ಉರ್ದು ಭಾಷೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಬೌದ್ಧಿಕ ಪರಂಪರೆಯ ಗುರುತು ಕೂಡಾ ಆಗಿದೆ. ಎಂದು ಜೆಒಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಹ ಬಕ್ಷ್ ವಾಲೀಕಾರ
ಇಂಡಿ: ಉರ್ದು ಭಾಷೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಬೌದ್ಧಿಕ ಪರಂಪರೆಯ ಗುರುತು ಕೂಡಾ ಆಗಿದೆ. ಎಂದು ಜೆಒಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಹ ಬಕ್ಷ್ ವಾಲೀಕಾರ ಅವರು ಹೇಳಿದರು. ಇಂಡಿ ತಾಲ್ಲೂಕಿನ ಇಂಗಳಿಗಿ ಗ್ರಾಮದ ಸರಕಾರಿ ಉರ್ದು ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಉರ್ದು ಶಾಲೆಗಳು ಕೇವಲ ಉತ್ತಮ ಶಿಕ್ಷಣ ನೀಡುವ ಸ್ಥಳವಲ್ಲ, ಅವು ವಿದ್ಯಾರ್ಥಿಗಳ ನೈತಿಕ, ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ." "ಉರ್ದು ಶಾಲೆಗಳು ನಮ್ಮ ಸಮುದಾಯದ ಮಕ್ಕಳಿಗೆ ಜ್ಞಾನ ಮತ್ತು ಸಾಹಿತ್ಯದ ಬೆಳಕು ಹರಡುತ್ತವೆ. ಇಲ್ಲಿ ಕೇವಲ ಆಧುನಿಕ ಶಿಕ್ಷಣವಲ್ಲ, ವಿದ್ಯಾರ್ಥಿಗಳನ್ನು ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೂ ಪರಿಚಯ ಮಾಡಲಾಗುತ್ತದೆ. ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಮತ್ತು ಇತರ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಆದ್ದರಿಂದ, ಶಿಕ್ಷಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಉರ್ದು ಶಾಲೆಗಳ ಉಳಿವಿಗಾಗಿ ಹೋರಾಟ ಮಾಡಬೇಕು. ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅವರನ್ನು ಉರ್ದು ಶಾಲೆಗಳಲ್ಲಿ ಪ್ರವೇಶಿಸಬೇಕು ಎಂದರು. ಈ ಸಂದರ್...