ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸರ್ಕಾರಿ ನೌಕರರ ಸಂಘ ಆಯ್ಕೆಯಾದ ಎಸ್ ವಿ ಹರಳಯ್ಯ ಅಬು ತಾಲಿಬ್ ಹೊಸೂರ್ ಸನ್ಮಾನ

ಇಮೇಜ್
  ಇಂಡಿ: ಇತ್ತೀಚೆಗೆ ನಡೆದ ಇಂಡಿ ತಾಲ್ಲೂಕಿನ ನೌಕರರ ಸಂಘದ ಚುನಾವಣೆಯಲ್ಲಿ ಅಬುತಾಲಿಬ ಹೂಸುರ ಮತ್ತು ಹರಳೈಯಾ ಸರ್ ಆಯ್ಕೆಯಾಗಿದ್ದು ಅವರಿಗೆ   ತಾಲೂಕಿನ ಸರ್ಕಾರಿ ಉರ್ದು  ಪ್ರಾಥಮಿಕ ಶಾಲೆ  ಮಾವಿನಹಳ್ಳಿಯಲ್ಲಿ ಎಲ್ಲಿ 4   ಉರ್ದು ಕ್ಲಾಸ್ಸ್ಟರ್  ನಲಿ ಕಲಿ ಸಮಾಲೋಚನ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಸರ್ಕಾರಿ ನೌಕರರ ಸಂಘ ಆಯ್ಕೆಯಾದ  ಎಸ್ ವಿ ಹರಳಯ್ಯ ಅಬು ತಾಲಿಬ್ ಹೊಸೂರ್  ಸನ್ಮಾನ ಮಾಡಲಾಯಿತು ಈ ಕಾರ್ಯಕ್ರಮವು ಶಾಲಾ ಮಕ್ಕಳ ಕಲಾಪಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಅಬುತಾಲಿಬ ಹೂಸುರ ಮತ್ತು ಕ್ಷೇತ್ರದ ಪ್ರಬುದ್ಧ ಶಿಕ್ಷಕರಾದ ಹರಳೈಯಾ ಸರ್‌ ಈ ಸಾಧನೆಗೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದರು.  ನಮ್ಮ ಶಿಕ್ಷಕರ ಈ ರೀತಿಯ ಉತ್ತೀರ್ಣತೆಯನ್ನು ಸಾಧಿಸಿರುವುದು ಶಾಲೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸನ್ಮಾನ ಸಮಾರಂಭದಲ್ಲಿ ಉರ್ದು ಸಿ.ಆರ್.ಪಿ ಪರವೇಜ್ ಪಟೇಲ, ಭಾಶಾ ಕುಮಸಗಿ, ಐ.ಎಸ್. ಶಿಕ್ಕಲಗಾರ, ನಜೀರ ಗುಂದಗಿ, ಖಲಿಲ್ ಅತ್ತಾರ, ಅಲ್ತಾಫ್ ಹವಾಲದಾರ, ಶಕೀಲ್ ಮಿರಜಕರ, ಅಮೀರ ಇಂಡಿಕರ, ಇಸ್ಮಾಯಿಲ್ ವಾಲಿಕಾರ, ಸಲಿಮ ಬಾಗವಾನ, ಬಿ.ಜಿ. ಶಿರಕ್ಕನಲಿ, ಸಾಲಿಮ ಬಾಗವಾನ, ರಾಜಾಹ್ಮದ ಬಾಗವಾನ, ಮುಕ್ತಾರ ಅರಬ, ಮುನ್ನಾ ಹೊನವಾಡ,  ಸೇರಿ...

ಇಂಡಿ ಉಜ್ಜೇನ್ನಿ ಬಸ್ಸು ಪುನರಾರಂಭ ಭಕ್ತ ವರ್ಗ ಹರ್ಷ

ಇಮೇಜ್
ಇಂಡಿ ಉಜ್ಜೇನ್ನಿ ಬಸ್ಸು ಪುನರಾರಂಭ ಭಕ್ತ ವರ್ಗ ಹರ್ಷ ಇಂಡಿ: ಸುಕ್ಷೇತ್ರ ಉಜ್ಜೇನ್ನಿ ಶ್ರೀ ಮರುಳಸಿದ್ದೇಶ್ವರ ದೇವರ ದರ್ಶನ ಪಡೆಯಲು ಭಕ್ತರ ಬೇಡಿಕೆಯಂತೆ ಹಾಗೂ ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರ ಆದೇಶದಂತೆ ಇದೆ ದಿನಾಂಕ 29-12-2024 ರಂದು  ಇಂಡಿ ಉಜ್ಜೇನ್ನಿ ಬಸ್ಸು ಮತ್ತೆ ಪುನರಾರಂಭ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ರಸ್ತೆ ಇಲಾಖೆ ಇಂಡಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.ಈ ಮೊದಲು ಇಂಡಿ ಉಜ್ಜೇನ್ನಿ ಬಸ್ಸು ಸಂಚಾರ ಮಾಡುತ್ತಿತ್ತು ಆದರೆ ಕಾರಣಾಂತರದಿಂದ ಬಂದ ಮಾಡಲಾಯಿತು.ಇದೆ ದಿನಾಂಕ 25-12-2024  ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಶ್ರೀ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಸರ್ವಧರ್ಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ ಶ್ರೀ ಉಜ್ಜೇನ್ನಿ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಗಮನಕ್ಕೆ ತಂದ್ದಿದರು, ಇದಕ್ಕೆ ಸ್ಪಂದಿಸಿದ ಶಾಸಕರು ಮತ್ತೆ ಇಂಡಿ ಉಜ್ಜೇನ್ನಿ ಬಸ್ಸು ಪ್ರಾರಂಭಿಸಲು ಆದೇಶಿಸಿದ್ದರು.ಅದರಂತೆ ಇಂದು ಬಸ್ಸು ಪ್ರಾರಂಭಿಸಲಾಗಿದೆ.ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮಕ್ಕೆ ಇಂಡಿ ಉಜ್ಜೇನ್ನಿ ಬಸ್ಸು ಜೋಡಗುಡಿ ಬರುತ್ತಿದ್ದಂತೆ ನೂರಾರು ಜನ ಸೇರಿ ಶ್ರೀ ಮರುಳಸಿದ್ದೇಶ್ವರ ದೇವಾಸ್ಥಾನದ ಹತ್ತಿರ ಬಸ್ಸು ತಡೆದು ಬ‌ಸ್ಸಿಗೆ ವೀಶಷ ಪೂ...

ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು’ ಒಂದು ದಿನದ ಕಾರ್ಯಗಾರದ.

ಇಮೇಜ್
 ‘ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು’ ಒಂದು ದಿನದ ಕಾರ್ಯಗಾರದ. ದಿನಾಂಕ: ೨೭-೧೧-೨೦೨೪ ರಂದು  ನಗರದ ಎಸ್.ಎಸ್.ವ್ಹಿ.ವ್ಹಿ ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ & ವಾಣಿಜ್ಯಶಾಸ್ತç ವಿಭಾಗದ ವತಿಯಿಂದ ‘ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು’ ಒಂದು ದಿನದ ಕಾರ್ಯಗಾರ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ.ಸಿದ್ದನಗೌಡ, ಮುಖ್ಯ-ವ್ಯವಸ್ಥಾಪಕರು, ಕೆನೆರಾ ಬ್ಯಾಂಕ್ ಇಂಡಿ, ಇವರು ಮಾತನಾಡುತ್ತ ಬ್ಯಾಂಕಿಂಗ್ ವಲಯದ ಸುಧಾರಣೆ ಭಾರತದಲ್ಲಿನ ಬ್ಯಾಕಿಂಗ್ ವಲಯದ ಸುಧಾರಣಿಯು ೧೯೯೧ರಲ್ಲಿ ಜಾರಿಗೊಳಿಸಲಾದ ವ್ಯಾಪಕ ಆರ್ಥಿಕ ಸುಧಾರಣಿಗಳ ಒಂದು ಭಾಗವಾಯಿತು. ನರಸಿಂಮ್ ಸಮಿತಿಯು ೧೯೯೧ ಮತ್ತು ೧೯೯೮ರಲ್ಲಿ ಸಲ್ಲಿಸಿದ ಎರಡು ವರದಿಗಳು ಕಳೆದ ಕೆಲವು ವರ್ಷಗಳ ಬ್ಯಾಕಿಂಗ್ ವಲಯದ ಸುಧಾರಣೆಗಳ ಮೇಲೆ ಭಾರಿ ಪ್ರಭಾವ ಬೀರಿವೆ. ಈ ಹಿಂದೆ ಬ್ಯಾಂಕಿಂಗ್ ವಲಯದ ಕಾರ್ಯದಕ್ಷತೆಮತ್ತು ಲಾಭ ಗಳಿಕೆಯು ಭಾರೀ ಹಾನಿಗೊಳಗಾಗಿತ್ತು.ಇದರಿಂದಾಗಿ ಬ್ಯಾಕಿಂಗ್ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆ ತರಬೆಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣದಿಂದಾಗಿ ಸರ್ಕಾರವು ಬ್ಯಾಕಿಂಗ್ ವಲಯದಲ್ಲಿ ಸ್ಪರ್ದೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ವ್ಯಾಪಕ ಮರುಸಂಘಟನೆ ಮತ್ತು ಸುಧಾರಣೆ ಕೈಹಾಕಿತು. ಈ ಉದ್ದೆಶಕ್ಕಾಗಿ ಸರ್...

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಮೇಜ್
  ನ್ಯಾಯಯುತ ಬೇಡಿಕೆಗಳಿಗೆ ಸದಾ ಸರ್ಕಾರದ ಸ್ಪಂದನೆ  : ಶಾಸಕ ಯಶವಂತರಾಯಗೌಡ ಪಾಟೀಲ ಇಂಡಿ: ಸಾರ್ವಜನಿಕ ಜೀವನದಲ್ಲಿ ಲೆಕ್ಕ ಕೇಳುವುದು ,ಲೆಕ್ಕ ಕೊಡುವದು ಸಾಮಾನ್ಯ ಸಂಗತಿ ಇದರಲ್ಲಿ ಯಾವ ವಿಶೇಷ ಇಲ್ಲ. ಇದನ್ನು ಅರಿತುಕೊಂಡು ಸದ್ಗುರು ಶ್ರೀ ಶಾಂತೇಶ್ವರನ ಆಶೀರ್ವಾದದಿಂದ ಸಾರ್ವಜನಿಕರ ಆಶಯದಂತೆ ಲೆಕ್ಕಪತ್ರ ಮಂಡಿಸುವುದು ಕಮಿಟಿಯ ಕರ್ತವ್ಯ ಇದರಲ್ಲಿ ಲೋಪದೋಷಗಳಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಇಂತಹ ನ್ಯಾಯಯುತ ಹೋರಾಟಕ್ಕೆ ಘನ ಕರ್ನಾಟಕ ಸರ್ಕಾರ ಅದರಲ್ಲಿ ವಿಶೇಷವಾಗಿ ಸರಕಾರದ ಪ್ರತಿನಿಧಿಯಾಗಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ ಹೋರಾಟ ಸಮಿತಿಯಲ್ಲಿರುವ ತಾವೆಲ್ಲರೂ ಈಗಾಗಲೇ 17 ದಿನಗಳಿಂದ ಶಾಂತ ರೀತಿಯಿಂದ ಟ್ರಸ್ಟ್ ಕಮಿಟಿ ವಿರುದ್ಧ ಹೋರಾಟ ಮಾಡುತ್ತಿದ್ದೀರಿ ಇದನ್ನು ಕಮಿಟಿಯವರು ಹಾಗೂ ಊರಿನ ಸಾರ್ವಜನಿಕರೆಲ್ಲರೂ ಕೂಡಿಕೊಂಡು ಬಗೆಹರಿಸಬಹುದು ಯಾಕೆಂದರೆ ದೇಶ ದೇಶಗಳ ಮಧ್ಯೆ ಇರುವ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಂಡು ಬರುತ್ತಿರುವ ಉದಾಹರಣೆಗಳನ್ನು ನಾವು ಕಾಣುತ್ತೇವೆ ಹೀಗಾಗಿ ಸದ್ಗುರು ಶಾಂತೇಶ್ವರನ ಕೃಪಾಶೀರ್ವಾದದಿಂದ ಕಮಿಟಿಯವರು ಹಾಗೂ ಸಾರ್ವಜನಿಕರೆಲ್ಲರೂ ಕೂಡ...

“ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು ಸಮಪಾಲು ನೀಡಿದೆ.

ಇಮೇಜ್
“ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು ಸಮಪಾಲು ನೀಡಿದೆ.         ದಿನಾಂಕ ೨೬/೧೧/೨೦೨೪ ರಂದು ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ & ರಾಜ್ಯಶಾಸ್ತç ವಿಭಾಗದ ಅಡಿಯಲ್ಲಿ ಭಾರತೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಜರುಗಿತು.   ಈ ಕಾರ್ಯಕ್ರಮದ  ಸಹ ಪ್ರಾಧ್ಯಾಪಕರಾದ ಡಾ.ಆನಂದ ಸಿ. ನಡವಿನಮನಿ ಅವರು ಮಾತನಾಡುತ್ತಾ “ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು ಸಮಪಾಲು ನೀಡಿದೆ. ಭಾರತೀಯರಾದ ನಾವು ಎಂಬ ವ್ಯಾಖ್ಯೆಯೊಂದಿಗೆ ಆರಂಭವಾಗುವ ನಮ್ಮ ಸಂವಿಧಾನ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟçಕ್ಕೆ ಸಂವಿಧಾನ  ಅರ್ಪಣೆಗೊಂಡಿರುತ್ತದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಮಾನತೆಯ ಅವಕಾಶ ಲಭಿಸಿದೆ.” ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಡಾ.ಎಸ್.ಬಿ.ಜಾಧವ ಅವರು ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡುತ್ತ “ಭಾರತೀಯರಾದ ನಾವು ವಿಶೆಷವಾಗಿ ವಿದ್ಯಾರ್ಥಿಗಳು ಹಾಗೂ ಯುವಸಮುದಾಯ ಭಾರತದ ಸಂವಿಧಾನದ ಪೀಠಿಕೆಯನ್ನು ಓದಿ ಅರ್ಥಮ...

ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಅಗರಖೇಡದಲ್ಲಿ ಭಾರತದ ಸಂವಿಧಾನ ದಿನವನ್ನು ಆಚರಿಸಲಾಯಿತು.

ಇಮೇಜ್
ಮಂಗಳವಾರ, 2024 ನವೆಂಬರ್ 26 ರಂದು, ಸರ್ಕಾರಿ ಉರ್ದು  ಕಿರಿಯ ಪ್ರಾಥಮಿಕ ಶಾಲೆ ಅಗರಖೇಡದಲ್ಲಿ ಭಾರತದ ಸಂವಿಧಾನ ದಿನವನ್ನು ಆಚರಿಸಲಾಯಿತು. ಭಾರತದ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ. 1949 ರಲ್ಲಿ ಈ ದಿನ, ಭಾರತ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಅತ್ಯಂತ ಐತಿಹಾಸಿಕ ಕ್ಷಣವನ್ನು ಈ ದಿನವು ನೆನಪಿಗೆ ತರಿಸುತ್ತದೆ. ಈ ಸಂವಿಧಾನವು 1950 ರ ಜನವರಿ 26 ರಂದು ಜಾರಿಗೊಳ್ಳುವುದಾದರೂ, ನವೆಂಬರ್ 26 ಅನ್ನು ಭಾರತದ ಪ್ರಜಾಪ್ರಭುತ್ವದ ಮೂಲಸಿದ್ಧಾಂತಗಳು ಮತ್ತು ಮೌಲ್ಯಗಳನ್ನು ಸ್ಮರಿಸಲು ಅರ್ಪಿಸಲಾಗಿದೆ. ಭಾರತದ ಸಂವಿಧಾನವು ಜಗತ್ತಿನ ಅತ್ಯಂತ ಸಮಗ್ರ ಮತ್ತು ವಿವರವಾದ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅದನ್ನು ರಚಿಸಲು ಸುಮಾರು ಮೂರು ವರ್ಷಗಳ ಸಮಯ ತೆಗೆದುಕೊಂಡಿತು. ಡಾ. ಭೀಮರಾವ್ ಅಂಬೇಡ್ಕರ್, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಅವರನ್ನು "ಸಂವಿಧಾನ ಪಿತಾಮಹ" ಎಂದು ಕರೆಯಲಾಗುತ್ತದೆ. ಈ ಸಂವಿಧಾನವು ಭಾರತವನ್ನು ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ತತ್ವಗಳ ದೇಶವಾಗಿ ಸ್ಥಾಪಿಸುತ್ತದೆ ಮತ್ತು ಎಲ್ಲಾ ನಾಗರಿಕರಿಗೆ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಭರವಸೆ ನೀಡುತ್ತದೆ. ಈ ಸಂಧರ್ಭದಲ್ಲಿ ಮುಖ್ಯ ಗುರುಗಳ ಖಲಿಲ್ ಅತ್ತಾರ, ಸಹ ಶಿಕ್ಷಕರಾದ ಅತೀಕ ನಾಗಠಾಣ, ಶಾವರಿಯಾ ಅವಜಿ ಸೇರಿದಂತೆ ಇತರರು ಇದ್ದರು. 

ಪ್ರಜಾಪ್ರಭುತ್ವದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿ- ಸಂತೋಷ ಬಂಡೆ

ಇಮೇಜ್
  ಪ್ರಜಾಪ್ರಭುತ್ವದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿ- ಸಂತೋಷ ಬಂಡೆ ಇಂಡಿ: ನಮ್ಮ ಸಂವಿಧಾನವು ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ, ಮೂಲಭೂತ ಹಕ್ಕು-ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲವಾಗಿದ್ದು, ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಆಗಿದೆ ಎಂದು ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಹೇಳಿದರು.         ಅವರು ಮಂಗಳವಾರದಂದು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಹಮ್ಮಿಕೊಂಡ 'ಭಾರತದ ಸಂವಿಧಾನ ಹೆಜ್ಜೆಗಳು' ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.  ಸಂವಿಧಾನ ಸರ್ವ ಜನರ ಆಸ್ತಿ. ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಉಳಿಯಬೇಕಾದರೆ, ಸಂವಿಧಾನದ ತತ್ವಗಳನ್ನು ನಾವೆಲ್ಲರೂ ಅನುಸರಿಸಬೇಕು. ಪ್ರಜಾಪ್ರಭುತ್ವದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರಿಗೂ ಸಂವಿಧಾನ ಅಧ್ಯಯನ ಮತ್ತು ಓದು ಬಹಳ ಅಗತ್ಯ ಎಂದರು.        ಪ್ರಭಾರಿ ಪ್ರಾಚಾರ್ಯ ಪಿ ವೈ ರಜನೀಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಪೀಳಿಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಗೌರವ ನೀಡಬೇಕು. ಸಂವಿಧಾನ ನೀಡಿರುವ ಕಾನೂನುಗಳಿಗೆ ವಿಧೇಯರಾಗಿರಬೇಕು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಇಂದಿನ ಯುವಸಮೂಹಕ್ಕೆ ತಿಳಿಸಬೇಕಾಗಿ...

ಮಕ್ಕಳ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ-ಯಶವಂತರಾಯಗೌಡ ಪಾಟೀಲ

ಇಮೇಜ್
  ಮಕ್ಕಳ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ-ಯಶವಂತರಾಯಗೌಡ ಪಾಟೀಲ . ಇಂ ಡಿ: ಎಲ್ಲ ಮಕ್ಕಳಲ್ಲೂ ವಿಶೇಷವಾದ ಪ್ರತಿಭೆ ಅಡಗಿದ್ದು, ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.         ಅವರು ಸೋಮವಾರದಂದು ಪಟ್ಟಣದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕರ್ನಾಟಕ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.         ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಪ್ರತಿಭಾ ಕಾರಂಜಿಯಂಥ ಸ್ಪರ್ಧೆಗಳು ಅವಶ್ಯ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ, ಇನ್ನೂ ಉನ್ನತ ಸಾಧನೆ ಮಾಡಬಲ್ಲರು ಎಂದು ಹೇಳಿದರು.         ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪಿ ಬಿ ಕತ್ತಿ ಮಾತನಾಡಿ, ಮಕ್ಕಳಿಗೆ ನಾಡಿನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸಿಕೊಡುವ ಮೂಲಕ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.   ...

ಮಾದಕ ದ್ರವ್ಯಗಳ ಸೇವೆನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ: ಡಾ.ಅಶೋಕ ಜಾಧವ

ಇಮೇಜ್
ಮಾದಕ ದ್ರವ್ಯಗಳ ಸೇವೆನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ: ಡಾ.ಅಶೋಕ ಜಾಧವ ದಿನಾಂಕ ೨೩-೧೧-೨೦೨೪ ರಂದು ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿÂಜ್ಯ ಹಾಗೂ ಶ್ರೀ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯ ಇಂಡಿಯಲ್ಲಿ ಎನ್‌ಎಸ್‌ಎಸ್ ಘಟಕ, ರೆಡ್‌ಕ್ರಾಸ್ ಘಟಕÀ & ಎಬಿವ್ಹಿಪಿ ಘಟಕ ಇಂಡಿ ಅಡಿಯಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮ ಆಚರಿಸಲಾಯಿತು.   ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಅಶೋಕಕುಮಾರ ಜಾಧವ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ದೇವರಹಿಪ್ಪರಗಿ,  ಇವರು ಮಾತನಾಡುತ್ತ ‘ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ೨೦೨೦ ರಲ್ಲಿ ಪ್ರಾರಂಭಿಸಿದ ಕಾರ್ಯಕ್ರಮವನ್ನು ೨೭೨ ಅತ್ಯಂತ ದುರ್ಬಲ ಜಿಲ್ಲೆಗಳ ಗುರಿಯೊಂದಿಗೆ ಪ್ರಾರಂಭಿಸಲಾಯಿತು. ಇದು ಈಗ ದೇಶಾದ್ಯಂತ ೩೭೨ ಜಿಲ್ಲೆಗಳಲ್ಲಿ ೩.೧೦ ಕೋಟಿ ಯುವ ವ್ಯಕ್ತಿಗಳು ಸೇರಿದಂತೆ ೯.೫೦ ಕೋಟಿ ಜನರನ್ನು ಮತ್ತು ೩ ಲಕ್ಷಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತಲುಪಿದೆ. ಎನ್‌ಎಮ್‌ಬಿಎ ಮಾದಕ ವ್ಯಸನದ ಅಪಾಯಗಳನ್ನು ಒತ್ತಿಹೇಳುವ ವಿವಿಧ ಚಟುವಟಿಕೆಗಳನ್ನು ನಡೆಸಿದೆ. ಮಾದಕ ವ್ಯಸನವನ್ನು ನಿಭಾಯಿಸುವಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸಲು ಮತ್ತು ಆರೋಗ್ಯಕರ, ಉತ್ಪಾದಕ ಸಮಾಜವನ್ನು ಉತ್ತೇಜಿಸಲು ಸಮುದಾಯದ ಒಳಗೊಳ್ಳುವಿಕೆಗೆ ಕಾರ್ಯಕ್ರಮವು ಆದ್ಯತೆ ನೀಡುತ್ತದೆ. ಮ...

ಗ್ರಾಮೀಣ ಬಡ ಮಕ್ಕಳಿಗೆ ಶಿಸ್ತುಬದ್ಧ ಶಿಕ್ಷಣ ನೀಡಿ:ಯಶವಂತರಾಯಗೌಡ ಪಾಟೀಲ

ಇಮೇಜ್
  ಗ್ರಾಮೀಣ ಬಡ ಮಕ್ಕಳಿಗೆ ಶಿಸ್ತುಬದ್ಧ ಶಿಕ್ಷಣ ನೀಡಿ:ಯಶವಂತರಾಯಗೌಡ ಪಾಟೀಲ ಇಂಡಿ: ತಮ್ಮ ಜಮೀನಿನಿಂದ ಬಂದ ಆರ್ಥಿಕ ಲಾಭವನ್ನು ಸಂಪೂರ್ಣವಾಗಿ ಶಿಕ್ಷಣ ಸಂಸ್ಥೆಗೆ ಹಾಕಿ, ಗಡಿ ಭಾಗದ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುತ್ತಿರುವ ಹಜರತ ನಾಸೀರಜಂಗಸಾಹೇಬ ದರ್ಗಾ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘವು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.          ಅವರು ರವಿವಾರದಂದು ತಾಲೂಕಿನ ಬರಗುಡಿ ಗ್ರಾಮದ ಶಾಲಾ ಆವರಣದಲ್ಲಿ ಹಜರತ ನಾಸೀರಜಂಗಸಾಹೇಬ ದರ್ಗಾ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.          ಇಂದಿನ ಯುಗದಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಶಿಸ್ತುಬದ್ಧ ಉಚಿತ ಶಿಕ್ಷಣ ನೀಡುವ ಅಗತ್ಯವಿದೆ. ಜತೆಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರದ ಅಡಿಪಾಯ ಹಾಕಬೇಕು. ಯಾವುದೇ ಮೂಲಗಳಿಂದ ಧನಸಹಾಯ ಪಡೆಯದೇ ತಮ್ಮ ಸ್ವಂತ ಹಣದಿಂದ ಉತ್ತಮ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.         ಶಾಂತೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂಬು...

ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಶಿಕ್ಷಣ ಬಹುಮುಖ್ಯವಾಗಿದ್ದು,

ಇಮೇಜ್
2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮದ ವರದಿ   ದಿನಾಂಕ 22.11.2024 ರಂದು ನಗರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಜಿ.ಆರ್. ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ಬಿಎ/ಬಿಕಾಂ/ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ರೆಡ್‌ಕ್ರಾಸ್ ಸ್ಕೌಟ್ಸ್ಸ ಘಟಕಗಳ  ಉದ್ಘಾಟನಾ ಸಮಾರಂಭ ಜರುಗಿತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಅಶೋಕಕುಮಾರ ಜಾಧವ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ದೇವರಹಿಪ್ಪರಗಿ,  ಇವರು ಮಾತನಾಡುತ್ತ ‘ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಶಿಕ್ಷಣ ಬಹುಮುಖ್ಯವಾಗಿದ್ದು, ಕಠಿಣ ಪ್ರಯತ್ನ ಮಾಡಿದ್ದಾದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ವಿದ್ಯಾರ್ಥಿಗಳು ಸಂಸ್ಕೃತಿ ಆಧಾರಿತ ಕೆಲವು ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸುವದರ ಜೊತೆಗೆ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಕಲಿಕೆಯಲ್ಲಿ ಕುತೂಹಲಗಳಾಗಿದ್ದರೆ ವಿಚಾರ ಶಕ್ತಿ, ಆಸಕ್ತಿ, ಸಕಾರಾತ್ಮಕ ಚಿಂತನೆ ಹೆಚ್ಚಿಸುತ್ತದೆ. ನಾವೇಲ್ಲರೂ ಒಂದೇ ಎಂಬ ಭಾವನೆ ಬೆಳೆಯುತ್ತವೆ.  ಪರೋಪಕಾರಾಯ ವಹಾಂತಿ ನದ್...

ಡಿ ೧೨ ರಂದು ಬೆಳಗ್ಗೆ ೧೦.೩೦ ರಿಂದ ಸಂಜೆ ೫ ರ ವರೆಗೆ ಮೆಗಾ ಲೋಕ ಅದಾಲತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಇಮೇಜ್
  ಇಂಡಿ   :   ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸ್ಥಳೀಯ ನ್ಯಾಯಾಲಯದಲ್ಲಿ ಡಿ ೧೨ ರಂದು ಬೆಳಗ್ಗೆ ೧೦.೩೦ ರಿಂದ ಸಂಜೆ ೫ ರ ವರೆಗೆ ಮೆಗಾ ಲೋಕ ಅದಾಲತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಶ್ರೀ ಕೋಟೆಪ್ಪ ಕಾಂಬಳೆ  ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ  ಲೋಕ ಅದಾಲತ ಆಯೋಜಿಸಲಾಗಿದೆ. ಇದು ಈ ವರ್ಷದ ಕೊನೆಯ ಲೋಕ ಅದಾಲತ ಎಂದರು. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ೧೪೯೧ ಪ್ರಕರಣಗಳು ಇತ್ಯರ್ಥ ಗೊಂಡಿವೆ. ಮತ್ತು ೨ ಕೋಟಿ ೫೨ ಲಕ್ಷ ೪೫೫೧೧  ರೂ ಬ್ಯಾಂಕು, ಪುರಸಭೆ, ಗ್ರಾ.ಪಂ ಕರವಸೂಲಾತಿ, ಫೈನಾನ್ಸ, ಬಡ್ಡಿ ವ್ಯವಹಾರ ಸೇರಿದಂತೆ ಇಲಾಖೆಗಳಿಗೆ ಸಂದಾಯವಾಗಬಹುದಾದ ಹಣ ಸಂದಾಯವಾಗಿದೆ ಎಂದರು. ಈ ಬಾರಿ ಅದಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಈ ಅದಾಲತ್ ನಲ್ಲಿ ಹೊಲ, ಮನೆ, ಬ್ಯಾಂಕು, ಅಪಘಾತ, ಚೆಕ್ ಬೌನ್ಸ, ಜನನ, ಸಹಕಾರಿ, ಸಣ್ಣ ಪುಟ್ಟ ಗಲಾಟೆ, ಆರೋಪ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ವಿಚಾರಣೆ ...

ದೇಶದ ಅಭಿವೃದ್ದಿಗೆ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದಾಗಿದ್ದು

ಇಮೇಜ್
ದೇಶದ ಅಭಿವೃದ್ದಿಗೆ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದಾಗಿದ್ದು ಅವರು ಕೆಲಸ ಮಾಡದಿದ್ದರೆ ದೇಶದ ಅಭಿವೃದ್ದಿಯ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗುತ್ತದೆ .   ಇಂಡಿ   : ದೇಶದ ಅಭಿವೃದ್ದಿಗೆ ಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದಾಗಿದ್ದು ಅವರು ಕೆಲಸ ಮಾಡದಿದ್ದರೆ ದೇಶದ ಅಭಿವೃದ್ದಿಯ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಶ್ರೀ ಕೋಟೆಪ್ಪ ಕಾಂಬಳೆ ಅಭಿಪ್ರಾಯ ವ್ಯಕ್ತ ಪಡಿಸಿದರು.  ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಗುರುಭವನ ಸಬಾಭವನದಲ್ಲಿ ಹಮ್ಮಿಕೊಂಡ ಕಾರ್ಮಿಕರಿಗೆ ಸಂಬAದಿಸಿದ ವಿವಿಧ ಕಾಯ್ದೆಗಳು ಹಾಗೂ ಸರಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಏರ್ಪಡಿಸಿದ ತಾಲೂಕಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.  ಜಗತ್ತಿನ ಎಲ್ಲ ರಾಷ್ಟ್ರಗಳ ಕಾರ್ಮಿಕರ ಸುರಕ್ಷತೆ ಕುರಿತು ಕಾಯ್ದೆ ರೂಪಿಸಿವೆ. ದಿನನಿತ್ಯದಲ್ಲಿ ಸಾಮಾನ್ಯ ಜನರಿಗೆ ಕಾನೂನುಗಳ ಬಗ್ಗೆ ಮಾಹಿತಿ ನೀಡುವದು ನಮ್ಮ ಕರ್ತವ್ಯ. ಕೆಲಸ ಕೀಳು ಎಂದು ತಿಳಿದುಕೊಳ್ಳದೆ ಶ್ರದ್ದೆಯಿಂದ ಮತ್ತು ಸುರಕ್ಷತೆಯಿಂದ ಕೆಲಸ ಮಾಡಲು ಹೆಚ್ಚಿನ ಒತ್ತು ನೀಡಬೇಕು ಎಂದರು. ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ ಮಾತನಾಡಿ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ಇವೆ. ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ...

ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ, ವಿಶ್ವಭಾರತಿ ಸಂಸ್ಥೆಯ ಸೇವೆ, ಶ್ರಮ ಅನನ್ಯ

ಇಮೇಜ್
  ಇಂಡಿ : ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ, ವಿಶ್ವಭಾರತಿ ಸಂಸ್ಥೆಯ ಸೇವೆ, ಶ್ರಮ ಅನನ್ಯ ಎಂದು ಜೆಡಿಎಸ್ ತಾಲೂಕಾ ಅಧ್ಯಕ್ಷರು ಬಿ.ಡಿ.ಪಾಟೀಲ ಹೇಳಿದರು. ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಶಿಕ್ಷಣ ಸಮೂಹದ ಶಾಲೆ ಮತ್ತು ವಸತಿ ನಿಲಯದ ನೂತನ ಕಟ್ಟಡದ ಉಧ್ವಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಇಂತಹ ಶಿಕ್ಷಣ ಸಂಸ್ಥೆ ಭವ್ಯವಾದ ಶಾಲೆ ಮತ್ತು ವಸತಿ ನಿಲಯದ ಕಟ್ಟಡ ಇಂದು ಉದ್ವಾಟನೆಗೋಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.             ಕಾತ್ರಾಳ-ಬಾಲಗಾಂವದ ಡಾ|| ಅಮೃತಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಂಸ್ಥೆಯಲ್ಲಿ ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ನೋಡೊದರೆ ಇಲ್ಲಿನ ಶೀಕ್ಷಣದ ಗುಣಮಟ್ಟ ಮತ್ತು ಶಾಲೆಯ ಶಿಕ್ಷಕರ ಮೇಲೆ ಜನರು ಇಟ್ಟಿರುವ ನಂಬಿಕೆ ತಿಳಿಯುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಶಾಂತಿ, ಶಿಕ್ಷಣ, ಸಂಸ್ಕಾರ ಉತ್ತಮವಾಗಿ ಬೆಳೆಸಿದ್ದಾರೆ ಎಂದರು. ಖೇಡಗಿಯ ವಿರಕ್ತಮಠದ ಶಿವಬಸವರಾಜೇಂದ್ರ ಶ್ರೀಗಳು ಆಶಿರ್ವಚನ ನೀಡಿ, ಭವ್ಯವಾದ ಕಟ್ಟಡವಾಗಲು ಸ್ವಾಮಿಜಿಗಳ ಆರ್ಶಿವಾದ ಹಾಗೂ ಕಲ್ಮನಿ ಪರವಾರದ ಪ್ರಾಮಾಣಿಕ ಪಯತ್ನದಿಂದ ಇದೆಲ್ಲ ಸಾದ್ಯಾವಾಗಿದೆ ಎಂದರು. ಸಿದ್ದರಾಮೇಶ್ವರ ಪಟ್ಟದೇವರು ಮಾತನಾಡಿದರು. ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಗ...

ಹಿಂದು ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಸ್ಥಳ ಮಕ್ಕಾ ಯಾತ್ರೆಗೆ ತೆರಳುತ್ತಿರುವ ಯಾತ್ರಿಯರಿಗೆ ಸನ್ಮಾನ.

ಇಮೇಜ್
  ಹಿಂದು ಹಾಗೂ ಮುಸ್ಲಿಂ ಸಮಾಜದ ವತಿಯಿಂದ ಪವಿತ್ರ ಸ್ಥಳ ಮಕ್ಕಾ ಯಾತ್ರೆಗೆ  ತೆರಳುತ್ತಿರುವ ಯಾತ್ರಿಯರಿಗೆ ಸನ್ಮಾನ. ಇಂಡಿ. ತಾಲೂಕಿನ ಇಂಗಳಗಿ ಗ್ರಾಮದ ಮುಸ್ಲಿಂ ಮುಖಂಡರಾದ ಗುಡುಸಾಬ ಅಹಿರಸಂಗ ಇವರು ತಮ್ಮ ಧರ್ಮ ಪತ್ನಿಯೊಂದಿಗೆ  ಪವಿತ್ರ ಸ್ಥಳ ವಾದ ಮಕ್ಕಾ ಹಾಗೂ ಮದಿನಾ ಉಮ್ರಾ ಮಾಡಲು ಹೊರಡುತ್ತಿದ್ದಾರೆ. ಇವರಿಗೆ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ಹಿಂದು ಭಾಂದವರು ಸನ್ಮಾನ ಮಾಡಿರು.  ಈ ಸಂದರ್ಭದಲ್ಲಿ ಬಿ.ಎಲ್.ಇ.ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಹಸನ ಮುಜಾವರ ಮಾತನಾಡಿ ಮುಸ್ಲಿಮರ ಪವಿತ್ರವಾದ ಸ್ಥಳ ವಾದ ಮಕ್ಕಾ‌ಮದಿನಾದಲ್ಲಿ ಎಲ್ಲರ ಪ್ರಾಥನೆ ಹಾಗೂ ದುವಾ ಅಲ್ಲಾಹನು ಖಂಡಿತವಾಗಿ ಸ್ವಿಕಾರನಾಡುತ್ತಾನೆ ಆದ್ದರಿಂದ ತಾವು  ಉಮ್ರಾ ಮಾಡಿ ನಮ್ಮ ಗ್ರಾಮ ಹಾಗೂ ದೇಶದಲ್ಲಿ ಶಾಂತಿ ಗಾಗಿ ಹಾಗೂ ನಮ್ಮ ದೇಶದ ಅಭಿವೃದ್ಧಿಗಾಗಿ ಪ್ರಾಥನೆ ಮಾಡಿ ನಿಮ್ಮ ಈ ಯಾತ್ರೆ ಯಶಸ್ಸುವಾಗಳಿ ಎಂದು ದೇವರಲ್ಲಿ ಪ್ರಾಥನೆ ಮಾಡುತ್ತವೆ ಎಂದರು. ಈ ಸಂದರ್ಭದಲ್ಲಿ ಅಂಜುಮನ ಅಧ್ಯಕ್ಷ ಹುಸೇನ್ ಅಹಿರಸಂಗ, ಕಾರ್ಯದರ್ಶಿ ಶಕೀಲ ಮನೂರ, ಸದ್ದಾಂ ಹುಸೆನ ಜಮಾದಾರ,  ಸುಭಾಶ ತೋರತ, ಅನ್ನಪ್ಪ ಅಹಿರಸಂಗ,  ಪ್ರಭು ಹೊಸಮನಿ, ಸಿದ್ದು ಹೊಸಮನಿ, ಉಮೇಶ ಚೌಹಾನ, ಶಫೀಕ ಪಟೇಲ್ ಮಸಳಿ, ಬಾಬು ಅತ್ತಾರ, ಸಾದೀಕ ಬಿರಾದಾರ, ಬಾಶಾ ಸಾಬ ಮನೂರ, ಮಹಿಬೂಬ ಪಟೇಲ್,ಬಾಬು ಪಟೇಲ, ಬಾಬು ಮಸಳಿ,ಹುಸೇನ ನರವೆ, ಚಾಂದ ಶೇಖ್, ರಹೆಮಾನ ಮುಲ್ಲಾ, ಸಮ...

ಪುಸ್ತಕಕ್ಕಿಂತ ಮತ್ತೊಬ್ಬ ಒಳ್ಳೆಯ ಸ್ನೇಹಿತ ಇರಲು ಸಾಧ್ಯವಿಲ್ಲ.

