ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುವುದು.
ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುವುದು. ಸಮಿಪದ ಅಂಜುಟಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರಿಗೆ ಬೇಳಗ್ಗೆ ನೇವಿದ್ಯ - ಅಭಿಷೇಕ ನಂತರ 9-00 ಗಂಟೆಗೆ ದೇವಸ್ಥಾನದ ಮುಂದೆ ಪುರವಂತರ ಸೇವೆ ನಡೆಯುವದು ನಂತರ ದೇವಸ್ಥಾನದಿಂದ ವೀರಭದ್ರಶ್ವರ ಪಲ್ಲಕ್ಕಿ ಪುರವಂತರ ವಾದ್ಯ-ವೈಭವಗಳೋಂದಿಗೆ ಅಗ್ನಿ ಕುಂಡಕ್ಕೆ ತಲುಪುವದು ನಂತರ ಮಧ್ಯಾಹ್ನ 1-00 ಗಂಟೆಗೆ ಅಗ್ನಿ ಕುಂಡಲ ಪ್ರವೇಶ ಜರಗುವುದು ನಂತರ 2-00 ಗಂಟೆಯಿಂದ ಬಸು ಮದರಿ ಸಂಘಡಿಗರು ಹಾಗೂ ಸುರೇಶ ಕೆಂಬಾವಿ ಸಂಘಡಿಗರಿಂದ ಸುಪ್ರಸಿದ್ಧ ಗೀ ಗೀ ಪದಗಳು ಅದೇ ರಾತ್ರಿ 10-00 ಗಂಟೆಗೆ ಮ್ಯೂಜಿಕ್ ಮೈಲಾರಿ ಅರ್ಪಿಸುವ ಅಪ್ಪಾಜಿ ಮೇಲೋಡಿಸ್ಸ್ ಇವರಿಂದ ಹಾಸ್ಯರಮಂಜರಿ ಕಾರ್ಯಕ್ರಮ ಜರಗುವುದು. ಶನಿವಾರ ದಿನಾಂಕ 31ರಂದು ಬೆಳಿಗ್ಗೆ 8-00 ರಿಂದ ಅದೇ ಬಳಗದಿಂದ ಗೀ ಗೀ ಪದಗಳು ಜರಗುವುದು ಸಾಯಂಕಾಲ 5-00ಗಂಟೆಗೆ ಪ್ರಸಿದ್ಧ ಪೈಲವಾನರಿಂದ ಜಂಗೀ ನಿಕಾಲಿ ಕುಸ್ತಿ ಜರಗುವುದು. ನಂತರ 8-00 ಗಂಟೆಗೆ ಚಿತ್ರ - ವಿಚಿತ್ರ ಮದ್ದು ಸುಡಲಾಗುವುದು ನಂತರ 10-00ಗಂಟೆಗೆ ಶ್ರೀ ಗುರು ಪುಟ್ಟರಾಜ ಕೃಪಾಪೋಷಿತ ಕಲಾ ನಾಟ್ಯ ಸಂಘ ಬಾಗಲಕೋಟೆ ಇವರಿಂದ ಮಹಾ ಶಿವರಣಿ ಹೇಮರಡ್ಡಿ ಮಲ್ಲಮ್ಮ - ಶ್ರೀ ಮಲ್ಲಿಕಾರ್ಜುನ ಮಹಾತ್ಮೆ ಎಂಬ ಭಕ್ತ...