ಸಮಾಜಕಲ್ಯಾಣ ಅಧಿಕಾರಿಗಳ ನಿಲ೯ಕ್ಷ್ಯದಿಂದ ಪ್ರತಿಷ್ಠಿತ ಶಾಲೆಗಳಲ್ಲಿ ಸೌಲಭ್ಯ ವಂಚಿತ sc/st ವಿದ್ಯಾರ್ಥಿಗಳು -ಶಿವಾನಂದ ಹರಿಜನ ಆರೋಪ.
ಸಮಾಜಕಲ್ಯಾಣ ಅಧಿಕಾರಿಗಳ ನಿಲ೯ಕ್ಷ್ಯದಿಂದ ಪ್ರತಿಷ್ಠಿತ ಶಾಲೆಗಳಲ್ಲಿ ಸೌಲಭ್ಯ ವಂಚಿತ sc/st ವಿದ್ಯಾರ್ಥಿಗಳು -ಶಿವಾನಂದ ಹರಿಜನ ಆರೋಪ.
ವಿಜಯಪುರ -ಜಿಲ್ಲಾ ಸಮಾಜಕಲ್ಯಾಣ ಅಧಿನದಲ್ಲಿರುವ ಒಟ್ಟು 09 ಪ್ರತಿಷ್ಠಿತ ಶಾಲೆಗಳಿವೆ.ಈ ಶಾಲೆಗಳಿಗೆ ಇಲಾಖೆಯ ವತಿಯಿಂದ ಪ್ರತಿವಷ೯5ನೇ ತರಗತಿ ಓದುತ್ತಿರುವ sc/st ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಇಲಾಖೆಯು ಅಜಿ೯ಆವ್ಹಾನಿಸಿ ,ಅವರಿಗೆ ಜಿಲ್ಲಾವಾರು ಸಿ.ಇ.ಟಿ.ಪರೀಕ್ಷೆ ನಡೆಸಿ,ಅಹ೯ವಿದ್ಯಾಥಿ೯ಗಳನ್ನುಮೇರಿಟ್ ಮೂಲಕ ಆಯ್ಕೆ ಸಮಿತಿಯು ಸಂಬಂಧಿಸಿದ ಪ್ರತಿಷ್ಠಿತ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ (6ರಿಂದ10ನೇ ಅಥವಾ12ನೇ) ಪ್ರವೇಶ ಪಡೆಯುವಂತೆ ವ್ಯವಸ್ಥೆ ಮಾಡುತ್ತಾರೆ.
ಆದರೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆಂದೇ ಸರಕಾರ ಸಾಕಷ್ಟು ಹಣ ಆಯಾ ವಿದ್ಯಾರ್ಥಿಗಳ ಪರವಾಗಿ ಆಯಾ ಶಾಲೆಗಳಿಗೆ ಸಂದಾಯ ಮಾಡುತ್ತದೆ.ಆದರೆ ವಿದ್ಯಾರ್ಥಿಗಳ ದುದೈ೯ವ ಆಯಾ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ವಷ೯,ಒಂದು ಬಾರಿ ಮಾತ್ರ ಸಮವಸ್ತ್ರ ಕೊಡುತ್ತಾರೆ.ಎರಡನೇ ವಷ೯ ಇಲ್ಲ.ಇದೊಂದೇ ಸೌಲಭ್ಯ .ಇತರೆ ಯಾವುದೇ ಸೌಲಭ್ಯ ಕೊಡುವುದಿಲ್ಲ.
ಸಮಾಜಕಲ್ಯಾಣ ಅಧಿಕಾರಿಗಳಿಗೆ ಪಾಲಕರು ಕೇಳಿದಾಗ ಅವರು ಹೇಳೋದು ಸಮವಸ್ತ್ರಗಳು , ನೋಟ್ ಪುಸ್ತಕ, ಕೊಬ್ಬರಿ ಎಣ್ಣೆ,ಪೆನ್ನು, ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಸಲಕರಣೆಗಳು ಕೊಡಬೇಕು ಅಂತ ಹೇಳುತ್ತಾರೆ. ಆದರೆ ಪ್ರತಿಷ್ಠಿತ ಕೆಲವು ಶಾಲೆಗಳ ಇಂತಹ ಪ್ರತಿಭಾವಂತ sc/st ವಿದ್ಯಾರ್ಥಿಗಳಿಗೆ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿವೆ. ದಯವಿಟ್ಪು ಸಮಾಜಕಲ್ಯಾಣ ಅಧಿಕಾರಿಗಳು ಆಯಾ ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ , ತಪ್ಪಿತಸ್ಥ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕು.ಒಂದು ವೇಳೆ ತಾ ವು ಶಾಲೆಗಳ ಸಮಿತಿಯವರೊಂದಿಗೆ ಅನ್ಯಾಯವಾಗಿ ಒಂದಾಗಿ ಕ್ರಮ ಕೈಗೊಳ್ಳದಿದ್ದರೆ.ಮೊದಲು ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಎದುರು ಪ್ರತಿಭಟನೆ.ನಂತರ ಆಯಾ ಪ್ರತಿಷ್ಠಿತ ಶಾಲೆಗಳ ಎದುರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾ ಆರ್.ಪಿ.ಆಯ್.(ಅಂಬೇಡ್ಕರ್) ಘಟಕದ ಸಂಘಟನಾ ಸಂಚಾಲಕರಾದ ಶಿವಾನಂದ ಹರಿಜನ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