ಇಮೇಜ್
  ಪುಸ್ತಕಕ್ಕಿಂತ ಮತ್ತೊಬ್ಬ ಒಳ್ಳೆಯ ಸ್ನೇಹಿತ ಇರಲು ಸಾಧ್ಯವಿಲ್ಲ.   ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ         ದಿನಾಂಕ ೨೦-೧೧-೨೦೨೪ ರಂದು ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಅಡಿಯಲ್ಲಿ ರಾಷ್ಟಿçÃಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಜರುಗಿತು.   ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ.ಎಮ್.ಕೆ.ಬಿರಾದಾರ ಗ್ರಂಥಪಾಲಕರು, ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಚಡಚಣ ಅವರು ಮಾತನಾಡುತ್ತಾ “ಗ್ರಂಥಾಯಲಗಳು ದೇವಾಲಯಗಳಿದ್ದಂತೆ. ಹಣವಿದ್ದರೆ ಕಳೆದು ಹೋಗಬಹುದು. ಆದರೆ ಪುಸ್ತಕಗಳಿಂದ ಪಡೆದ ಜ್ಞಾನ ಕಳೆದು ಹೋಗಲು ಸಾಧ್ಯವೇ ಇಲ್ಲ ಗ್ರಂಥಗಳನ್ನು ಅಧ್ಯಯನ ಮಾಡುವವರು ಮಹೋನ್ನತ ನಾಯಕರಾಗಿ ಬೆಳದ ಉಧಾಹರಣೆಗಳು ಸಾಕಷ್ಟು ಇವೆ. ಪುಸ್ತಕಕ್ಕಿಂತ ಮತ್ತೊಬ್ಬ ಒಳ್ಳೆಯ ಸ್ನೇಹಿತ ಇರಲು ಸಾಧ್ಯವಿಲ್ಲ. ಪುಸ್ತಕ ಓದುವಿಕೆ ನಿರಂತರವಾಗಿದ್ದರೆ ವ್ಯಕ್ತಿ ಬೌದ್ಧಿಕಾವಗಿಯೂ ಜೀವಂತವಾಗಿರುತ್ತಾನೆ. ಆದರೆ ಇಂದಿನ ಯುವಪೀಳಿಗೆ ಮೊಬೈಲ್ ಸಂಸ್ಕೃತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತ ಓದುವಿಕೆಯಿಂದ ದೂರ ಉಳಿಯುತ್ತಿದೆ. ಇದು ಬೆಸರದ ಸಂಗತಿ” ಎಂದು ಹೇಳಿದರು.   ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವ...

ಅಂತ್ರರಾಷ್ಟ್ರೀಯ ಲೆಕ್ಕ-ಪತ್ರ’ ದಿನಾಚರಣೆ ಕಾರ್ಯಕ್ರಮ

ಇಮೇಜ್
ಲೆಕ್ಕಪತ್ರ ನಿರ್ವಹಣೆ ಹಲವಾರು ಸಹಸ್ರಮಾನಗಳ ಹಿಂದಿನ ಒಂದು ಸ್ಥಾಪಿತ ಅಭ್ಯಾಸವಾಗಿದೆ.   ಇಂಡಿ : ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು, ಆರ್ಥಿಕತೆಯನ್ನು ಬೆಂಬಲಿಸಲು ಮತ್ತು ಹಣಕಾಸಿನ ಸಂಕೀರ್ಣತೆಗಳನ್ನು ನ್ಯಾವಿಗೇಟ್ ಮಾಡಲು ಜನರಿಗೆ ಸಹಾಯ ಮಾಡಲು ಲೆಕ್ಕಪರಿಶೋಧಕರು ಮಾಡುವ ಕೆಲಸವನ್ನು ಒಪ್ಪಿಕೊಳ್ಳುವ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸುನೀಲ ಪರಿಮಳ ಹೇಳಿದರು.  ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ  ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತç ವಿಭಾಗದ ವತಿಯಿಂದ ‘ಅಂತರ್‌ರಾಷ್ಟಿçÃಯ ಲೆಕ್ಕ-ಪತ್ರ’ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಲೆಕ್ಕಪತ್ರ ನಿರ್ವಹಣೆ ಹಲವಾರು ಸಹಸ್ರಮಾನಗಳ ಹಿಂದಿನ ಒಂದು ಸ್ಥಾಪಿತ ಅಭ್ಯಾಸವಾಗಿದೆ ಎಂದರು. ಪ್ರಾಚಾರ್ಯ ಡಾ.ಎಸ್.ಬಿ.ಜಾಧವಮಾತನಾಡಿ  ಪ್ರಾಚೀನ ಈಜಿಪ್ಟ್ ಮತ್ತು ಬ್ಯಾಬಿಲೋನಿಯಾದಲ್ಲಿನ ಸಂಶೋಧನೆಗಳ ಅವಿಷ್ಕಾಗಳು ಲೆಕ್ಕಪರಿಶೋಧನೆಯ ಪ್ರಭುತ್ವವನ್ನು ಸೂಚಿಸುತ್ತವೆ. ಇದು ಮಧ್ಯಯುಗ ಮತ್ತು ನವೋದಯ ಅವಧಿಯ ಉದ್ದಕ್ಕೂ ದೃಢವಾದ ಪ್ರಗತಿಯನ್ನು ಅನುಭವಿಸಿತು. ಈ ಯುಗದ ಅಸಂಖ್ಯಾತ ದಾಖಲೆಗಳ ಅಧ್ಯಯನವು ಸಾರ್ವಜನಿಕ ಆದಾಯಗಳು, ಖಾಸಗಿ ವೆಚ್ಚಗಳು, ಸರಕುಗಳ ವಿತರಣೆ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ವಿಸ್ತಾರವಾದ ಪ್ರಮಾಣಗಳನ್ನು ಪ್ರದೇಶಗಳಲ್ಲಿ ಇರಿಸಲಾಗಿದೆ ಎಂದು ...

ಜಾತಿ ವ್ಯವಸ್ಥೆಯ ವಿರುದ್ಧ ಕುಲ ಕುಲವೆಂದು ಹೊಡೆದಾಡಿದಿರಿ, ನಿಮ್ಮ ಕುಲದ ನೆಲೆಯಾವುದು ಬಲ್ಲಿರಾ?

ಇಮೇಜ್
  ಜಾತಿಯ ವಾಸನೆಯನ್ನು ಬಿಟ್ಟು ಮನುಷ್ಯರಂತೆ ಬದುಕಬೇಕು ಎಂದು ತಮ್ಮ ಕೀರ್ತನಗಳ ಮುಖಾಂತರ ಉಪದೇಶ ಕೊಟ್ಟ ಮಹಾನ್ ಸಂತ ಕನಕದಾಸರು.  ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಕನಕದಾಸರ ಜಯಂತಿ ದಿನಾಚರಣೆ ಕಾರ್ಯಕ್ರಮ ಜರುಗಿತು.   ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮಹಾವಿದ್ಯಾಲಯದ ಗ್ರಂಥಪಾಲಕರಾದ ಶ್ರೀ.ರಾಘವೇಂದ್ರ ಇಂಗನಾಳ  ಅವರು ಮಾತನಾಡುತ್ತಾ “ಜಾತಿಯ ವಾಸನೆಯನ್ನು ಬಿಟ್ಟು ಮನುಷ್ಯರಂತೆ ಬದುಕಬೇಕು ಎಂದು ತಮ್ಮ ಕೀರ್ತನಗಳ ಮುಖಾಂತರ ಉಪದೇಶ ಕೊಟ್ಟ ಮಹಾನ್ ಸಂತ ಕನಕದಾಸರು. ಜಾತಿ ವ್ಯವಸ್ಥೆಯ ವಿರುದ್ಧ ಕುಲ ಕುಲವೆಂದು ಹೊಡೆದಾಡಿದಿರಿ, ನಿಮ್ಮ ಕುಲದ ನೆಲೆಯಾವುದು ಬಲ್ಲಿರಾ? ಎಂದು ಪ್ರಶ್ನಿಸಿದ ದಾಸ ಶ್ರೇಷ್ಠ ಕನಕದಾಸರಿಗೆ ನಾವು ಗೌರವ ಸಲ್ಲಿಸಬೇಕಾದರೆ ಮೊದಲು ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.   ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಡಾ.ಎಸ್.ಬಿ.ಜಾಧವ ಮಾತನಾಡುತ್ತ “ದಾಸ ಸಾಹಿತ್ಯ ಪರಂಪರೆಯ ಮೇರುಶಿಖರವಾಗಿರುವ ಕನಕದಾಸರು ಕ್ಲಿಷ್ಟ ವಿಷಯಗಳು ಹಾಗೂ ವೈಚಾರಿಕ ಚಿಂತನೆಗಳನ್ನು ಆಡುಭಾಷೆಯಲ್ಲಿ ಜನರಿಗೆ ತಲುಪಿಸುವ ಮೂ¯ಕ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ವೈಚಾರಿಕ ಕೀರ್ತನೆಗಳು ಕನ್ನಡ ಸಾಹಿ...

ವಚನಗಳು ಶರಣರ ಅನುಭಾವದ ದಿವ್ಯಬೆಳಕು-ಸಂತೋಷ ಬಂಡೆ

ಇಮೇಜ್
  ವಚನಗಳು ಶರಣರ ಅನುಭಾವದ ದಿವ್ಯಬೆಳಕು-ಸಂತೋಷ ಬಂಡೆ ಇಂಡಿ: ವೃತ್ತಿ ಪ್ರವೃತ್ತಿಯನ್ನು ಒಂದಾಗಿಸಿಕೊಂಡು ಬದುಕಿನ ಶಿಸ್ತನ್ನು ಸಮಾಜಕ್ಕೆ ನೀಡಿದ ಶರಣರ ಸಂದೇಶಗಳು ಗೀತಮಾತುಗಳಾಗಿದ್ದು, ಅವುಗಳು ಅನುಭಾವದ ದಿವ್ಯಬೆಳಕು ಮತ್ತು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.            ಅವರು ಪಟ್ಟಣದ ಶ್ರೀ ಬಸವರಾಜೇಂದ್ರ ದೇವಸ್ಥಾನದಲ್ಲಿ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವ ರಾಜೇಂದ್ರ ಗಜಾನನ ಮಂಡಳಿ,ಇವರ ಸಹಯೋಗದಲ್ಲಿ ಜರುಗಿದ 88 ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದ ನಿಮಿತ್ತ "ಶರಣರ ವಚನಗಳ ಸಂದೇಶಗಳು" ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.          ಶರಣ ಸಂದೇಶಗಳು ಪ್ರಸಕ್ತ ಸನ್ನಿವೇಶಕ್ಕೆ, ಸಮಕಾಲೀನ ಸವಾಲುಗಳಿಗೆ ಸಿದ್ದೌಷದವಿದ್ದಂತಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯದಂತಹ ಮೌಲ್ಯಗಳ ಮೂಲಕ ಶರಣರು ಪರಿಶುದ್ಧ ಬದುಕಿಗೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.            ದಿವ್ಯಸಾನಿಧ್ಯ ವಹಿಸಿದ್ದ ಅರ್ಜುಣಗಿ ಜೈನಾಪುರ ಮಠದ ಷ ಬ್ರ ರೇಣುಕ ಶಿವಾಚಾರ್ಯರು ಮಾತನಾಡಿ, ವಚನಗಳು ಭವಿಷ್ಯದ ಬದುಕಿನ ಸೂತ್ರಗಳಾಗಿವೆ. ತಾರತಮ್ಯವಿಲ್ಲದ ಜೀವನವನ್ನು ಸಾಕ್ಷೀಕರಿಸಿದ ವಚನಗಳು ಇಂದು ನಾಳೆಗೂ ನಿತ್ಯ ಸ...

ಲೆಕ್ಕಪತ್ರ ನೀಡಿದರೂ ಸಹ ಕೆಲವು ದುರುದ್ದೇಶದಿಂದ ಸುಖಾಸುಮ್ಮನೆ ದೇವಸ್ಥಾನದ ಎದುರು ಧರಣಿ ನಡೆಸುತ್ತಿದ್ದಾರೆ

ಇಮೇಜ್
  ಇಂಡಿ : ನವೆಂಬರ್ ೧೦ ರಂದು ಸಾಯಂಕಾಲ ಶಾಂತೇಶ್ವರ ದೇವಸ್ಥಾನದಲ್ಲಿ ಭಕ್ತರು ಕೇಳಿದ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ನೀಡಲಾಗಿದ್ದು, ಡಿ.೯ ರಿಂದ ೧೧ ರವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಅನುಮತಿ ನೀಡಿದ್ದು ಈಗಾಗಲೆ ಜಾತ್ರಾ ತಯಾರಿ ನಡೆದಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೆಕ್ಕಪತ್ರ ನೀಡಿದರೂ ಸಹ ಕೆಲವು ದುರುದ್ದೇಶದಿಂದ ಸುಖಾಸುಮ್ಮನೆ ದೇವಸ್ಥಾನದ ಎದುರು ಧರಣಿ ನಡೆಸುತ್ತಿದ್ದಾರೆ . ನೂರಾರು ಜನರ ಸಮ್ಮುಖದಲ್ಲಿಯೇ ಲೆಕ್ಕಪತ್ರ ನೀಡಲಾಗಿದೆ. ಅಲ್ಲದೆ ದೇವಸ್ಥಾನದ ಸೂಚನಾ ಫಲಕದಲ್ಲಿಯೂ ಲೆಕ್ಕಪತ್ರದ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು. ನವೆಂಬರ್ ೨೬ ರಿಂದ ಡಿ. ೯ರವರೆಗೆ ಧಾನಮ್ಮದೇವಿ ಪುರಾಣ ಕಾರ್ಯಕ್ರಮ ಸಾಯಂಕಾಲ ೭-೦೦ ರಿಂದ ೮-೩೦ ರವರೆಗೆ ಹಮ್ಮಿಕೊಂಡಿದ್ದು, ಡಿ. ೯ ಕ್ಕೆ ಸಾಮೂಹಿಕ ವಿವಾಹ ಧರ್ಮಸಭೆ, ಡಿ. ೧೦ ಮತ್ತು ೧೧ ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಈಗಾಗಲೆ ಜಾತ್ರೆಗೆ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದ್ದು ಅದ್ದೂರಿ ಜಾತ್ರೆಗೆ ಸಿಧ್ಧತೆ ನಡೆದಿದೆ ಎಂದು ಕಾಸುಗೌಡ ಬಿರಾದಾರ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಕೂಡಿಗನೂರ, ದೇವೆಂದ್ರ ಕುಂಬಾರ, ಬಸವರಾಜ ಮಸಳಿ, ವಿಜಯ್ ಉಡಚಣ, ರಾವುತ್ ಲಾಳಸಂಗಿ, ಸತೀಶ ಝಂಪಾ, ಅಶೋಕಗೌಡ ಪಾಟೀಲ ಮತ್ತಿತರರಿದ್ದರು.

ಶಿಕ್ಷಕ ಸಂತೋಷ ಗೆ ಸರ್ವೋದಯ ರತ್ನ ಪ್ರಶಸ್ತಿಯ ಗರಿ

ಇಮೇಜ್
  ಶಿಕ್ಷಕ ಸಂತೋಷ ಗೆ ಸರ್ವೋದಯ ರತ್ನ ಪ್ರಶಸ್ತಿಯ ಗರಿ ಇಂಡಿ: ಅನಿಕೇತನ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಘದ ವತಿಯಿಂದ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಗುರುವಾರದಂದು ಜರುಗಿದ ಸರ್ವೋದಯ ಸಾಹಿತ್ಯ ಸಂಭ್ರಮ-2024 ರ ಅಡಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಗುರುನಮನ ಸಮಾರಂಭದಲ್ಲಿ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರಿಗೆ ಸರ್ವೋದಯ ರತ್ನ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಆರ್ ಎಸ್ ಪೂಜಾರಿ ಪ್ರದಾನ ಮಾಡಿದರು.   ಈ ಸಂದರ್ಭದಲ್ಲಿ ತದ್ದೇವಾಡಿಯ ಮಹಾಂತೇಶ ಹಿರೇಮಠ ಸ್ವಾಮಿಗಳು, ಮೈಸೂರಿನ ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು, ಸಂಸ್ಥೆಯ ಅಧ್ಯಕ್ಷೆ ಶಾಂತಾಬಾಯಿ ಪೂಜಾರಿ, ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ, ಶಾಂತೇಶ್ವರ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಶ್ರೀಮಂತ ಇಂಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ದೇಶದ ಅಭಿವೃದ್ದಿಗೆ ವಿಜ್ಞಾನದ ಕೊಡುಗೆ ಅಪಾರವಾಗಿದೆ: ಅಬಿದ ಗದ್ಯಾಳ

ಇಮೇಜ್
  ದೇಶದ ಅಭಿವೃದ್ದಿಗೆ ವಿಜ್ಞಾನದ ಕೊಡುಗೆ ಅಪಾರವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ತಂತ್ರಜ್ಞಾನ ಮುಖ್ಯ. ಸಮಾಜದಲ್ಲಿ ವಿಜ್ಞಾನದ ಪಾತ್ರ ಮತ್ತು ಉದಯೋನ್ಮುಖ ವೈಜ್ಞಾನಿಕ ವಿಷಯಗಳ ಕುರಿತು ಮಕ್ಕಳನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ವಿಜ್ಞಾನದಿಂದ ನಡೆಯುತ್ತಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು. ಪಟ್ಟಣದ ಹಡಪದ ಅಪ್ಪಣ್ಣ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಮತ್ತು ವಿಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.  ಹಿರೇಬೇವನೂರ ವೇದಮೂರ್ತಿ ದಯಾನಂದ ಹಿರೇಮಠ ಮಾತನಾಡಿ ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವ ಕುರಿತು ಮಕ್ಕಳಲ್ಲಿ  ಅರಿವು ಮೂಡಿಸಲು ವಿಜ್ಞಾನ ದಿನಾಚರಣೆ ಮುಖ್ಯ ಎಂದರು.  ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನದ ಸಾಧಕಗಳ ಪ್ರಯೋಜನ ಪಡೆದುಕೊಳ್ಳಬೇಕು. ಬಾಧಕಗಳ ಬಗ್ಗೆ ವಿಚಾರ ಮಾಡಬಾರದು ಎಂದರು. ಮುಖ್ಯ ಶಿಕ್ಷಕಿ ಭವಾನಿಗೌಡ ಮತ್ತು ಜಯಶ್ರೀ ಗೌಡ ಮಾತನಾಡಿದರು. ಸಭೆಯಲ್ಲಿ ಭೀಮರಾಯಗೌಡ ಬಿರಾದಾರ,ಶ್ರೀ ಹಡಪದ ಅಪ್ಪಣ್ಣ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂತೋಷ ಗವಳಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿದರಾಯ ಅಪ್ತಾಗಿರಿ, ಉಪಾಧ್ಯಕ್ಷ ಶಿವಾನಂದ ನಾವಿ,ಆಡಳಿತ ಅಧಿಕಾರಿ ಪಂಡಿತ ಬಿರಾದಾರ, ಸಿದ್ದು ನಾವಿ,  ನಟರಾಜ ಗವಳಿ , ಶಕುಂತಲಾ ನಾವಿ ಮತ್ತಿತರರು ವೇದಿಕೆಯ ಮೇಲೆ ಇದ್ದರು.   ಇಂಡಿ...

ಮೂಲಭೂತಸೌಕರ್ಯ ವಂಚಿತ ಹಾಗೂ ಜೆಜೆಎಂ ಕಳಪೆ ಕಾಮಗಾರಿ: ಕರವೇ ಪ್ರತಿಭಟನೆ

ಇಮೇಜ್
ಮೂಲಭೂತಸೌಕರ್ಯ ವಂಚಿತ ಹಾಗೂ ಜೆಜೆಎಂ ಕಳಪೆ ಕಾಮಗಾರಿ: ಕರವೇ ಪ್ರತಿಭಟನೆ ತಾಂಬಾ : ಗ್ರಾಮದ ವಾರ್ಡ ಸಂಖ್ಯೆ ೬ ಮತ್ತು ೪ರರಲ್ಲಿ ಜೆಜೆಎಂ ಕಾಮಗಾರಿ ಹಾಗೂ ಕುಡಿಯುವ ನೀರು ಮತ್ತು ಘಟಾರ್ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರಿಗೆ ತೀರಗಾಡಲು ತೀವರ ತೋಂದರೆ ಆಗಿತ್ತಿರುವುದರಿಂದ ಕರವೇ ಕಾರ್ಯಕ್ರತರು ತಾಂಬಾ ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಪಿಡಿಓ ಶ್ರಿಕಾಂತ ಹಡಲಸಂಗ ಅವರಿಗೆ ನೀಡಿದರು.  ಇಂಡಿ ತಾಲೂಕ ಕರವೇ ಅಧ್ಯಕ್ಷ ಅಲ್ಲಾಬಕ್ಷ ಧಡೇದ ಮಾತನಾಡಿ ಗ್ರಾಮದಲ್ಲಿ ಪಂಚಾಯತಿ ನೀರು ಬರುವ ನಳದ ಪೈಪಗಳು ಒಡೆದು ಹೋಗಿದ್ದು, ಪಂಚಾಯತ ನಳದ ನೀರು ಬರುವುದಿಲ್ಲ, ಜೆಜೆಎಂ ಪೈಪ ಲೈನ್ ಮಾಡಿತ್ತಿರುವುದರಿಂದ ಓಣಿಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರಿಗೆ ತಿರಗಾಡಲು ಬಾರದ ಹಾಗೆ ಮತ್ತು ಮಕ್ಕಳು, ವಯಸ್ಕರು ಹಡಿರುವ ಗುಂಡಿಗಳಲ್ಲಿ ಬಿದ್ದು ಕೈ-ಕಾಲು ಫ್ಯಾಕ್ಚರ್ ಆಗುತ್ತಿದ್ದು, ಇದರ ಬಗ್ಗೆ ತಾಂಬಾ ಸರಕಾರಿ ಆಸ್ಪತ್ರö್ಯಲ್ಲಿ ಆರ್.ಟಿ.ಸಿಯು ಮಾಡಿದರು, ಗ್ರಾಪಂ ಸದಸ್ಯರು, ಪಿಡಿಓ, ಗುತ್ತಗೆದಾರ ಕ್ಯಾರೆ ಮಾಡುತ್ತಿಲ್ಲ ಎಂದು ಜನರಲ್ಲಿ ಪ್ರಶ್ನೆ ಆಗಿದೆ. ಜೆಜೆಎಂ ಕಾಮಗಾರಿ ೮ತಿಂಗಳಗಳಲ್ಲಿ ಮಾಡಬೇಕಾಗಿದ ಗುತ್ತಗೆದಾರ ಸುಮಾರು ೭ತಿಂಗಳ ಕಳೆದು ಹೋದರು ಇನ್ನೂ ಕಾಮಗಾರಿ ಮಾಡಿರುವುದಿಲ್ಲ. ಮತ್ತು ಕಾಮಗಾರಿ ಕಳಪೆ ಮಟ್ಟದ ಕಾಮಗಾರಿ ಮಾಡತ್ತಿದ್ದಾರೆ ಪಿಡಿಓ ಹಾಗೂ ಸಂಬAಧ ಪಟ್ಟ ಮೇಲ್ದಾಕಾರಿಗಳು ಇದರ ಬಗ್ಗೆ ತನಿಖೆ ಮಾಡಬೇಕು.  ಗ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು