ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಕಡುಬಿನ ಊಟ ಜೋರು

ಇಮೇಜ್
 *ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಕಡುಬಿನ ಊಟ ಜೋರು* ಇಂಡಿ: ಎಳ್ಳು ಅಮಾವಾಸ್ಯೆ ಅಂದರೆ ಉತ್ತರ ಕರ್ನಾಟಕ ರೈತರ  ಬಹು ದೊಡ್ಡ ಹಬ್ಬ ಎಂದರೆ ತಪ್ಪಾಗಲಾರದು.   ಹೌದು ಇದರ  ಹಿಂದಿನ ದಿನ‌ ಕಾಯಿ ಪಲ್ಲೆ ಖರೀದಿಸುವದು ಹಾಗೂ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವದೇ ಈ ಭಾಗದ ಹೆಣ್ಣು ಮಕ್ಕಳ ಸಂಭ್ರಮವೋ ಸಂಭ್ರಮ. ಈ ಹಬ್ಬವನ್ನು ಮಾಘ ಮಾಸದಲಿ ಹೇರಳವಾಗಿ ಸಿಗುವ ತರತರಹದ ಕಾಯಿಪಲ್ಲೆ, ವಿವಿದ ಪ್ರಕಾರದ ಕಾಳುಗಳನ್ನು ಸೇರಿಸಿ ಪಲ್ಲೆ ಮಾಡಿ, ಅದರ ಜೊತೆಗೆ ಸಜ್ಜಿ ರೂಟ್ಟಿ, ಸೆಂಗಾ ಹೋಳಿಗೆ, ಹೂರಣ ಹೋಳಿಗೆ, ಕಡುಬಿನ ಊಟ ಮಾಡುವುದು ವಿಶೇಷ. ರೈತನ ಜೀವನಾಡಿ ಬೆಳೆ ಜೋಳ. ಆ ಜೋಳದ ಗದ್ದೆಯ ಮಧ್ಯೆ ಕಲ್ಲು ಇಟ್ಟು ಪೂಜೆ ಮಾಡಿ ನೈವೇದ್ಯ ಹಿಡಿದು, ಹೊಲದ ತುಂಬಾ ತಿರುಗುತ್ತಾ ಸಜ್ಜಿ ರೊಟ್ಟಿ ಚವಳಿಕಾಯಿ ಚಾಂಗ್ ಬೊಲೋ ಎಂದು ಜೈಕಾರ ಹಾಕುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಇಂಡಿ ಪಟ್ಟಣದ ಏಕೈಕ ಮನೆತನ ಅದು ಕಾಸುಗೌಡ ಬಿರಾದಾರ ಅವರ ಮನೆತನ. ಈ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಸತ್ತಾರ ಬಾಗವಾನ,  ಜಬ್ಬಾರ್ ಅಣ್ಣಾ, ಶಿವಾನಂದ ಚಾಳಿಕಾರ, ಸಿದ್ದು ಡಂಗಾ, ರಮೇಶ ರಾಠೋಡ, ದಯಾನಂದ ಪಾಟೀಲ, ಅಜಿತ್ ಸ್ವಾಮಿ, ಮಲ್ಲು ಪಾಟೀಲ, ಸಿದ್ದು ಬಿರಾದಾರ, ಶಿವನಗೌಡ ಸಿಂಗ್ಪಾಟೀಲ, ಸಂಜು ಪವಾರ, ರಾಚು ಬಡಿಗೆರ, ಸೊಮು ಬ್ಯಾಳಿ ಸೇರಿದಂತೆ ಹಲವು ಮುಖಂಡರು ಇದ್ದರು....

ಶಿಕ್ಷಕ ಶರ್ಮಾಗೆ ಕರ್ನಾಟಕ ವಿದ್ಯಾಭೂಷಣ ರಾಜ್ಯ ಪ್ರಶಸ್ತಿ ಪ್ರದಾನ

ಇಮೇಜ್
  ಶಿಕ್ಷಕ ಶರ್ಮಾಗೆ ಕರ್ನಾಟಕ ವಿದ್ಯಾಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಇಂಡಿ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ(ರಿ) ವತಿಯಿಂದ 2024-25 ನೇ ಸಾಲಿನಲ್ಲಿ ಕೊಡಮಾಡುವ 'ಕರ್ನಾಟಕ ವಿದ್ಯಾಭೂಷಣ ರಾಜ್ಯ ಪ್ರಶಸ್ತಿ'ಯನ್ನು ತಾಲೂಕಿನ ಬಂಥನಾಳ ಗ್ರಾಮದ ಕೆ ಬಿ ಎಂ ಪಿ ಎಸ್ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಶರಣಪ್ಪ ಡಿ ಶರ್ಮಾ ಅವರಿಗೆ ಅಕಾಡೆಮಿ ಅಧ್ಯಕ್ಷ ಕಿಶನ್ ಸುರ್ವೆ ಪ್ರದಾನ ಮಾಡಿದರು.       ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಸರಳವಾಗಿ ಜರುಗಿದ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದಲ್ಲಿ ಈ ರಾಜ್ಯ ಪ್ರಶಸ್ತಿಯನ್ನು  ಪ್ರದಾನ ಮಾಡಲಾಯಿತು ಎಂದು ಅಕಾಡೆಮಿ ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ತಿಳಿಸಿದ್ದಾರೆ.        ಪ್ರಶಸ್ತಿ ಪುರಸ್ಕೃತ ಹಿರಿಯ ಮುಖ್ಯಶಿಕ್ಷಕ ಶರಣಪ್ಪ ಡಿ ಶರ್ಮಾ ಅವರ ಈ ಸಾಧನೆಗಾಗಿ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ, ಶಿಕ್ಷಕ ಸಂತೋಷ ಬಂಡೆ, ಬಂಥನಾಳ ಕೆ ಬಿ ಎಂ ಪಿ ಎಸ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ

ಇಮೇಜ್
 ಇಂಡಿ. ಕ್ರೀಡಾ ಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ ಎಂದು ಉಪ ತಹಶಿಲ್ದಾರ ಹಾಗೂ ನೌಕರರ ಸಂಘದ ಇಂಡಿ ತಾಲೂಕಾ ಅಧ್ಯಕ್ಷರಾದ ಬಸವರಾಜ ರಾವೂರ ಹೇಳಿದರು.  ಪಟ್ಟಣದ ರಾಯಲ್ ಇನಟ್ರನ್ಯಾಶನಲ್ ಸ್ಕೂಲ್ ಹಾಗೂ ವಿಜ್ಞಾನ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದ ಅವರು  ಈ ಶಾಲೆಯ ಕ್ರೀಡಾಕೂಟದ ಉದ್ಘಾಟನೆ ನೋಡಿದರೆ ರಾಜ್ಯಮಟ್ಟದ ಕ್ರೀಡಾ ಕೂಟದ ಉದ್ಘಾಟನೆ ತರಹವೇ ಕಾಣುತ್ತದೆ. ಈ ಶಾಲೆ ಮಕ್ಕಳು ಹಾಗೂ ಶಾಲೆಯ ಹೆಸರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಲಿ ಎಂದು ಹೇಳಿದರು.  ಇಂಡಿ ಪಿ.ಎಸ್.ಐ ಮಹೇಶ ಸಂಖ ಕ್ರೀಡಾ ಜೋತಿ ಬೆಳಗಿಸಿ ಮಾತನಾಡಿದ ಅವರು  ಆರೋಗ್ಯವಂತರಾಗಿ ಬದುಕಲು ಕ್ರೀಡೆ ಮುಖ್ಯ ಪಾತ್ರ ವಹಿಸುತ್ತದೆ. ಮನುಷ್ಯ ಆರೋಗ್ಯವಂತನಾಗಿ ಇರಬೇಕಾದರೆ ದೈಹಿಕ ಸದೃಢತೆ ಮುಖ್ಯ. ದೈಹಿಕ ಸಾಮರ್...

ಸುಚಿತ್ವದಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ-ಶಿಫಾ ಜಮಾದಾರ

ಇಮೇಜ್
ಸುಚಿತ್ವದಿಂದ ರೋಗಗಳನ್ನು ತಡೆಗಟ್ಟಲು ಸಾಧ್ಯ-ಶಿಫಾ ಜಮಾದಾರ ತಿಕೋಟಾ - ಸುಚಿತ್ವ ಮತ್ತು ಆರೋಗ್ಯ ಪರಸ್ಪರ ಸಂಬಂಧ ಹೊಂದಿರುವದರAದ ನೀವು ಶುದ್ಧವಾಗಿದ್ದರೆ ನೀವು ಅನೇಕ ಸಾಂಕ್ರಾಮಿಕ ರೋಗಗಳಿಂದ ಹೋರಾಡಬಹುದು ಮತ್ತು ತಡೆಗಟ್ಟಬಹುದು ಎಂದು ಲಾಡಲಿ ಫೌಂಡೇಶನ್ ಟ್ರಸ್ಟಿನ ರಾಯಭಾರಿ ಶಿಫಾ ಜಮಾದಾರ ಹೇಳಿದರು. ಇಂದು ತಿಕೋಟಾ ಗ್ರಾಮದ ಕೆ.ಬಿ.ಎಂ.ಪಿ.ಎಸ್. ಬಾಲಕರ ಸರಕಾರಿ ಶಾಲೆಯಲ್ಲಿ ಲಾಡಲಿ ಫೌಂಡೇಶನ ಟ್ರಸ್ಟ ವತಿಯಿಂದ ತಿಕೋಟಾ, ಬಬಲೇಶ್ವರ, ತಾಜಪೂರ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಸದಸ್ಯರಿಗೆ ಸ್ವಚ್ಚತಾ ತರಬೇತಿ ಹಾಗೂ ಸ್ವಚ್ಚತಾ ಕಿಟ್ಟ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸುಚಿತ್ವವು ನಿಮ್ಮ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ವಚ್ಚತೆಯಿಂದ ಇರುವುದು ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಅಸಮರ್ಪಕ ಕುಡಿಯುವ ನೀರು ನೈರ್ಮಲ್ಯದ ಮೇಲೆ ಪರಿಣಾಮವಾಗಿ ಅನೇಕ ರೋಗಗಳಿಗೆ ಹಾಗೂ ಸಾವಿಗೆ ಕಾರಣವಾಗುತ್ತಿದೆ. ಸ್ವಚ್ಚವಾದಂತಹ ನೀರನ್ನು ಪ್ರತಿ ವಿದ್ಯಾರ್ಥಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ಲಾಡಲಿ ಫೌಂಡೇಶನ ಟ್ರಸ್ಟ ವಿಜಯಪುರ ಜಿಲ್ಲೆಯ ೨೧ ಸರಕಾರಿ ಶಾಲೆಯಲ್ಲಿ ಹೊಸದಾಗಿ ಅತ್ಯಾಧುನಿಕ ಶೌಚಾಲಯ ಕಟ್ಟುತ್ತಿದೆ. ಇದರ ಜೊತೆಗೆ ಒಂದು ವರ್ಷದ ಅವಧಿವರೆಗೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಾನಿಟ್ರಿ ಪ್ಯಾಡಗಳನ್ನು ಪೂರೈಸುತ್ತಿದೆ. ಮತ್ತು ೨೧ ಶಾಲೆ ಮಕ್ಕಳಿಗೆ ಇದೇ ಡಿಸೆಂಬರ ಕೊನೆಯ ವಾರದಲ್ಲ...

ಡಿಸೆಂಬರ್ 24, 25 ಮತ್ತು 26 ರಂದು ನಡೆಯಲಿರುವ 4ನೇ ವಾರ್ಷಿಕ ಆರ್.ಡಿ.ಪಿ.ಆರ್. ಕ್ರೀಡಾಕೂಟ-2024 ಉದ್ಘಾಟನಾ ಸಮಾರಂಭಕ್ಕೆ ಚಾಲನೆ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ.

ಇಮೇಜ್
 ಜಿಲ್ಲಾ ಪಂಚಾಯತಿ, ವಿಜಯಪುರ ಡಿಸೆಂಬರ್ 24, 25 ಮತ್ತು 26 ರಂದು ನಡೆಯಲಿರುವ 4ನೇ ವಾರ್ಷಿಕ  ಆರ್.ಡಿ.ಪಿ.ಆರ್. ಕ್ರೀಡಾಕೂಟ-2024 ಉದ್ಘಾಟನಾ ಸಮಾರಂಭಕ್ಕೆ ಚಾಲನೆ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ. ವಿಜಯಪುರ: ಇಂದು ದಿನಾಂಕ 24.12.2024 ರಂದು ಜಿಲ್ಲಾ ಪಂಚಾಯತಿ ಮೈದಾನದಲ್ಲಿ 4ನೇ ವಾರ್ಷಿಕ ಆರ್.ಡಿ.ಪಿ.ಆರ್. ಕ್ರೀಡಾಕೂಟ-2024 ನ್ನು ವಿಜಯಪುರ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ರವರು ಉದ್ಘಾಟಿಸಿದರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತಿ ವಿಜಯಪುರ, ಆರ್.ಡಿ.ಪಿ.ಆರ್. ಇಲಾಖೆಯ ಎಲ್ಲ ವೃಂದ ಸಂಘಗಳ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಡಿಸೆಂಬರ್ 24, 25 ಮತ್ತು 26 ರಂದು ನಡೆಯಲಿರುವ 4ನೇ ವಾರ್ಷಿಕ ಕ್ರೀಡಾಕೂಟ-2024 ಉದ್ಘಾಟನಾ ಸಮಾರಂಭವನ್ನು ಬಲೂನಗಳನ್ನು ಆಕಾಶದಲ್ಲಿ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ರವರು ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಪ್ರತಿದಿನ ನಿರಂತರ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೂ ಸಹ ಗಮನ ವಹಿಸಬೇಕು. ಇದಕ್ಕೆ ಪೂರಕವಾಗಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ, ಸದೃಢರಾಗಬೇಕು. ನಮ್ಮ ದೇಹ ಸದೃ...

