾರತಿ ಪ್ರೌಢ ಶಾಲೆಯ ಸನಾ ಗೋಡೆಗಾಂವ, ಇಫ್ರಾ ಮೂಗಾಳಿ ಪಡೆದರು.

ನಾತ ಸ್ಪರ್ಧೆಯಲ್ಲಿ ಮಾಡಲ್ ಪಬ್ಲಿಕ್ ಶಾಲೆಯ  ರಹೇಮತ್ ಪಠಾಣ್ ಪ್ರಥಮ ಸ್ಥಾನ ಹಾಗೂ ದ್ವೀತಿಯ ಸ್ಥಾನ ಬಾಲ ಭಾರತಿ ಶಾಲೆಯ ಮೋಹ್ಮಮದ ಸಾದ ಅರಬ  ಹಾಗೂ ತೃತೀಯ ಸ್ಥಾನ ಮದರಸಾ ದಾರುಲ ಕುರಾನ ಇಂಡಿಯ ಮೊಹಮ್ಮದ್‌ ಕೈಫ್  ಸಿದ್ದಿಕಿ ಪಡೆದರು. 


ಕಾರ್ಯಕ್ರಮದಲ್ಲಿ ಮುಫ್ತಿ ಅಬ್ದುಲ್ ರಹಮಾನ್ ಅರಬ್, ಉಪಾಧ್ಯಕ್ಷರು ಶೀರಾಜ ಜಮಖಂಡಿ  ಕಾರ್ಯದರ್ಶಿ  ಜಹಾಂಗೀರ್ ಹಿಪ್ಪರಗಿ, ಜೈಂಟ ಸೆಕ್ರೆಟರಿ ಜಾಕಿರ ಸುರಕಿ,  ಪುರಸಭೆ ಸದಸ್ಯ ಅಯ್ಯಬ ಬಾಗವಾನ, ಅಂಜುಮನ ಸಂಸ್ಥೆ ಉಪಾಧ್ಯಕ್ಷ  ಅಕೀಲ ಹವಾಲದಾರ, ಕಾರ್ಯದರ್ಶಿ ಹುಸೇನ ಜಮಾದಾರ, ಮುಸ್ತಾಕ ಇಂಡಿಕರ,  ಮುಕ್ತಾರ ಅರಬ, ಫಿರೋಜ್ ಮುಲ್ಲಾ, ಅಬುಬಕರ ಅಂಬಾರಖಾನೆ, ಅಯ್ಯಬ ಅರಬ,  ಮುಸ್ತಾಕ ನಾಯಿಕೋಡಿ, ಅನ್ವರ   ಇನಾಮದಾರ, ಸಿಕಂದರ ಅರಬ, ಮೌಲಾನಾ ಗೌಸ ಕೂತ್ವಾಲ, ರಶೀದ ಅರಬ, ಅಬ್ದುಲ ರಶೀದ ಮುಗಾಳಿ, ಅನತೋಲೆ ರಹೇಮಾನ, ಪರವೇಜ್ ಪಟೇಲ್‌,   ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ ಇಸಾಕ ಮುಲ್ಲಾ ಹಾಗೂ ವಂದನಾರಪಣೆ  ಹಸನ ಮುಜಾವರ ಮಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು