ಆಧುನಿಕ‌ ಭಗೀರಥ ಎಂ. ಬಿ. ಪಾಟೀಲ‌ ಅವರ ಕನಸಿನ ಕೂಸಾದ ಕೋಟಿ ವೃಕ್ಷ ಅಭಿಯಾನ ಇಂದು ಯಶಸ್ವಿಯಾಗಿ ಇಡೀ ಪ್ರಪಂಚವನ್ನು ತಲುಪಿದೆ

 ವಿಜಯಪುರ:  ಪ್ರಾರಂಭವಾದ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಾದ್ಯಂತ ಸದ್ದು ಮಾಡಿದ್ದು, ಅಮೇರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಕುರಿತು ವಿಶೇಷ ವರದಿ ಪ್ರಕಟಿಸಿದೆ.  ಈ ಸಂತಸವನ್ನು ವೃಕ್ಷಥಾನ್ ಹೆರಿಟೇಜ್ ರನ್- 2025 ಕೋರ್ ಕಮಿಟಿ ಸದಸ್ಯರು ಸಸಿ ನೆಡುವ ಮೂಲಕ ಸಂಭ್ರಮಿಸಿದರು.ಇಂದು ಶುಕ್ರವಾರ ಬಿ.ಎಲ್.ಡಿ.ಇ‌ ಸಂಸ್ಥೆಯ ಆವರಣದಲ್ಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಕಚೇರಿಯ ಬಳಿ ನಡೆದ ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ನಲ್ಲಿ ನೆಲೆಸಿರುವ ವಿಜಯಪುರ ಮೂಲದ ಸಾಫ್ಟವೇರ್ ಎಂಜಿನಿಯರ್ ಸದಾನಂದ ಬಿರಾದಾರ ಅವರು ಸಸಿ ನೆಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ‌ ಭಗೀರಥ ಎಂ. ಬಿ. ಪಾಟೀಲ‌ ಅವರ ಕನಸಿನ ಕೂಸಾದ ಕೋಟಿ ವೃಕ್ಷ ಅಭಿಯಾನ ಇಂದು ಯಶಸ್ವಿಯಾಗಿ ಇಡೀ ಪ್ರಪಂಚವನ್ನು ತಲುಪಿದೆ.  ಅದೇ ರೀತಿ ಜಲ, ನೀರು, ಶಿಕ್ಷಣ ಹಾಗೂ ಆರೋಗ್ಯ ಧ್ಯೇಯವನ್ನೊಳಗೊಂಡಿರುವ ವೃಕ್ಷಥಾನ್ ಹೆರಿಟೇಜ್ ರನ್ ಕೂಡ ಶೀಘ್ರದಲ್ಲಿ ಜಗತ್ತಿನಾದ್ಯಂತ ಖ್ಯಾತಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ಯಪಡಿಸಿದರು.


ಬಳಿಕ ನಡೆದ ಕೋರ್ ಕಮಿಟಿ ಸಭೆಯಲ್ಲಿ ಡಾ. ಮಹಾಂತೇಶ ಬಿರಾದಾರ ಅವರು ಡಿಸೆಂಬರ್ 7ರಂದು ನಡೆಯಲಿರುವ ಹೆರಿಟೇಜ್ ರನ್- 2025ರ ಪೂರ್ವ ಸಿದ್ಧತೆಗಳ ಸಭೆ ನಡೆಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು‌15 ಸಾವಿರ ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಹೆಸರಾಂತ ಓಟಗಾರರು, ಗಣ್ಯರು ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.  ಈಗಿನಿಂದಲೇ ಎಲ್ಲ ಸಮಿತಿ ಸದಸ್ಯರು ಯೋಜನಾಬದ್ಧವಾಗಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಡಿ, ಶಂಭು ಕರ್ಪೂರಮಠ, ವೀರೇಂದ್ರ ಗುಚ್ಚೆಟ್ಟಿ, ಡಾ. ರಾಜು ಯಲಗೊಂಡ, ಸಂತೋಷ ಔರಸಂಗ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಸೋಮು ಮಠ, ಸಂಕೇತ ಬಗಲಿ, ಅಪ್ಪು ಭೈರಗೊಂಡ, ಡಾ. ಪ್ರವೀಣ ಚೌರ, ಎಂ. ಎನ್. ಕುಪ್ಪಿ, ವಿಜಯಕುಮಾರ ಕೋರಿ, ಕನಕರಡ್ಡಿ, ಉಪಾಸೆ, ಸಮೀರ ಬಳಿಗಾರ, ಡಾ. ಅಮೀತ, ಉಮೇಶ ಮೆಟಗಾರ, ದಿನೇಶ ಹಳ್ಳಿ, ಅಶ್ಪಾಕ್ ಮನಗೂಳಿ, ಅಮಿತ ಬಿರಾದಾರ, ಜಗದೀಶ ಪಾಟೀಲ, ಮಹೇಶ ವಿ. ಶಟಗಾರ, ಶ್ರೀಕಾಂತ ಹಡಲಗೇರಿ, ನವೀದ ನಾಗಠಾಣ, ವೀಣಾ ದೇಶಪಾಂಡೆ, ನಾಗೇಂದ್ರ ಹಳೆಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು