ಅಂಬೇಡ್ಕಕರ್ ಭಾವಚಿತ್ರಕ್ಕೆ ಅವಮಾನ
ಯಾರೋ ದುಷ್ಕರ್ಮಿಗಳು ಅಂಬೇಡ್ಕಕರ್ ಭಾವಚಿತ್ರಕ್ಕೆ ರಾತ್ರಿ ಚಪ್ಪಲಿ ಹಾರ ಹಾಕಿ ಪರಾರಿ. ಇಂಡಿ. ತಾಲೂಕಿನ ಮಾಸ್೯ನಹಳ್ಳಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಸಮಯದಲ್ಲಿ ಅಲ್ಲಿಯ ಅಂಬೇಡ್ಕರ್ ವೃತದಲ್ಲಿರುವ ಭಾವಚಿತ್ರಕ್ಕೆ ಯಾರೋ ದುಷ್ಕಮಿ೯ಗಳು ರಾತ್ರಿ ಸಮಯದಲ್ಲಿ ಚಪ್ಪಲಿ ಹಾರ ಹಾಕಿ ಪರಾರಿಯಾದ ಘಟನೆ ನಡೆದಿದೆ.ಬೆಳಗ್ಗೆ 8 ಗಂಟೆ ಸುಮಾರಿಗೆ ಅಲ್ಲಿಯ ಸಾವ೯ಜನಿಕರಿಗೆ ತಿಳಿದ ತಕ್ಷಣ ಅನೇಕ ದಲಿತ ಸಂಘಟನಾಕಾರರು ಸ್ಥಳಕ್ಕಾಗಮಿಸಿ ,ದುಷ್ಕಮಿ೯ಗಳನ್ನು ಕೂಡಲೆ ಬಂಧಿಸಬೇಕೆಂದು ಕೆಲವು ಸಮಯವರೆಗೆ ಪ್ರತಿಭಟನೆ ಪ್ರಾರಂಭಿಸಿದರು.ನಂತರ ಸ್ಥಳಕ್ಕೆ ಡಿ.ವಾಯ.ಎಸ್ಪಿ ಸಾಹೇಬರು ಮತ್ತು ಸಿಬ್ಬಂದಿ ವಗ೯ದವರು ಆಗಮಿಸಿ,ದುಷ್ಕಮಿ೯ಗಳನ್ನು ಯಾರೆ ಆಗಲಿ ಅವರನ್ನು ಕೂಡಲೇ ಬಂಧಿಸಿ ,ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು. ಭಾವಚಿತ್ರಕ್ಕೆ ಹಾಕಿರುವ ಚಪ್ಪಲಿ ಹಾರವನ್ನು ತೆಗೆಸಿ ಕ್ಷೀರಾಭೀಷೇಕ ಮಾಡಿಸಿ ವಂದನೆ ಸಲ್ಲಿಸಲಾಯಿತು.ಹಾಗೂ ಇಂಡಿ ಮಾನ್ಯ ತಹಶೀಲ್ದಾರ ಸಾಹೇಬರು ಅಂಬೇಡ್ಕರ್ ವೃತ ಕ್ಕೆ ಸಿಸಿ ಕ್ಯಾಮರ ,ಅಂಬೇಡ್ಕರ್ ಪುತ್ಥಳಿ ಕೊಡಿಸುವ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರು. ನಂತರ ದಲಿತರು ಶಾಂತರೀತಿಯಿಂದ ಪ್ರತಿಭಟನೆಯನ್ನು ಹಿಂಪಡಿಯಲಾಯಿತು. ಈ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಜೈಭೀಮ ನಾಯ್ಕೋಡಿ , ರಾಜು ಯಂಟಮಾನ ,ಸೋಮು ಮೇಕೆರಿ ,ಹರೀಶ ಎಂಟಮನ,ಶಿವಾನಂದ ಹರಿಜನ...