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಇಮೇಜ್
ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.  ಇಂಡಿ: ಪಟ್ಟಣದ  ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಸಾಮಾನ್ಯ ಸಂಸ್ಥೆಯ ಆವರಣದಲ್ಲಿ ಡಿಫಾರಂಸಿ ಮಹಾವಿದ್ಯಾಲಯದಲ್ಲಿ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಅಧ್ಯಕ್ಷ ದೀಪಕ ದೋಶಿ ಇವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾಸುಗೌಡ ಬಿರಾದಾರ ಹಾಜರಿದ್ದರಿಂದ ಮೂಲಕ ಅವರಿಗೆ ನಿಮ್ಮ ಸದಸ್ಯತ್ವ ರದ್ದು ಪಡಿಸಲಾಗಿದೆ. ಕಾರಣ ನೀವು ಸಭೆಯಲ್ಲಿ ಇರುವ ಅರ್ಹತೆ ಹೊಂದಿಲ್ಲ. ಹೀಗಾಗಿ ನೀವು ಹೊರಗೆ ಹೋಗಿ ಎಂದು ಸದಸ್ಯರು ಹೇಳಿದರು. ಅದಕ್ಕೆ ಪ್ರತಿಯಾಗಿ ಕಾಸುಗೌಡ ಬಿರಾದಾರರವರು ನಮ್ಮ ಕುಟುಂಬವು ಈ ಸಂಸ್ಥೆಗೆ ೧೨ ಎಕರೆ ಜಾಗವನ್ನು ದಾನ ರೂಪದಲ್ಲಿ ನೀಡಿರುತ್ತಾರೆ. ಹೀಗಾಗಿ ನನ್ನ ಸದಸ್ಯತ್ವ ರದ್ದು ಮಾಡಲು ಬರುವದಿಲ್ಲ ಎಂದು ವಾದಿಸಿದರು. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳ ಪ್ರಯೋಗವಾಗ ತೊಡಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಬಿರಾದಾರ ಮತ್ತು ನಿರ್ದೇಶಕ ಸಾತು ತೆನೆಹಳ್ಳಿ ಇವರು ಕಾಸುಗೌಡ ಮೇಲೆ ಹಲ್ಲೆ ಮಾಡಿ ಅಂಗಿ ಹರಿದು ಅವಾಚ್ಯ ಶಬ್ದ ಪ್ರಯೋಗಿಸಿ ಹೊಡೆದ ಘಟನೆ ನಡೆದಿದೆ ಎಂದು ಕಾಸುಗೌಡ ಬಿರಾದಾರರವರು ಫಿರ್ಯಾದಿಯಲ್ಲಿ ತಿಳಿಸಿದ್ದಾರೆ.  ಶಾಂತೇಶ್ವರ ವ...

ಶ್ರವಣ ದೋಷ ಹೊಂದಿರುವ ಮಕ್ಕಳಲ್ಲಿ ಕಾಕಲಿಯರ್ ಇಂಪ್ಲಾಟ್ ನ ಪ್ರಯೋಜನಗಳು ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

ಇಮೇಜ್
ವಿಜಯಪುರ, ಡಿ. 23: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಬ್ರಾಮಾ ಬ್ಲಾಕ್ ನಲ್ಲಿ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಶ್ರವಣ ದೋಷ ಹೊಂದಿರುವ ಮಕ್ಕಳಲ್ಲಿ ಕಾಕಲಿಯರ್ ಇಂಪ್ಲಾಟ್ ನ ಪ್ರಯೋಜನಗಳು ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಇಂದು ಸೋಮವಾರ ನಡೆಯಿತು.  ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜೆ. ಎನ್. ಮೆಡಿಕಲ್ ಕಾಲೇಜಿನ ಕಾಕ್ಲಿಯರ್ ಇಂಪ್ಲಾಟ್ ಸರ್ಜನ್ ಡಾ. ಪ್ರೀತಿ ಹಜಾರೆ ವೈದ್ಯರು ಮತ್ತು ವಾಕ್ ಶ್ರವಣ ತಜ್ಞರು ಹಾಗೂ 200 ಆಶಾ ಕಾರ್ಯಕರ್ತೆಯರಿಗೆ ಶ್ರವಣದೋಷ ಮತ್ತು ಕಾಕಲಿಯರ್ ಇಂಪ್ಲಾಂಟ್ ನಿಂದ ಆಗುವ ಲಾಭಗಳ ಕುರಿತು ಉಪನ್ಯಾಸ ನೀಡಿದರು.  ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಶ್ರವಣದೋಷ ಸಮಸ್ಯೆ ಇರುವ ಐದು ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆ ಮತ್ತು ಒಂದು ವರ್ಷದ ತರಬೇತಿ ಸೌಲಭ್ಯವಿದೆ.  ಅಗತ್ಯವಿರುವ ಪೋಷಕರು ಇದ ಉಪಯೋಗ ಪಡೆಯಬೇಕು ಎಂದು ಹೇಳಿದರು.   ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ ಗುಣಾರಿ ಮಾತನಾಡಿ, ಆಶಾ ಕಾರ್ಯಕರ್ತೆ ಈ ನಿಟ್ಟಿನಲ್ಲಿ ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಗುರುತಿಸಿ ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆಯನ್ನು ಕೊಡಬೇಕು ಎಂದು ಹೇಳಿದರು.  ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತಚಿಕಿತ್ಸೆ ತಜ್ಞ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ಎಲ್ಲ ಪಾಲಕರು, ಜಿಲ್ಲ...

ವೃಕ್ಷಥಾನ್ ಪಾರಂಪರಿಕ ಓಟ-2024 ಚಾಲನೆ

ಇಮೇಜ್
 ವೃಕ್ಷಥಾನ್ ಪಾರಂಪರಿಕ ಓಟ-2024 ಚಾಲನೆ   ವಿಜಯಪುರ,ಡಿ.22 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿμÁ್ಠನ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ  ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ವೃಕ್ಷಥಾನ್ ಪಾರಂಪರಿಕ ಓಟ-2024 ಭಾನುವಾರ ಯಶಸ್ವಿಯಾಗಿ ಜರುಗಿದ್ದು, 21 ಕಿ.ಮೀ, 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಪಾರಂಪರಿಕ ಓಟ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮ್ಯಾರಥಾನ್‍ಗೆ ಚಾಲನೆ ನೀಡಿದ ವಿಧಾನ ಸಭಾದ್ಯಕ್ಷರಾದ ಯು ಟಿ ಖಾದರ್ ಫರೀದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು 5 ಕಿ.ಮೀ. ಓಡಿ ಯುವಕರನ್ನು ಹುರಿದುಂಬಿಸಿದರು. ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ  ಸಾರುವ ನಿಟ್ಟಿನಲ್ಲಿ  ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ರವಿವಾರ ಹಮ್ಮಿಕೊಂಡ ವೃಕ್ಷಥಾನ ಪಾರಂಪರಿಕ ಓಟದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷ ತಂದಿದೆ.ಭವಿಷ್ಯದಲ್ಲಿ ಪರಿಸರ ಹಾಗೂ ಭವ್ಯ ಸ್ಮಾರಕಗಳ ಸಂರಕ್ಷಣೆಯ ಆಶಯಗಳನ್ನೊಳಗೊಂಡ ಈ ಕಾರ್ಯಕ್ರಮದ ಉದ್ಧೇಶ ಸಾಪಲ್ಯತೆ ಕಾಣಲಿ. ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಚ ಸುಂದರ ಪರಿಸರ ನಿರ್ಮಾಣ ಮಾಡುವ ಹೊಣೆ ನಮ್ಮದ...

ಇಂಡಿ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಕಠಿಣ ಕ್ರಮ

ಇಮೇಜ್
 ಇಂಡಿ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪಿ.ಎಸ್.ಐ  ಮಹೇಶ ಸಂಖ ಕಠಿಣ  ಕ್ರಮ.  ಇಂಡಿ: ಸಂಚಾರಿ ನಿಯಮಗಳು ಇರುವುದೇ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ವಾಹನ ಸವಾರರ ಸುರಕ್ಷತೆಗಾಗಿ. ಆದರೆ ಕೆಲವು ವಾಹನ ಸವಾರರು, ಚಾಲಕರು ಟ್ರಾಫಿಕ್ ರೂಲ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ತಮ್ಮ ಜೀವದ ಜೊತೆಗೆ ಸಾರ್ವಜನಿಕರ ಜೀವದ ಜೊತೆಗೂ ಚಲ್ಲಾಟವಾಡುತ್ತಾರೆ. ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಇಂಡಿ ಪೊಲೀಸ್ ಠಾಣೆಯ ಪಿ.ಎಸ್.ಐ  (ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ಅವರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ನಗರದ ಪ್ರಮುಖ ರಸ್ತೆ ಬಿಜಾಪುರ ರಸ್ತೆ, ಸಿಂದಗಿ ರಸ್ತೆ ಸ್ಟೇಶನ್ ರಸ್ತೆ ಅಗರಖೇಡ ರಸ್ತೆಯಲ್ಲಿ  ಅಡ್ಡಾದಿಡ್ಡಿ ಯಾಗಿ ಮೋಟರ್ ಸೈಕಲ್ ಹಾಗೂ ವಿವಿಧ ವಾಹನಗಳ ನಿಲ್ಲು ತಿದ್ದರು ಇದಕ್ಕೆ ಸಾರ್ವಜನಿಕರ ತೊಂದರೆ ಅನುಭವಿಸುತಿದ್ದರು.  ಇಂಡಿ ಶಹರ್ ಪಿ.ಎಸ್.ಐ ಮಹೇಶ್ ಸಂಖ ಅವರು ಪ್ರಮುಖ ರಸ್ತೆಗಳಲ್ಲಿ ನಿಗಾವಹಿಸಿ, ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರ ವಿರುದ್ಧ ದಂಡ ವಿಧಿಸಿದ್ದಾರೆ. ಯಾವುದೇ ರಿಯಾಯಿತಿ ನೀಡದೆ, ವಾಹನ ಪರವಾನಿಗೆ ಇಲ್ಲದವರು, ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನ ಸವಾರರು, ಮತ್ತು ಮಿತಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುವವರ ಮೇಲೆ ತಕ್ಷಣ ದಂಡ ಹಾಕಲಾಗುವುದು ...

ಮೆಗಾ ಮಾರುಕಟ್ಟೆ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

ಇಮೇಜ್
 ಮೆಗಾ ಮಾರುಕಟ್ಟೆ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ವಿಜಯಪುರ. ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮೆಗಾ ಮಾರುಕಟ್ಟೆ ಕಾಮಗಾರಿ ಪ್ರಾರಂಭಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಗುರವಾರ ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು,  ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನ ಯೋಜನೆಯಡಿಯಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆಂದು ಕಾಯ್ದಿರಿಸಿದ ಜಾಗೆಯನ್ನು ಸ್ಥಾನಿಕವಾಗಿ ಪರಿಶೀಲನೆ ನಡೆಸಬೇಕು. ಕಾಯ್ದಿರಿಸಿದ ಜಾಗ ಅತಿಕ್ರಮಣವಾಗಿದ್ದಲ್ಲಿ ತೆರವುಗೊಳಿಸಲು ಕ್ರಮ ಕೈಗೊಂಡು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಹಾಗೂ ನಿಡಗುಂದಿ ತಹಶೀಲ್ದಾರರಿಗೆ ಅವರು ಸೂಚನೆ ನೀಡಿದರು.  ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಆರ್.ಎಸ್. ನಲ್ಲಿರುವ ಜವಾಹರ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ. ಸಭೆ ನಡೆಸಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.  ನಿಡಗುಂದಿ ಪಟ್ಟಣದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಅವರು, ಸಾರ್ವಜನಿಕರ ಆರೋಗ್ಯ...

ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಇಂಡಿಯಲ್ಲಿ ಪ್ರತಿಭಟನೆ

ಇಮೇಜ್
 ಇಂಡಿ.  ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪಗ್ರತಿಪರ ಚಿಂತಕರು ಹಾಗೂ ಅಂಬೇಡ್ಕರ ಅನುಯಾಯಿ ಬಳೆಗ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಶಾ ಪುತಳಿಗೆ  ಚಪ್ಪಲಿ ಹಾರ್ ಹಾಕಿ ಹಾಗೂ ಕೊನೆಯಲ್ಲಿ ಭಾವಚಿತ್ರಗಳನ್ನು ಸುಟ್ಟು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಮುಖಂಡರು  ಬಿಜೆಪಿ ಮನುವಾದಿ ಪಕ್ಷ, ಆ ಪಕ್ಷದ ನಿಜವಾದ ಬಣ್ಣ ಈಗ ಮತ್ತೊಮ್ಮೆ ಬಯಲಾಗಿದೆ. ಅಮಿತ್ ಶಾ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು, ಮುಂಬರುವ ಚುನಾವಣೆ ವೇಳೆ ಅಂಬೇಡ್ಕರ್‌ ಪರ ನಿಲುವ ಇರುವ ಎಲ್ಲರೂ ಬಿಜೆಪಿಯಿಂದ ಹೊರಬರಬೇಕು, ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಮಾತನಾಡಿ ಹಲವು ನಾಯಕರು ಒತ್ತಾಯಿಸಿದರು. ತಲಿದ ಮುಖಂಡ ಪ್ರಶಾಂತ ಕಾಳೆ ಮಾತನಾಡಿ  ಇಂದು ಸಂವಿಧಾನದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಂತಹ ಬಿಜೆಪಿ ನಾಯಕರು ಆ ಸಂವಿಧಾನಕ್ಕೆ ಮತ್ತು ಅದರ ನಿರ್ಮಾತೃರಾದಂತಹ ಡಾ.ಅಂಬೇಡ್ಕರ್ ರಿಗೆ ಅವಮಾನ ಮಾಡುವಂತಹ ಮಾತನಾಡಿದ್ದು ಖಂಡನೀಯ. ಕೇವಲ ಭಾರತವಷ್ಟೇ ಅಲ್ಲದೆ ಪರದೇಶಗಳಲ್ಲಿಯೂ ಕೂಡ ನಮ್ಮ ಸಂವಿಧಾನವನ್ನು ಮತ್ತು ಅದರ ಶಿಲ್ಪಿಗಳಾದ ಡಾ.ಅಂಬೇಡ್ಕರ್ ರವರನ್ನು ಗೌರವದಿಂದ ಕಂಡು ಪೂಜ್ಯನೀಯ ಭಾವನೆಯನ್ನು ವ್ಯಕ್ತಪಡಿಸುತ್ತಾರೆ....

ದೇಶ ಉದ್ದಾರವಾಗಲು ಆಧ್ಯಾತ್ಮ ಅತಿ ಅವಶ್ಯ.

ಇಮೇಜ್
  ದೇಶ ಉದ್ದಾರವಾಗಲು ಆಧ್ಯಾತ್ಮ ಅತಿ ಅವಶ್ಯ.  ಇಂಡಿ : ಈ ದೇಶ ಉದ್ದಾರವಾಗಲು ಪ್ರತಿಯೊಬ್ಬ ಪ್ರಜೆಗೂ ಆಧ್ಯಾತ್ಮದ ಜ್ಞಾನ ನೀಡಿ,ಇದರತ್ತ ಆಕರ್ಷಣೆ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ  ಎಂಬುದು ಸ್ವಾಮಿ ವಿವೇಕಾನಂದರ ವಿಚಾರವಾಗಿತ್ತು ಎಂದು ಡಿವೈನ್ ಪಾರ್ಕಿನ ಎಲ್‌ - 2 ಅಧಿಕಾರಿ ಯಶವಂತ ಡಿ ಎಸ್ ಹೇಳಿದರು.                   ಅವರು ಇಂಡಿ ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಹಾಗೂ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಇವರ ಸಹಯೋಗದಲ್ಲಿ ನಡೆದ 89ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದ ನಿಮಿತ್ತವಾಗಿ  ಇಂಡಿ ಪಟ್ಟಣದ ವಿವೇಕ ಜಾಗೃತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಆತ್ಮೋನ್ನತಿ ಶಿಬಿರದಲ್ಲಿ ಅತಿಥಿ ಉಪನ್ಯಾಸಕರಾಗಿ ಉಪನ್ಯಾಸ ನೀಡಿದರು.                       ದೇವರನ್ನು ಕಾಣಿಸುವವರೆಗೂ ನಾನು ನಿಲ್ಲುವುದಿಲ್ಲ ಎಂದು ವಿವೇಕಾನಂದರು ಶಪಥ ಮಾಡಿದ್ದರು.ಅದಕ್ಕಾಗಿ ಅವರು ನಿರಂತರವಾಗಿ ಭಗವಂತನ ಧ್ಯಾನದಲ್ಲಿ ತಲ್ಲಿನರಾದಾಗ ಅವರ ಗುರುಗಳಾದ ರಾಮಕೃಷ್ಣ ಪರಮಹಸರು ಭಗವಂತನ ದರ್ಶನ ಮಾಡಿಸಿದರು.ಈ ಆತ್ಮಗಳಿಗೆ ಮರಣವಿಲ್ಲ.ಆದರೆ, ನಮಗೆ ಮರಣವಿದೆ ಆತ್ಮ ನಿನ್ನಲ್ಲಿರದಿದ್ದರೆ ನಿನಗೆ ಎಂದಿಗೂ ಬೆಲೆ ಇಲ್ಲ.ಅದಕ್ಕಾಗಿ ಆತ್ಮೋನ್ನತಿ ಹೊಂದಲು ಯಾವತ್ತೂ ಭಗವಂತನ ಧ್ಯಾನ ...

ಕಾಖಾ೯ನೆಯಿಂದ ರೈತರಿಗಾಗುವ ಸಮಸ್ಯೆ ಬಗೆಹರಿಸುವಂತೆ ಸಿ.ಇ.ಒ ಅವರಿಗೆ ಮನವಿ.

ಇಮೇಜ್
 ಕಾಖಾ೯ನೆಯಿಂದ ರೈತರಿಗಾಗುವ ಸಮಸ್ಯೆ ಬಗೆಹರಿಸುವಂತೆ  ಸಿ.ಇ.ಒ ಅವರಿಗೆ ಮನವಿ.             ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಜಮಖಂಡಿ ಸುಗರ್ ಕಾರ್ಖಾನೆಯ ಅನೇಕ ಸಮಸ್ಯೆಗಳಿಂದ ಬೇಸತ್ತು ರೈತರು ಕಾರ್ಖಾನೆ ಪ್ರಾರಂಭದ ತಳಹದಿಯಿಂದಲೂ ಸುತ್ತ ಮುತ್ತಲಿನ ರೈತರ ಜಮೀನುಗಳ ಬೆಳೆ, ಆರೋಗ್ಯ,ಸಾಕು ಪ್ರಾಣಿಗಳ ಮೇಲೆ  ಕಾಖಾ೯ನೆ ಧೊಳಿನಿಂದಾಗಿ  ,ರಸ್ತೆಗಳ ಅವ್ಯವಸ್ಥೆ,ಹಿಗೆ ಅನೇಕ ಸಮಸ್ಯೆಗಳಿಂದ ನೊಂದ ರೈತರು ಸಂಬಂಧಿಸಿದ ಕಾಖಾ೯ನೆಯ ಅಧಿಕಾರಿಗಳ ಗಮನಕ್ಕೂ ತಂದರು ಇನ್ನೂವರೆಗೆ ಯಾವುದೇ ಸಮಸ್ಯ ಬಗೆಹರಿದಿರುವುದಿಲ್ಲ ಇಂತಹ ದುಷ್ಪರಿಣಾಮ ಕುರಿತು ಸರ್ಕಾರ ಈ ಕಾಖಾ೯ನೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು.ರೈತರಿಗಾಗುವ ಸಮಸ್ಯೆಗಳನ್ನು ಬಗೆಹರಿಸಬೇಕು. ಕಾಖಾ೯ನೆಗೆ ಸಂಬಂಧಿಸಿದ ರಸ್ತೆಗಳ ಕುರಿತು ಮಾಲಿಕರಿಗೆ ನೋಟಿಸ್ ಜಾರಿಗೊಳಿಸಬೇಕು.ಕಾಮಿ೯ಕರಿಗೆ ಸಿಗುವ ಸರ್ಕಾರದ ಕಾಯ್ದೆ ಪ್ರಕಾರ ಕನಿಷ್ಠ ವೇತನ ಪ್ರತಿಯೊಬ್ಬರಿಗು ಸಿಗುವಂತಾಗಬೇಕು.ಶಬ್ದ ಮಾಲಿನ್ಯ ತಡೆಯುವ ವ್ಯವಸ್ಥೆ ಮಾಡಬೇಕು.ಸುತ್ತ-ಮುತ್ತಲೂ ಗ್ರಾಮಗಳ ಮೇಲೆ ಚಿಕ್ಕ-ಚಿಕ್ಕ ಧೂಳು ಬರದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಬೇಕೆಂದು.ಗ್ರಾಮಸ್ಥರು ಇಂದು ಕಾಖಾ೯ನೆಯ ಸಿ.ಇ.ಒ ಅವರಿಗೆ ಮನವಿಯನ್ನು ಸಲ್ಲಿಸಿದರು.  ...

ವೃಕ್ಷ, ಪರಂಪರೆ, ಮ್ಯಾರಾಥಾನ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಜನರಿಗೆ ಗೌರವ ಸನ್ಮಾನ ನಡೆಯಲಿದೆ.

ಇಮೇಜ್
ವಿಜಯಪುರ, ಡಿ. 16: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ದಿನದಂದು ವೃಕ್ಷ, ಪರಂಪರೆ, ಮ್ಯಾರಾಥಾನ್ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಲ್ಕು ಜನರಿಗೆ ಗೌರವ ಸನ್ಮಾನ ನಡೆಯಲಿದೆ. ತಾಳಿಕೋಟೆ ತಾಲೂಕಿನ ತುಂಬಗಿಯ ಶಾಂತಮ್ಮ ಹರನಾಳ, ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಶಿವಾನಂದ ಕಟ್ಟಿಮನಿ, ಖ್ಯಾತ ಮಾರಾಥಾನ್ ಓಟಗಾರ ನರೇನ ನಾಗಶೆಟ್ಟಿ ಮತ್ತು ಪ್ರಾಚೀನ ಸ್ಮಾರಕ ಮತ್ತು ಪರಂಪರೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಅಮೀನ ಹುಲ್ಲೂರ ಅವರಿಗೆ ಈ ಸನ್ಮಾನ ನಡೆಯಲಿದೆ.   ಈ ನಾಲ್ಕೂ ಜನರು ಅವರದೇ ಆದ ಕ್ಷೇತ್ರದಲ್ಲಿ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ಅಮೂಲ್ಯ ಕೊಡುಗೆ ನೀಡಿದ್ದು, ಅವರ ಸಾಧನೆಯ ಕುರಿತ ಮಾಹಿತಿ ಇಲ್ಲಿದೆ. ಶಾಂತಮ್ಮ ಹರನಾಳ ವಿಜಯಪುರ ತಾಲೂಕಿನ ತಿಡಗುಂದಿಯಲ್ಲಿ ವಾಸಿಸುತ್ತಿರುವ ಶಾಂತಮ್ಮ ಹರನಾಳ ಪಾರಂಪರಿಕ ಅಂದರೆ ಹಳೆಯ ಪದ್ಧತಿಯಡಿ ಗಿಡ ನೆಡುವುದನ್ನು ರೂಢಿಸಿಕೊಂಡಿದ್ದಾರೆ.  ತಮ್ಮ ಮೂಲ ಊರಾದ ತಾಳಿಕೋಟೆ ತಾಲೂಕಿನ ತುಂಬಗಿ ಬಳಿ ಇರುವ ಹಳ್ಳದ ಪಕ್ಕದಲ್ಲಿ ಅವರು ಅಂದು ಬಿತ್ತಿರುವ ಬೀಜಗಳು ಇಂದು ಹೆಮ್ಮರವಾಗಿ ಬೆಳೆದಿವೆ.  ಅಷ್ಟೇ ಅಲ್ಲ, ಆರೂವರೆ ಕೂರಗಿ ಅಂದರೆ ಸುಮಾರು 24 ಎಕರೆ ಪ್ರದೇಶದಲ್ಲಿ ಅವರು ಭಾರತೀಯ ಹಳೆಯ ಪದ್ದತಿಯಂತೆ ಬೀಜ ಬಿತ್ತನೆ ಮಾಡಿದ್ದಾರೆ.  ಅಂದು ಒಂದು ಹುಣಸೆ ಗಿಡ ಮಾತ್ರ ಇತ್ತು.  ಇಂದು ಅಲ್ಲಿ 100ಕ್ಕೂ ಹೆಚ್ಚು ಹುಣಸೆ...

ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ-ಸಂತೋಷ ಬಂಡೆ

ಇಮೇಜ್
ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ-ಸಂತೋಷ ಬಂಡೆ ಇಂಡಿ: ದೈನಂದಿನ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ರಕ್ತಹೀನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.          ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸೋಮವಾರದಂದು 'ರಕ್ತಹೀನತೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ'ವನ್ನು ಉದ್ಧೇಶಿಸಿ ಮಾತನಾಡಿದರು.         ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣುಗಳಂತಹ ಆಹಾರ ಸೇವನೆಯಿಂದ ದೇಹಕ್ಕೆ ಹೇರಳವಾಗಿ ಕಬ್ಬಿಣಾಂಶ ದೊರೆಯುತ್ತದೆ. ಆಗ ರಕ್ತಹೀನತೆ ಮುಕ್ತವಾಗಿ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.        ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,  ರಕ್ತಹೀನತೆಗೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆದಾಗ ನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಮತ್ತು ಉಸಿರಾಟದಲ್ಲಿ ಸಮಸ್ಯೆ ಕಾಣುವುದು. ಹಾಗಾಗಿ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.         ಶಿಕ್ಷಕರಾದ ಎಸ್ ಪಿ ಪೂಜಾರಿ, ಅಲ್ಫಿಯಾ ಅಂಗಡಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದ...

ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ

ಇಮೇಜ್
  ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ವರದಿ  ದಿನಾಂಕ ೧೨.೧೨.೨೦೨೪ ರಂದು ನಗರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಜಿ.ಆರ್. ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದ ಇತಿಹಾಸ ಮತ್ತು ಕನ್ನಡ ವಿಭಾಗ ಹಾಗೂ ಶಾಸನಶಾಸ್ತç ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಸಹಯೋಗದಲ್ಲಿ ‘ಇಂಡಿ ತಾಲ್ಲೂಕು ಶಾಸನಗಳು ಮತ್ತು ಸಂಸ್ಕೃತಿ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ  ಸಂಕಿರಣ ಕಾರ್ಯಕ್ರಮ ಜರುಗಿತು.  ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ.ಡಿ.ವ್ಹಿ.ಪರಮಶಿವಮೂರ್ತಿ ಮಾನ್ಯ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ‘ಇತಿಹಾಸವೆಂದರೆ ಕೇವಲ ನಡೆದ ಘಟನೆಗಳ ಮೊತ್ತವಲ್ಲ. ಅದೊಂದು ಸಾಂಸ್ಕೃತಿಕ ಬದುಕು. ಆ ಬದುಕನ್ನು ಹೊಂದಿರುವAಥದ್ದು ಈ ಇಂಡಿ ತಾಲ್ಲೂಕಿನಲ್ಲಿ ಕಾಣಿತ್ತವೆ. ಈ ತಾಲ್ಲೂಕಿನ ಶಾಸನಗಳಲ್ಲಿ ಇಲ್ಲಿನ ಅರಸರು, ಅವರ ಸಾಧನೆಗಳು, ಅವರು ನಿರ್ಮಿಸಿದ ಸ್ಮಾರಕಗಳ ಮಾಹಿತಿಗಳಿವೆ. ತರ್ದವಾಡಿ ನಾಡೆಂದು ಗುರುತಿಸಿಕೊಂಡ ಇದು ಕೃಷ್ಣಾ-ಭಿಮಾ ನದಿಗಳ ಮಧ್ಯದ್ದಾಗಿದೆ.  ಇಂದಿನ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಾಗೇವಾಡಿ ಹಾಗೂ ಬಿಜಾಪುರ ತಾಲ್ಲೂಕುಗಳನ್ನೊಳಗೊಂಡಿತ್ತಲ್ಲದೆ, ಮಹಾರಾಷ್ಟçದ ಜತ್ತ, ಮಂಗಳವೇಡ, ಗುಲ್ಬರ್ಗಾ ಜಿಲ್ಲೆಯ ...

ಶ್ರೀ ಜಂಗರೋದಕ ಸೀಮೆಂಟ್ ಡೀಲರಸ್ ಮೀಟ್ ಬಿಜಾಪುರ.

ಇಮೇಜ್
 ವಿಜಯಪುರ. ನಗರದ ಗ್ಯಾಲಕ್ಸಿ ಹೋಟೆಲ್ ನಲ್ಲಿ ಬಂಗೂರ  ಶ್ರೀ  ಜಂಗರೋದಕ ಸೀಮೆಂಟ ಕಂಪನಿಯ ವತಿಯಿಂದ  ಬಿಜಾಪುರ ಜಿಲ್ಲಾ ಮಟ್ಟದ ಎಲ್ಲಾ ಡೀಲರಸ್ ಗಳಿಗೆ ಕಂಪನಿಯ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಕಂಪನಿಯ ಸ್ಟೇಟ್ ಹೇಡ್ ರಾದ  ಉದಯ ಪಾಟೀಲ್ ಮಾತನಾಡಿ ಶ್ರೀ ಸಿಮೆಂಟ್ ಒಂದು ಭಾರತೀಯ ಸಿಮೆಂಟ್ ತಯಾರಕರಾಗಿದ್ದು, ಇದನ್ನು 1979 ರಲ್ಲಿ ರಾಜಸ್ಥಾನದ ಬೇವಾರ್‌ನಲ್ಲಿ ಸ್ಥಾಪಿಸಲಾಯಿತು . ಈಗ ಕೋಲ್ಕತ್ತಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ , ಇದು ಸಾಮರ್ಥ್ಯದ ಮೂಲಕ ಭಾರತದ ಅತಿದೊಡ್ಡ ಸಿಮೆಂಟ್ ಉತ್ಪಾದಕವಾಗಿದೆ. ಮತ್ತು ಮಾರುಕಟ್ಟೆ ಬಂಡವಾಳೀಕರಣದಿಂದ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಶ್ರೀ ಸಿಮೆಂಟ್ ಸಾಗರೋತ್ತರ ಕಾರ್ಯಾಚರಣೆಗಳನ್ನು ಒಳಗೊಂಡಂತೆ 50.9mt ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.  ಟೆಕನಿಕಲ್ ಸ್ಟೇಟ್ ಆಫಿಸರ್ ರಾದ ವೆಂಕಟರಾಮಣ ರೆಡ್ಡಿ ಮಾತನಾಡಿ  ಶ್ರೀ ಸಿಮೆಂಟ್ ಪ್ರಕ್ರಿಯೆ ಸುಧಾರಣೆ, ತಂತ್ರಜ್ಞಾನ ಅಳವಡಿಕೆ ಮತ್ತು ಸುಸ್ಥಿರ ಅಭ್ಯಾಸಗಳಂತಹ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ, ಪರಿಸರ ಸ್ನೇಹಿ ಮತ್ತು ಪರಿಣಾಮಕಾರಿ ಉತ್ಪಾದನಾ ಪರಿಹಾರಗಳನ್ನು ಪರಿಚಯಿಸಲು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುತ್ತದೆ. ನಾಗರಾಜ ಡಿ.ಕೆ ಸೇಲಸ್ ಮ್ಯಾನೇಜರ್ ಮಾತನಾಡಿ ಭಾರತೀಯ ಉತ್ಪಾದನಾ ಭೂದೃಶ್ಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ...

ಪತ್ರಕರ್ತ ರಾಹುಲ್ ಆಪ್ಟೆ ಅವರ ಪುತ್ರಿ ಶೃದ್ದಾ ಆಪ್ಟೆ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ಇಮೇಜ್
ಪತ್ರಕರ್ತ ರಾಹುಲ್ ಆಪ್ಟೆ ಅವರ ಪುತ್ರಿ ಶೃದ್ದಾ ಆಪ್ಟೆ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ವಿಜಯಪುರದ ಸಾಯಿ ಗಾರ್ಡನ್ ಮೈದಾನದಲ್ಲಿ ನಡೆದ ಭಗವದ್ಗೀತಾ ಅಭಿಯಾನ 2024 ರಾಜ್ಯ ಮಟ್ಟದ ಮಹಾಸಮರ್ಪಣೆ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಶ್ರೀಗಳು, ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಸಿಂದಗಿ ಸಾರಂಗಮಠದ ಶ್ರೀಗಳು ಸೇರಿದಂತೆ ಸ್ವಾಮೀಜಿಗಳು ಹಾಗೂ ಭಗವದ್ಗೀತಾ ಅಭಿಯಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ, ಭಗವದ್ಗೀತಾ ಅಭಿಯಾನ ಅವರು ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಶೃದ್ದಾ ಆಪ್ಟೆ ಸಂಸ್ಕೃತದಲ್ಲಿ ಭಗವದ್ಗೀತಾ ಬಗ್ಗೆ ಭಾಷಣ ಮಾಡಿ ರಾಜ್ಯದಲ್ಲೇ ಪ್ರಥಮ‌ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ವತಿಯಿಂದ ವಿಜಯಪುರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಯಿತು.

ಇಮೇಜ್
ವಿಜಯಪುರ 14. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ವತಿಯಿಂದ  ವಿಜಯಪುರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಲಾಯಿತು. ಮಾಜಿ ಕ್ರಿಕೆಟ್ ಆಟಗಾರ, ಕೆ.ಎಸ್.ಸಿ.ಎ ಸದಸ್ಯ ಮತ್ತು ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರು ವಿಜಯಪುರದಲ್ಲಿ ಸುಂದರ ಕ್ರಿಕೆಟ್ ಕ್ರೀಡಾಂಗಣ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರೊಂದಿಗೆ ಈ ಹಿಂದೆ ಕೂಡ ಚರ್ಚಿಸಿದ್ದರು.  ನಗರದ ಹೊರವಲಯದ 2-3 ಜಾಗೆಗಳನ್ನು ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಗುರುತಿಸುವ ಪ್ರಕ್ರಿಯೆ ನಡೆದಿದ್ದು, ಅದರನ್ವಯ ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಭೂಬಾಲನ್ ಹಾಗೂ ಜಿ.ಪಂ ಮುಖ್ಯಕಾರ್ಯನಿರ್ವಾಧಿಕಾರಿ ರಿಷಿ ಆನಂದ, ಉಪವಿಭಾಗಾಧಿಕಾರಿ ಗುರುನಾಥ, ತಹಶೀಲ್ದಾರ ಚನಗೊಂಡ, ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಇವರುಗಳು ಇಂದು ಸ್ಥಳ ಪರಿಶೀಲನೆ ನಡೆಸಿದರು.  ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ, ವಿಜಯಪುರದಿಂದ ವಿಮಾನ ಸಂಪರ್ಕ ಆರಂಭಗೊಂಡರೆ, ಅಂತರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಕೂಡ ಇಲ್ಲಿ ಆಯೋಜಿಸಬಹುದು. ಆ ನಿಟ್ಟಿನಿಂದಲೇ ನಾವು ದೂರದೃಷ್ಟಿಯಿಂದ ಇಲ್ಲಿ ಅತ್ಯತ್ತಮ ಕ್ರೀಡಾಂಗಣ ನಿರ್ಮಿಸಲು ಉದ್ದೇಶ ಹೊಂದಲಾಗಿದೆ. ಜಿಲ್ಲಾಡಳಿತದ ಸಹಯೋಗದಿಂದ ಕ್ರೀಡಾಂಗಣ ಸ್ಥಳ ನಿಗಧಿಪಡಿಸಿದರೆ, ಮಾನ್ಯ ಸಚಿವ ಎಂ.ಬಿ.ಪಾಟೀಲರು ಆಸಕ್ತಿ ಹೊಂದಿದ್ದು, ರಾಜ್ಯ ಸರ್...

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಸಹಕಾರಿ: ಸಿಎಂ ಸಿದ್ದರಾಮಯ್ಯ

ಇಮೇಜ್
  ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿರಿಧಾನ್ಯ ಸಹಕಾರಿ:  ಸಿಎಂ ಸಿದ್ದರಾಮಯ್ಯ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಿರಿಧಾನ್ಯ ಕೃಷಿಯಲ್ಲಿ ತೊಡಗಿಕೊಳ್ಳಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ: ಇಡೀ ದೇಶದಲ್ಲಿ ಕರ್ನಾಟಕ ಸಿರಿಧಾನ್ಯ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯ ಕೃಷಿಯನ್ನು ತೊಡಗಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಪೂರವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಡಿಸೆಂಬರ್ 23, 24, 25 ರಂದು ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳ ನಡೆಯಲಿದ್ದು, ಪೂರ್ವಭಾವಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿರುವುದಾಗಿ ತಿಳಿಸಿದರು. ದೇಶ ವಿದೇಶಗಳಲ್ಲಿ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದೆ. ವಿಶ್ವದಲ್ಲಿ 903.61 ಲಕ್ಷ ಟನ್ ಗಳಷ್ಟು ಸಿರಿಧಾನ್ಯವನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ  31.50 ರಷ್ಟು ಬೆಳೆಯುತ್ತಿದ್ದು, ವಿಶ್ವದಲ್ಲಿ ಅತ್ಯಂತ ಹೆಚ್ಚು ಸಿರಿಧಾನ್ಯ ಬೆಳೆಯುವ ದೇಶವಾಗಿದೆ. ಸುಮಾರು 18.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ  22.16 ಲಕ್ಷ ಟನ್ ಗಳಷ್ಟು ಸಿರಿಧಾನ್ಯವನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ ಪ್ರೊಟೀನ್ ಹಾಗೂ ನಾರಿನ ಅ...

ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ

ಇಮೇಜ್
 ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ವಿಜಯಪುರ, ಡಿಸೆಂಬರ್ 13: ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ಅವರು ಇಂದು  ವಿಜಯಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೇಳುವುದಕ್ಕೆ, ಚಳವಳಿ ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆಯಾಗಬೇಕು. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳು ಹೃದಯಹೀನರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವ ಬಗ್ಗೆ ಮಾತನಾಡಿ ಈ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಸ್ವಾಮೀಜಿಯಾಗಲಿ, ಯಾರಾದರೂ ಆಗಿರಲಿ.‌ ಎಲ್ಲರಿಗೂ ಕಾನೂನು ಒಂದೇ. ನನಗೂ, ಸ್ವಾಮೀಜಿಗೂ ಎಲ್ಲರಿಗೂ ಒಂದೇ. ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ  ಕಾನೂನಿನ ಸಮಾನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದರು.  ಸಂವಿಧಾನದ ಪ್ರಕಾರ   ನಡೆದುಕೊಳ್ಳುತ್ತೇವೆ ಪ್ರವರ್ಗ 2ಎ ಅಡಿಯಲ್ಲಿರುವ ಸಮುದಾಯಗಳು ಪಂಚಮಸಾಲಿ ಸಮುದಾಯವನ್ನು 2 ಎ ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು