ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

ಇಮೇಜ್
  ಬಾಯಿಯ ನೈರ್ಮಲ್ಯದ ಮಹತ್ವ & ಜಾಗೃತಿ ದಿನ; ಇಂಡಿ:  "ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ” ಆಗಸ್ಟ್ 1 ರಂದು ಪೆರಿಯೊಡಾಂಟಾಲಜಿಯ ಜನಕ, ಪ್ರಚಾರಕ, ಪ್ರವರ್ತಕ, ಭಾರತೀಯ ಪೆರಿಯೊಡಾಂಟಿಕ್ಸ್‌ನ ಮತ್ತು ಇಂಡಿಯನ್ ಸೊಸೈಟಿ ಆಫ್ ಪೆರಿಯೊಡಾಂಟಾಲಜಿಯ ಸಂಸ್ಥಾಪಕ, ಅಧ್ಯಕ್ಷರಾಗಿದ್ದ ಡಾ. ಜಿ.ಬಿ.ಶಾಂಕ್‌ವಾಲ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ದೇಶದಾದ್ಯಂತ ಮೌಖಿಕ ನೈರ್ಮಲ್ಯ, ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಅಂಗವಾಗಿ, ಹಲ್ಲಿನ/ಬಾಯಿಯ ರೋಗಗಳ ತಡೆಗಟ್ಟುವಿಕೆಯ ಬಗ್ಗೆ, ಜಾಗೃತಿ & ಉತ್ತಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಯಿಯ ನೈರ್ಮಲ್ಯದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ, ಕೈ-ಕಾಲು ನೋವು ಗಂಟಲು ನೋವು ತಲೆನೋವು ಹೀಗೆ ದೇಹದಲ್ಲಿ ಏನೇ ನೋವು ಕಾಣಿಸಿಕೊಂಡರೂ ಒಂದೆರಡು ದಿನದಲ್ಲಿ ಇದು ಕಡಿಮೆಯಾಗದೆ ಇದ್ದರೆ ಆಗ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಿರಿ,ಕಾಳಜಿ ವಹಿಸುವಿರಿ ಆದರೆ ಬಾಯಿಯ ವಿಚಾರಕ್ಕೆ ಬಂದಾಗ ಮಾತ್ರ ಹೆಚ್ಚಿನವರು ಇದರ ಬಗ್ಗೆ ಕಾಳಜಿ ವಹಿಸುವುದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಬಾಯಿಯಲ್ಲಿರುವಂತಹ ಹಲ್ಲುಗಳು, ಒಸಡುಗಳು ನಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವವು. ಆದರೆ ಹೆಚ್ಚಿನವರ ಪ್ರಕಾರ ಆಹಾರ ಜಗಿಯಲು ಮತ್ತು ಮು...

ಸಚಿವ ಎಂ.ಬಿ. ಪಾಟೀಲ ಘೋಷಣೆ... ಪತ್ರಕರ್ತರ ಆರೋಗ್ಯ ಹಿತರಕ್ಷಣೆಗೆ ಠೇವಣಿ.

ಇಮೇಜ್
 ಸಚಿವ ಎಂ.ಬಿ. ಪಾಟೀಲ ಘೋಷಣೆ... ಪತ್ರಕರ್ತರ ಆರೋಗ್ಯ ಹಿತರಕ್ಷಣೆಗೆ ಠೇವಣಿ.     ವಿಜಯಪುರ : ಪತ್ರಕರ್ತರ ಸಕಲ ಸಮಸ್ಯೆ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಾಮಾಣಿಕವಗಿ ಪ್ರಯತ್ನ ಮಾಡುವ ಜೊತೆಗೆ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಐದು ಲಕ್ಷ ರೂ.ಗಳ ಠೇವಣಿ ಇರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಘೋಷಿಸಿದರು. ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಪತ್ರಕರ್ತರ ಆರೋಗ್ಯಕ್ಕಾಗಿ ಠೇವಣಿ ಇರಿಸಿ ಎಂಬ ಮನವಿಗೆ ವೇದಿಕೆಯಲ್ಲಿಯೇ ಸ್ಪಂದಿಸಿ ಸಚಿವ ಪಾಟೀಲ ಠೇವಣಿ ಇರಿಸುವ ಭರವಸೆ ನೀಡಿದರು. ನಂತರ ಸಂದೇಶ ಮುಂದುವರೆಸಿದ ಸಚಿವ ಪಾಟೀಲರು, ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಪತ್ರಿಕೋದ್ಯಮ ನಾಲ್ಕನೇಯ ಸ್ತಂಭವಾಗಿ ಮಹತ್ವದ ಪಾತ್ರ ವಹಿಸುತ್ತಲೇ ಬಂದಿದೆ ಎಂದರು. ಈಗ ಡಿಜಿಟಿಲ್ ಮಿಡಿಯಾ ಕಾಲ, ಮೊಬೈಲ್ ಪರದೆಯಲ್ಲಿಯೇ ಅಂತಾರಾಷ್ಟ್ರೀಯ ಪತ್ರಿಕೆ, ಟಿವಿ ವೀಕ್ಷಿಸಬಹುದು, ಉಳಿದ ದೇಶಗಳಲ್ಲಿ ಮುದ್ರಣ ಮಾಧ್ಯಮಗಳು ಸಂಪೂರ್ಣ ಕ್ಷ...

ವಿಜಯಪುರ: ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ ಸನ್ಮಾನ ಸಮಾರಂಭ ಜುಲೈ ೧೯ ರಂದು - ಪ್ರಕಾಶ ಬೆಣ್ಣೂರ

ಇಮೇಜ್
 ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ  ಸನ್ಮಾನ ಸಮಾರಂಭ ಜುಲೈ ೧೯ ರಂದು - ಪ್ರಕಾಶ ಬೆಣ್ಣೂರ     ವಿಜಯಪುರ: ೧೭- ಜಿಲ್ಲೆಯ ಹಿರಿಯ ಪತ್ರಕರ್ತರ ರಿಗೆ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ  ಪತ್ರಿಕಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಜುಲೈ ೧೯ ರಂದು ಶನಿವಾರ ಬೆಳಿಗ್ಗೆ ೧೦ ಕೈ ವಿಜಯಪುರ ನಗರದ ಕಂದಗಲ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೆಣ್ಣೂರ ಹೇಳಿದರು,     ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಸಂಘದ ಎಲ್ಲ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು,      ಜಿಲ್ಲಾಪಂಚಾಯತ್ ರಸ್ತೆಯ ಪತ್ರಿಕಾ ಭವನದಲ್ಲಿ ತುರ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದವರು ೨೦೨೪/೨೫ ನೇ ಸಾಲಿನಲ್ಲಿ ಎಸ್‍.ಎಲ್‍.ಸಿ  ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಪತ್ರಕರ್ತರರ ಮಕ್ಕಳು ಅತಿಹೆಚ್ಚು ಅಂಕಪಡೆದ  ವಿದ್ಯಾರ್ಥಿ /ವಿಧ್ಯಾರ್ಥಿನಿ ಪ್ರತಿಭಾ ಪುರಸ್ಕಾರ ಹಾಗೂ  ಪತ್ರಿಕಾ ದಿನಾಚರಣೆ ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತರ ರಿಗೆ ಜಿಲ್ಲಾ ...

ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆ ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

ಇಮೇಜ್
 ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆ*  ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ*  ಬಿಜೆಪಿಯ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮೂಲಕವೇ ಉತ್ತರ: ಸಿ.ಎಂ.ಸಿದ್ದರಾಮಯ್ಯ ಇಂಡಿ ಜು 14: ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.  ಇಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಟಿ.ಸಿ ಬಸ್‌ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ಲಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.  4157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ ಮಾಡಿದ್ದೇನೆ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಸಾರ್ವಜನ...

ಮಹಾನಗರ ಪಾಲಿಕೆ ನೌಕರರ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ ಬೇಡಿಕೆ ಈಡೇರಿಸಲು ಗಟ್ಟಿಯಾಗಿ ನಿಲ್ಲುವ ಭರವಸೆ

ಇಮೇಜ್
 ಮಹಾನಗರ ಪಾಲಿಕೆ ನೌಕರರ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ ಬೇಡಿಕೆ ಈಡೇರಿಸಲು ಗಟ್ಟಿಯಾಗಿ ನಿಲ್ಲುವ ಭರವಸೆ ವಿಜಯಪುರ: ಮಹಾನಗರ ಪಾಲಿಕೆ ನೌಕರರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ತಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಅಭಯ ನೀಡಿದರು. ವಿಜಯಪುರ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಕಳೆದ 5 ದಿನಗಳಿಂದ ನಡೆಯುತ್ತಿರುವ ಧರಣೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಅವರ ಮಾತನಾಡಿದರು. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನೌಕರರು ಕೆಲಸ ಸ್ತಗೀತಗೊಳಿಸಿ ನಿರಂತರವಾಗಿ 5 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದ್ದರೂ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿ ಆಗಲಿ, ಸಂಬಂಧಿಸಿದ ಸಚಿವರಾಗಲಿ ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಇದರಿಂದ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದೆಯೋ ಇಲ್ವೋ ತಿಳಿಯದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದುಡಿದವರಿಗೆ ವೇತನ ನೀಡಲು ಆಗದ ಈ ಸರ್ಕಾರ, ಅಧಿಕಾರದ ಹಪಾಹಪಿಗಾಗಿ ದುಡಿಯದವರಿಗೆ ಗ್ಯಾರಂಟಿ ನೀಡುತ್ತಿರುವುದು ವಿಪರ್ಯಾಸ. ನೌಕರರ ವೇತನವನ್ನು ಸರ್ಕಾರವೇ ನೀ...

ಚಟುವಟಿಕೆ ಮೂಲಕ ಕಲಿಕೆ ನಿರಂತರವಾಗಿ ಸಾಗಲಿ-ಬಿಇಓ ಮುಜಾವರ

ಇಮೇಜ್
 ಚಟುವಟಿಕೆ ಮೂಲಕ ಕಲಿಕೆ ನಿರಂತರವಾಗಿ ಸಾಗಲಿ-ಬಿಇಓ ಮುಜಾವರ ಇಂಡಿ: ಪ್ರತಿ ಮಗುವು ಕೂಡ ಸ್ಪಷ್ಟವಾಗಿ ಓದಲು, ಬರೆಯಲು   ಬರುವಂತೆ ವಿವಿಧ ಬೋಧನಾ ತಂತ್ರಗಳನ್ನು ಶಿಕ್ಷಕರು ರೂಢಿಮಾಡಿಕೊಂಡು ಎಫ್ ಎಲ್ ಎನ್ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಇಂಡಿ ಬಿಇಓ ಶ್ರೀಮತಿ ಎಸ್ ಎಸ್ ಮುಜಾವರ ಹೇಳಿದರು.         ಅವರು ಬುಧವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಎಫ್ ಎಲ್ ಎನ್ ಕಲಿಕಾ ಪ್ರಗತಿ ಪರಿಶೀಲಿಸಿ ಮಾತನಾಡಿದರು.       ಎಫ್ ಎಲ್ ಎನ್ ಚಟುವಟಿಕೆಗಳು ಮಕ್ಕಳಲ್ಲಿ ಕಲಿಕೆಯ  ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ಈ ಚಟುವಟಿಕೆಗಳು ಮಕ್ಕಳ ಓದುವಿಕೆ ಮತ್ತು ಬರೆಯುವಿಕೆಯನ್ನು ಸುಲಭವಾಗಿಸುತ್ತವೆ. ಹಾಗಾಗಿ ಮಕ್ಕಳಿಗೆ ಚಟುವಟಿಕೆ ಮೂಲಕ ಕಲಿಕೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.         ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಕಲಿಕಾ ಅಡಿಪಾಯ ಹಾಕಿಕೊಳ್ಳಲು ಎಫ್ ಎಲ್ ಎನ್ ಚಟುವಟಿಕೆಗಳು ಸಹಕಾರಿಯಾಗಿವೆ. ಎಫ್ ಎಲ್ ಎನ್ ಚಟುವಟಿಕೆಗಳನ್ನು ಶಾಲೆ ಮತ್ತು ಮನೆಯಲ್ಲಿ ರೂಢಿಸಿಕೊಂಡು, ಮಕ್ಕಳು ಉತ್ತಮ ಕಲಿಕಾ ಅನುಭವ ಪಡೆಯಬೇಕು ಎಂದು ತಿಳಿಸಿದರು.        ಬಿ ಆರ್ ಪಿ ಅಧಿಕಾರಿ ಅಲ್ಲ...

ಇಂಡಿ ವಿಧಾನಸಭಾ ಕ್ಷೇತ್ರ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಜುಲೈ 14ರಂದು ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ-ಲೋಕಾರ್ಪಣೆ ಶಾಸಕ ಯಶವಂತರಾಯಗೌಡ ಪಾಟೀಲ

ಇಮೇಜ್
 ಇಂಡಿ ವಿಧಾನಸಭಾ ಕ್ಷೇತ್ರ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಜುಲೈ 14ರಂದು ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ-ಲೋಕಾರ್ಪಣೆ ಶಾಸಕ ಯಶವಂತರಾಯಗೌಡ ಪಾಟೀಲ ವಿಜಯಪುರ,  ರಾಜ್ಯದ ಮುಖ್ಯಮಂತ್ರಿಗಳಾದ  ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ ಅವರು ಜುಲೈ 14ರ ಬೆಳಿಗ್ಗೆ 11 ಗಂಟೆಗೆ ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿರುವ ಇಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮವನ್ನು  ಯಶಸ್ವಿಯಾಗಿ ನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.  ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಇಂಡಿ ಮತ್ತು ಚಡಚಣ ತಾಲೂಕಿನ 19 ಕೆರೆ ತುಂಬುವ ಯೋಜನೆ, ಜಲಜೀವನ ಮಿಷನ್ ಕಾಮಗಾರಿಗಳು, ಇಂಡಿ ನಗರದಲ್ಲಿ ನೂತನ ಶ್ರೀ ಸಿದ್ದೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಮಾರುಕಟ್ಟೆ, ಇಂಡಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಇಂಡಿ ನಗರದ ಪ್ರಗತಿ ಕಾಲೋನಿ ಸಿ.ಸಿ.ರಸ್ತೆ, ಇಂಡಿ ಮತಕ್ಷೇತ್ರದ ಹೊರ್ತಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯ. ಅಲ್ಪಸಂಖ್ಯಾತರ ಕಲ್ಯಾಣ ಇಲ...

ಇಂಡಿ ತಾಲ್ಲೂಕಿನ ಶಿರಶ್ಯಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ

ಇಮೇಜ್
 ಇಂಡಿ ತಾಲ್ಲೂಕಿನ ಶಿರಶ್ಯಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ  ಅಧ್ಯಕ್ಷ ಸ್ಥಾನಕ್ಕೆ ಶ್ರೀ ಗುರುಪಾದ ಕೋಳಾರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಮಲ್ಲಪ್ಪ ಮಿರಗಿ ಆಯ್ಕೆ ಶಿರಶ್ಯಾಡ ಹಾಗೂ ಸಂಗೋಗಿ ಗ್ರಾಮದ ಸಮಸ್ತ ಹಿರಿಯರು ಸಮ್ಮುಖದಲ್ಲಿ ಸದಸ್ಯರು ಸ್ಥಾನಕ್ಕೆ ಅವಿರೋಧವಾಗಿ 12 ಸ್ಥಾನ ಆಯ್ಕೆ ಮಾಡಿದ್ದರು... ರೈತರಿಗೆ ಬರಬೇಕಾದ ಸರಕಾರದ ಸೌಲಭ್ಯಗಳು ಮನೆ ಬಾಗಿಲಗೆ ಮುಟ್ಟಬೇಕು ಅಂದಾಗ ಮಾತ್ರ ಸಹಕಾರಿ ಸಂಘಗಳು ಉತ್ತಮವಾಗಿ ಬೆಳೆಯಲು ಸಾಧ್ಯ. ನಾವು ಕೃಷಿ ಚಟುವಟಿಕೆಯಲ್ಲಿ ಭಾಗಿಯಾದ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುಲಿ ಎಂದು ಹಾರೈಕೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸರ್ವ ಸದಸ್ಯರ ಸಹಕಾರದೊಂದಿಗೆ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ಸಂಘವನ್ನು ಮುನ್ನೆಡಿಸಿಕೊಂಡು ಹೋಗಲಿ... ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಿದ್ದರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು ಜಿಲ್ಲಾ ಸಹಕಾರಿ ಸಂಘ ಸಿಬ್ಬಂದಿ ಹಾಗೂ ಇಂಡಿ ಸಹಕಾರಿ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.... ಬಾಳು ಮುಳಜಿ ಶಿರಶ್ಯಾಡ ಸದಾಶಿವಸೌವಕರ ಬಿರಾದಾರ ಶ್ರೀಶೈಲಸೌವಕರ ಬಿರಾದಾರ ಶರಣು ಪಾಸೋಡಿ ಈಶ್ವರಗೌಡ ಬಗಲಿ ಸಂಜು ಬಿರಾದಾರ ಅರವಿಂದ ಬಿರಾದಾರ ಮಲ್ಲು ನರಳ್ಳಿ ಚಂದ್ರಮ ಕಲ್ಲೂರ ಶ್ರೀಶೈಲ ಮುಳಜಿ ಸಂಗಯ್ಯ ಹಿರೇಮಠ   ಯಸವಂತ ತೆಲಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿರಶ್ಯಾಡ ಶರಣುಬಸು ಕಮತಗಿ ಉಪಾಧ್ಯಕ್ಷ...

ಈ ಪೂಲ್ ಕ್ಯಾಂಪಸ್ ಡ್ರೈವ್-2025 ನ್ನು ಬಿ.ಎಲ್. ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿ. ಎಸ್. ಬಗಲಿ ಉದ್ಘಾಟಿಸಿದರು.

ಇಮೇಜ್
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ಕಾಲೇಜ್ ಆಫ್ ಕಾಮರ್ಸ್(ಸ್ವಾಯತ್ತ)ನ ಮ್ಯಾನೆಜಮೆಂಟ್ ಆಫ್ ರಿಸರ್ಚ್ ಸೆಂಟರ್ ನಲ್ಲಿ ಗುರುವಾರ ಪೂಲ್ ಕ್ಯಾಂಪಸ್ ಡ್ರೈವ್- 2025 ನಡೆಯಿತು.   ಈ ಪೂಲ್ ಕ್ಯಾಂಪಸ್ ಡ್ರೈವ್-2025 ನ್ನು ಬಿ.ಎಲ್. ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ವಿ. ಎಸ್. ಬಗಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಿನಾಭಾವ ಸಂಬಂಧವಿದೆ.  ಉತ್ತಮ ಶಿಕ್ಷಣ, ತರಬೇತಿ ಪಡೆಯುವುದರಿಂದ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು.  ಇದರಲ್ಲಿ ಪರಸ್ಪರ ಸಹಯೋಗದಿಂದ ಉನ್ನತ ಸಾಧನೆ ಮಾಡಬಹುದು.  ವಿದ್ಯಾರ್ಥಿಗಳು ಇಂಥ ಪೂಲ್ ಕ್ಯಾಂಪಸ್ ಡ್ರೈವ್ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಈ ಪೂಲ್ ಕ್ಯಾಂಪಸ್ ಡ್ರೈವ್-2025ನಲ್ಲಿ ಒಟ್ಟು 10 ಹೆಸರಾಂತ ಕಂಪನಿಗಳು ಪಾಲ್ಗೋಂಡಿದ್ದವು.  ಐಟಿ, ಹಣಕಾಸು, ಮಾರ್ಕೆಟಿಂಗ್, ರಿಟೇಲ್, ಕನ್ಸಲ್ಟಿಂಗ್ ಮತ್ತು ಉತ್ಪಾದನೆ ಕ್ಷೇತ್ರಗಳಿಗೆ ಸೇರಿದದ ಫೋನ್ಪೇ, ಆರ್.ಎನ್.ಎಸ್ ಮೋಟಾರ್ಸ್, ಜಿಯೋ, ಯತಿ ಕಾರ್ಪ್, ಸಂತೋಷ್ ಆಟೋ, ಪೇಟಿಎಂ ಮುಂತಾದ ಕಂಪನಿಗಳು ಪಾಲ್ಗೋಂಡು ಮ್ಯಾನೇಜ್ಮೆಂಟ್ ಮತ್ತು ಸಂಬಂಧಿತ ವಿಭಾಗಗಳಲ್ಲಿ ಅಂತಿಮ ವರ್ಷದ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರ ಸಂದರ್ಶನ ನಡೆಸಿದರು.   ನಾನಾ ಸಂಸ್ಥೆಗಳಿಂ 450ಕ್ಕೂ ಹೆಚ್ಚು ವಿದ್ಯಾರ್ಥಿಗಳ...

ಮುಸ್ಲಿಂ ಪರ್ಸನಲ್ ಲಾವ ಬೋರ್ಡ್ ಕರ್ನಾಟಕ ಕೆರೆಯ ಹಿನ್ನೆಲೆಯಲ್ಲಿ ವಕ್ಫ್ ಕಾಯಿದೆ ವಿರೋಧಿಸಿ ಪಟ್ಡಣದ ಹಲವು ಮಸೀದಿಯಲ್ಲಿ ಜುಮ್ಮಾ ನಮಾಜದ ನಂತರ ನೂರಾರು ಯುವಕರು ಮಾನವ ಸರಪಳಿ ನಿರ್ಮಾಣ ಮಾಡಿ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.

ಇಮೇಜ್
 ಇಂಡಿ.  ಮುಸ್ಲಿಂ ಪರ್ಸನಲ್ ಲಾವ ಬೋರ್ಡ್ ಕರ್ನಾಟಕ ಕೆರೆಯ ಹಿನ್ನೆಲೆಯಲ್ಲಿ  ವಕ್ಫ್ ಕಾಯಿದೆ ವಿರೋಧಿಸಿ  ಪಟ್ಡಣದ ಹಲವು ಮಸೀದಿಯಲ್ಲಿ  ಜುಮ್ಮಾ ನಮಾಜದ ನಂತರ ನೂರಾರು ಯುವಕರು ಮಾನವ ಸರಪಳಿ ನಿರ್ಮಾಣ ಮಾಡಿ  ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.  ಪಟ್ಟಣದ ಮಸೀದಿಯ  ಆಡಳಿತ ಮಂಡಳಿಯ ವತಿಯಿಂದ ಮಾನವ ಸರಪಳಿ ನಿರ್ಮಾಣ ಮಾಡಿ ವಕ್ಫದ ಕಾಯಿದೆ ಹಿಂಪಡೆಯಬೇಕು ಎಂದು ಬೋರ್ಡ್ ಹಿಡಿದು  ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಮುಖಂಡರು  ಮುಸ್ಲಿಂ ಕಾನೂನಿನಂತೆ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿಯಾಗಿದೆ. ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ. ಬಿಜೆಪಿ ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಆದರೆ, ಅದರ ಯೋಜನೆಗಳು ಫಲ ನೀಡುವುದಿಲ್ಲ’ ಎಂದು ಹೇಳಿದರು. ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಮರ ಮಸೀದಿಗಳು, ಈದ್ಗಾಗಳು, ಮದರಸಾಗಳು, ದರ್ಗಾಗಳು, ಖಾಂಖಾಗಳು, ಸ್ಮಶಾನಗಳು ಮತ್ತು ದತ್ತಿ ಸಂಸ್ಥೆಗಳನ್ನು ವಂಚಿಸುವ ಗುರಿಯನ್ನು ಹೊಂದಿರುವ ಒಂದು ದುಷ್ಟ ಪಿತೂರಿಯಾಗಿದೆ "ಈ ಕಾನೂನು ಅಸಂವಿಧಾನಿಕವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ಮು...

ಮಹಿಳಾ ವಿವಿ: ನೂತನ ಕುಲಪತಿಯಾಗಿ ಪ್ರೊ.ವಿಜಯಾ ಕೋರಿಶೆಟ್ಟಿ ನೇಮಕ

ಇಮೇಜ್
 ಮಹಿಳಾ ವಿವಿ: ನೂತನ ಕುಲಪತಿಯಾಗಿ             ಪ್ರೊ.ವಿಜಯಾ ಕೋರಿಶೆಟ್ಟಿ ನೇಮಕ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆರನೆಯ ಕುಲಪತಿಯಾಗಿ ಸಮಾಜಶಾಸ್ತç ಅಧ್ಯಯನ ವಿಭಾಗದ ಮುಖ್ಯಸ್ಥೆ ಹಾಗೂ ಹಿರಿಯ ಪ್ರಾಧ್ಯಾಪಕಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ಶ್ರೀ.ಥಾವರಚಂದ ಗೆÀಹಲೋಟ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.   ಇಲ್ಲಿಯ ವರೆಗೆ ಹೊರಗಿನ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಕುಲಪತಿಗಳಾಗಿ ನೇಮಕಗೊಂಡಿದ್ದರು. ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಒಲಿದು ಬಂದಿದೆ. ರಾಜ್ಯಪಾಲರು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ- ೨೦೦೦ನ ಸೆಕ್ಷನ್ ೧೪ (೪) ರ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ, ಪ್ರೊ.ವಿಜಯಾ ಕೋರಿಶೆಟ್ಟಿ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಅನ್ವಯವಾಗುವಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ  ಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅಧಿಕಾರ ಹಸ್ತಾಂತರ: ರಾಜ್ಯಪಾಲರ ಆದೇಶದಂತೆ ನೂತನ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಇಂದು ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಹಿಳಾ ವಿವಿಯ ೬ನೆಯ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿಯಾಗಿದ್ದ...

ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ 'ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ'ದ ನಿಮಿತ್ತ ಹಮ್ಮಿಕೊಂಡ 'ಪ್ಲಾಸ್ಟಿಕ್ ಚೀಲ ಬಿಡಿ-ಬಟ್ಟೆ ಚೀಲ ಹಿಡಿ' ಚರ್ಚಾಗೋಷ್ಠಿ.

ಇಮೇಜ್
 'ಪ್ಲಾಸ್ಟಿಕ್ ಚೀಲ ಬಿಡಿ-ಬಟ್ಟೆ ಚೀಲ ಹಿಡಿ'  ಬಟ್ಟೆ ಚೀಲ ಬಳಸುವ ರೂಢಿ ದೈನಂದಿನ ಜೀವನದ ಭಾಗವಾಗಲಿ-ಸಂತೋಷ ಬಂಡೆ ಇಂಡಿ: ಪ್ಲಾಸ್ಟಿಕ್‌ ತ್ಯಾಜ್ಯವು ಜಾಗತಿಕ ಸಮಸ್ಯೆಯಾಗಿದೆ. ಜಗತ್ತಿನ ಅತಿ ಎತ್ತರದ ಗಿರಿ ಶಿಖರಗಳಿಂದ ಹಿಡಿದು ಆಳ ಸಮುದ್ರದ ಒಡಲೊಳಗೆ ಸೇರಿಕೊಳ್ಳುತ್ತಿರುವ ಇದು ಜನ, ಜಾನುವಾರು ಹಾಗೂ ಸಸ್ಯ ಸಂಕುಲಕ್ಕೆ ಮಾರಕವಾಗಿದ್ದು, ಇದರ ನಿಯಂತ್ರಣ ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.         ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ 'ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ'ದ ನಿಮಿತ್ತ ಹಮ್ಮಿಕೊಂಡ 'ಪ್ಲಾಸ್ಟಿಕ್ ಚೀಲ ಬಿಡಿ-ಬಟ್ಟೆ ಚೀಲ ಹಿಡಿ' ಚರ್ಚಾಗೋಷ್ಠಿಯನ್ನು  ಉದ್ಧೇಶಿಸಿ ಅವರು ಮಾತನಾಡಿದರು.        ಪ್ಲಾಸ್ಟಿಕ್‌ ವಸ್ತುಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ. ಅವನ್ನು ಸುಟ್ಟರೆ ‘ಡಯಾಕ್ಸಿನ್‌’ ಎಂಬ ವಿಷಪೂರಿತ ಅಂಶ ಬಿಡುಗಡೆಯಾಗಿ, ಅದು ಗಾಳಿಯಲ್ಲಿ ಬೆರೆತು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಬಳಕೆ ಕಡಿಮೆ ಮಾಡಿ, ಬಟ್ಟೆ ಚೀಲ ಬಳಸುವ ರೂಢಿ ದೈನಂದಿನ ಜೀವನದ ಭಾಗವಾಗಬೇಕಿದೆ ಎಂದು ಹೇಳಿದರು.          ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ತರಕಾರಿ, ದಿನಸಿ ವಸ್ತುಗಳನ್ನು ತರಲು ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ...

ಸದ್ದಿಲ್ಲದೆ ಹಾಳಾಗುತ್ತಿರುವ ದೇಶದ ಆಸ್ತಿ ಎಂದರೆ ಯುವಕರು, ಹಲವಾರು ಮಾದಕ ದ್ರವ್ಯಗಳ ಸೇವನೆಯಿಂದ ಸಾವಿಗಿಡಾಗುತ್ತಿರವುದು ಕಳವಳಕಾರಿ ಸಂಗತಿ ಎಂದು ಬಿ.ಹೆಚ.ಇ ಓ ವೈ.ಎಂ.ಪೂಜಾರ ಹೇಳಿದರು.

ಇಮೇಜ್
 ಇಂಡಿ : ಸದ್ದಿಲ್ಲದೆ ಹಾಳಾಗುತ್ತಿರುವ ದೇಶದ ಆಸ್ತಿ ಎಂದರೆ ಯುವಕರು, ಹಲವಾರು ಮಾದಕ ದ್ರವ್ಯಗಳ  ಸೇವನೆಯಿಂದ ಸಾವಿಗಿಡಾಗುತ್ತಿರವುದು ಕಳವಳಕಾರಿ ಸಂಗತಿ ಎಂದು ಬಿ.ಹೆಚ.ಇ ಓ ವೈ.ಎಂ.ಪೂಜಾರ   ಹೇಳಿದರು. ಅವರು ತಾಲೂಕಿನ ಲಚ್ಚಾಣ ಗ್ರಾಮದ  ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಮಾದಕ ದ್ರವ್ಯ ಹಾವಳಿ ನಿಯಂತ್ರಣದ ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.    ಮಗು ಅಂಗಳದಲ್ಲಿ ಆಡುತ್ತ ಅಂಗನವಾಡಿಗೆ ಹೋಗಿ ಮನೆಗೆ ಬರುತ್ತದೆ ಬೆಳವಣಿಗೆ ಆದಂತೆ ಪ್ರಾಥಮಿಕ ಶಾಲೆಗೆ ಹೋಗುವ ಮಗು, ಕಲಿಕೆಯ ಹಂತದಲ್ಲಿ ಅನುಕರಣೆಯಿಂದ ದುಶ್ಚಟಗಳಿಗೆ ದಾಸರಾಗುತ್ತಾರೆ. ಅದೇ ರೀತಿ ಹಿರಿಯರಿಂದ, ಸ್ನೇಹಿತರಿಂದ, ಮದುವೆ ಸಮಾರಂಭ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಾಗ ಸಮೂಹದ ಒತ್ತಡ ಮಧ್ಯದಲ್ಲಿ 10 ರಿಂದ 19 ವರ್ಷದ ಮಕ್ಕಳು  ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.     ಅತ್ತ ಬಾಲ್ಯನು ಅಲ್ಲ, ಇತ್ತ ಯೌವ್ವನವೂ ಅಲ್ಲ, ಪ್ರೌಢಾವಸ್ಥೆಯಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ಸದ್ದಿಲ್ಲದೆ ಹಾಳಾಗುತ್ತಿರುವದರಿಂದ ಕುಟುಂಬ, ಸಮಾಜ, ಗ್ರಾಮ, ರಾಜ್ಯ, ದೇಶಕ್ಕೆ ಗಂಡಾಂತರ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ 10 ರಿಂದ 15 ವರ್ಷದೊಳಗಿನ ಮಕ್ಕಳು  ಶೇಕಡ 15 ರಷ್ಟು ಮಕ್ಕಳು ಪ್ರ...

ವಿಜಯಪುರದ ಕೇಂದ್ರಿಯ ವಿದ್ಯಾಲಯದ ಭೇಟಿ ನೀಡಿದ ಜಿಲ್ಲೆಯ ಸಂಸದರಾದ ರಮೇಶ್ ಜಿಗ್ಜಣಿಗಿ ಶಾಲೆಯ ಅಭಿವೃದ್ಧಿಯ ಕುರಿತು ಮಾಹಿತಿಯನ್ನು ಪಡೆದುಕೊಂಡರು

ಇಮೇಜ್
 ವಿಜಯಪುರದ ಕೇಂದ್ರಿಯ ವಿದ್ಯಾಲಯದ ಭೇಟಿ ನೀಡಿದ ಜಿಲ್ಲೆಯ ಸಂಸದರಾದ ರಮೇಶ್ ಜಿಗ್ಜಣಿಗಿ ಶಾಲೆಯ ಅಭಿವೃದ್ಧಿಯ ಕುರಿತು ಮಾಹಿತಿಯನ್ನು ಪಡೆದುಕೊಂಡರು , ಪಿಎಂ ಶ್ರೀ ಯೋಜನೆ ಅಡಿಯಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಕೈಗೊಂಡ ಕಾರ್ಯಗಳು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವ ಕುರಿತು, ವೃತ್ತಿ ಶಿಕ್ಷಣದ ಆರಂಭದ ಕುರಿತು, ಪೂರ್ವ ಪ್ರಾಥಮಿಕ ಹಂತದ ಮೂರು ವರ್ಷಗಳ ಬಾಲವಾಟಿಕ ಮಾದರಿಯ ತರಗತಿಗಳ ಕುರಿತು ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು, ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳಿಂದ ಮಾಹಿತಿ ಪಡೆದುಕೊಂಡರು ಹುರುದುಂಬಿಸಿದರು , ವಿದ್ಯಾಲಯಕ್ಕೆ ಮಂಜೂರಾದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಕುರಿತು ಮಾಹಿತಿ ಪಡೆದುಕೊಂಡರು , ಖಾಲಿ ಇರುವ ಹುದ್ದೆಗಳ ಕುರಿತು ಕೇಂದ್ರದ ಕೇಂದ್ರೀಯ ವಿದ್ಯಾಲಯ ಸಂಘಟನೆ ನವದೆಹಲಿ ಜೊತೆಗೆ ಮಾತನಾಡುವ ಭರವಸೆಯನ್ನು ನೀಡಿದರು. ನಿಯಮಿತವಾಗಿ ವಿದ್ಯಾರ್ಥಿ ಪಾಲಕ-ಶಿಕ್ಷಕ ಸಭೆಯನ್ನು ನಡೆಸುವ ಹಾಗೂ ಪ್ರತಿ ಸಭೆಯ ನಡಾವಳಿಗಳ ಕುರಿತು ತಮ್ಮ ಗಮನಕ್ಕೆ ತರಲು ಸೂಚನೆ ನೀಡಿದರು, ವಿದ್ಯಾರ್ಥಿಗಳ ಫಲಿತಾಂಶದ ಕುರಿತು ಅತೃಪ್ತಿ ವ್ಯಕ್ತಪಡಿಸಿ ಮಾದರಿಯ ಫಲಿತಾಂಶ ಸಾಧಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಮಾರ್ಗದರ್ಶನ ನೀಡಿದರು ಹಾಗೂ ಎಚ್ಚರಿಕೆ ನೀಡಿದರು, 11 ಹಾಗೂ 12ನೇ ತರಗತಿಯ ವಿಭಾಗ ಬಲಪಡಿಸುವ ಕುರಿತು ಸೂಚನೆ ನೀಡಿದರು , ವಿದ್ಯಾಲಯಕ್ಕೆ ಅಗತ್ಯವಿರುವ ಅನುದಾನ ಮತ್ತು ಅಗತ್ಯವಿರುವ ಎಲ್ಲ ರೀತ...

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಇಮೇಜ್
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ವಿಜಯಪುರ ಜು.02: ನಗರದ ಸ್ಟೇಶನ್ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಮಂಗಳವಾರ ಕಚೇರಿ ಆವರಣದಲ್ಲಿ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಇಂದಿನಿಂದಲೇ ನಾವು ಪರಿಸರವನ್ನು ಕಾಪಾಡಿಕೊಂಡು ಹೋದಲ್ಲಿ ಮುಂದಿನ, ಭವಿಷ್ಯದ ಪೀಳಿಗೆಗೆ ಸ್ವಚ್ಛ ಸುಂದರ ಪರಿಸರ ನೀಡಬಹುದಾಗಿದೆ. ಈ  ನಿಟ್ಟಿನಲ್ಲಿ ಮನೆ, ಕಚೇರಿ ಆವರಣಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.  ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಅಬ್ದುಲರಜಾಕ ಬಾಗೇವಾಡಿ ಪ್ರಕಾಶ ಘಟಕಾಂಬಳೆ, ನಾಗರಾಜ ಉಪಸ್ಥಿತರಿದ್ದರು.

ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ ಗುರಿಯಾಗಬೇಕು :- ರಿಯಾಜ್ ಫಾರೂಖಿ

ಇಮೇಜ್
 ವಿಜಯಪುರ: ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ ಗುರಿಯಾಗಬೇಕೆಂದು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್ ರಿಯಾಜ್ ಫಾರೂಖಿ ಅವರು ವಿದ್ಯಾರ್ಥಿನಿಯರ ಸಮೂಹಕ್ಕೆ ಕರೆ ನೀಡಿದರು.   ಅವರು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ  ಬಿಎ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ‘ಸೇತು ತರಬೇತಿ’ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ವಿದ್ಯಾರ್ಥಿನಿಯರು ಕ್ಲಾಸರೂಮಿನಲ್ಲಿ ಮಾತ್ರ ಕಲಿಯದೇ ಹೊರಗಿನ ಪರಿಸರದಲ್ಲಿ ಕಲಿಯುವದು ಬಹಳಷ್ಟಿದೆ ಎಂದರು. ವಿದ್ಯಾರ್ಥಿನಿಯರು ವಿಚಾರ ಸಂಕಿರಣ, ಶೈಕ್ಷಣಿಕ ಸಮಾವೇಶ, ತಜ್ಞರ ಜೊತೆ ಜೊತೆ ಚರ್ಚೆ ಮುಂತಾದವುಗಳ ಮೂಲಕ ಕಲಿಯುವದು ಅತ್ಯವಶ್ಯ ಎಂದು ಒತ್ತಿ ಹೇಳಿದರುಇನ್ನೋರ್ವ ಅತಿಥಿ ಅಂಜುಮನ್ ಮಹಾವಿದ್ಯಾಲಯದ ಉರ್ದುವಿಬಾಗದ ಮುಖ್ಯಸ್ಥರಾದ ಡಾ. ಸೈಯದ ಅಲಿಮುಲ್ಲಾ ಹುಸೇನಿ ಮಾತನಾಡಿ ಶಿಕ್ಷಣದಲ್ಲಿ ಮಾನವೀಯತೆ ಮುಖ್ಯ ಎಂದು ನುಡಿದರು. ಪ್ರಾಚರ‍್ಯರಾದ ಡಾ. ಎಚ್.ಕೆ.ಯಡಹಳ್ಳಿ ಉಪಪ್ರಾಚರ‍್ಯರಾದ ಡಾ. ಹಾಜಿರಾ ಪರವೀನ, ಪ್ರೊ. ಎಂ.ಎA.ಬಾಗಲಕೋಟ, ಡಾ. ಎಲ್.ಐ.ನದಾಫ, ಪ್ರೊ. ಅಂಬ್ರೀನ್ ಸಬಾ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕು. ಆಸ್ಮಾ ನಾಗರದಿನ್ನಿ ಪವಿತ್ರ ಖುರಾನ್ ಹಾಗೂ ಕು. ಪೃಥ್ವಿ, ಕು. ವಿದ್ಯಾ ಭಗವದ್ಗೀತೆ ಪಠಿಸಿದರು. ಕು. ಸುಗ್ರಾ ಪಟೇಲ್ ಅತಿಥಿ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು