ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಯುಷ್ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿ, ರಾಷ್ಟ್ರೀಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ(QCI) ಮಾರ್ಗದರ್ಶನ ಮಾಡುತ್ತಿದೆ

ಇಮೇಜ್
ವಿಜಯಪುರ: ಆಯುಷ್ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿ, ರಾಷ್ಟ್ರೀಯ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ(QCI) ಮಾರ್ಗದರ್ಶನ ಮಾಡುತ್ತಿದೆ ಎಂದು ಕ್ಯೂಸಿಐ ದಕ್ಷಿಣ ಭಾರತ ಮುಖ್ಯಸ್ಥ ವೇಣುಗೋಪಾಲ ಸಿ ತಿಳಿಸಿದ್ದಾರೆ. ಶುಕ್ರವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಕ್ಯೂಸಿಐ ಮತ್ತು ನ್ಯಾಷನಲ್ ಅಕ್ರಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಅಂಡ್ ಹೆಲ್ತ್ಕೇರ್ ಪ್ರೊವೈಡರ್ಸ್ (NABH) ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗುಣವತ್ತಾ ಯಾತ್ರೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಆಯುಷ್ ಆಸ್ಪತ್ರೆಗಳಿಗೆ ನ್ಯಾಭ್ ಮಾನ್ಯತೆ ಪಡೆಯಲು ಅಗತ್ಯವಾಗಿರುವ ಸೌಲಭ್ಯಗಳು, ಅನುಸರಿಸಲಾಗಿರುವ ಮಾನದಂಡಗಳ ಕುರಿತು ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ ಅವರು, ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿರು ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಅಲ್ಲದೇ, ಕ್ಯೂಸಿಐ ವತಿಯಿಂದ ಶೀಘ್ರದಲ್ಲಿ ಇದೇ ಕಾಲೇಜಿನಲ್ಲಿ ಶೀಘ್ರದಲ್ಲಿ ಮತ್ತೋಂದು ಕಾರ್ಯಕ್ರಮ ಆಯೋಜಿಸಲಾಗುವುದು.  ಅಲ್ಲದೇ, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಲ್ಯಾಬೊರೇಟರಿಗಾಗಿ ನ್ಯಾಶನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಲ್ಯಾಬೊರೇಟರಿ(NABL) ಮಾನ್ಯತೆ ಒದಗಿಸಲು ಸಹಕಾರ ಮಾರ್ಗದರ್ಶನ ಮಾಡುವುದಾಗ...

ಡೋಣಿ ನದಿ ಪಾತ್ರದಲ್ಲಿನ ಬೆಳೆ ನಷ್ಟ ಕುರಿತು ಜಂಟಿ ಸಮೀಕ್ಷೆ ಶೀಘ್ರದಲ್ಲೇ ಪೂರ್ಣ ಸಮೀಕ್ಷೆ ವರದಿಯಾಧಾರಿಸಿ ಬೆಳೆ ಪರಿಹಾರಕ್ಕೆ ಕ್ರಮ :ಜಿಲ್ಲಾಧಿಕಾರಿ ಡಾ.ಆನಂದ ಕೆ.

ಇಮೇಜ್
 ಡೋಣಿ ನದಿ ಪಾತ್ರದಲ್ಲಿನ ಬೆಳೆ ನಷ್ಟ ಕುರಿತು ಜಂಟಿ ಸಮೀಕ್ಷೆ ಶೀಘ್ರದಲ್ಲೇ ಪೂರ್ಣ ಸಮೀಕ್ಷೆ ವರದಿಯಾಧಾರಿಸಿ ಬೆಳೆ ಪರಿಹಾರಕ್ಕೆ ಕ್ರಮ :ಜಿಲ್ಲಾಧಿಕಾರಿ ಡಾ.ಆನಂದ ಕೆ. ವಿಜಯಪುರ:  ಮುಂಗಾರು ಮಳೆ ಹಿನ್ನಲೆಯಲ್ಲಿ ಡೋಣಿ ನದಿ ತೀರದ ಪ್ರದೇಶದಲ್ಲಿನ ಕೃಷಿ ಭೂಮಿ ಪ್ರವಾಹಕ್ಕೊಳಗಾಗಿ ಅಂದಾಜು 5500 ಹೆಕ್ಟೇರ್ ಜಮೀನು ಮುಳುಗಡೆಯಾಗಿ ಬೆಳೆಗಳು ಹಾನಿಯಾಗಿದ್ದು, ಈ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಶೀಘ್ರದಲ್ಲೇ ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲಿದ್ದು, ವರದಿಯನುಸಾರ ಬೆಳೆ ನಷ್ಟವಾಗಿರುವ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ತಿಳಿಸಿದರು.  ಡೋಣಿ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಶನಿವಾರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು  ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರೊಂದಿಗೆ ಜಂಟಿಯಾಗಿ ಜಿಲ್ಲೆಯ ಸಾರವಾಡ, ದದಾಮಟ್ಟಿ, ಉಕುಮನಾಳ, ಎಂಭತ್ನಾಳ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ  ಮಾತನಾಡಿದರು.  ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಈಗಾಗಲೇ ಸ್ಥಳೀಯ ರೈತರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಇವರ ಬೇಡಿಕೆಯನ್ವಯ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾಗುವ ಅನುದ...

ವಿಡಿಸಿಸಿ 2024-25ನೇ ಹಾಗೂ 106ನೇ ವಾರ್ಷಿಕ ಸಭೆ- 7094 ಕೋಟಿ ರೂ. ವ್ಯವಹಾರ-25.18 ಕೋಟಿ ರೂ. ನಿವ್ವಳ ಲಾಭ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಡಿಸಿಸಿ ಕೊಡುಗೆ ಅನುಪಮ ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ

ಇಮೇಜ್
 ವಿಡಿಸಿಸಿ 2024-25ನೇ ಹಾಗೂ 106ನೇ ವಾರ್ಷಿಕ ಸಭೆ- 7094 ಕೋಟಿ ರೂ. ವ್ಯವಹಾರ-25.18 ಕೋಟಿ ರೂ. ನಿವ್ವಳ ಲಾಭ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಡಿಸಿಸಿ ಕೊಡುಗೆ ಅನುಪಮ ರಾಜ್ಯ ಮಟ್ಟದಲ್ಲಿ ಲಾಭದಲ್ಲಿ ಡಿಸಿಸಿ ಬ್ಯಾಂಕ್ 3ನೇ ಸ್ಥಾನ-ಶಿವಾನಂದ ವಿಜಯಪುರ: ನಷ್ಟದಲ್ಲಿರುವ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಹಾಗೂ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳಿಗೆ ನೆರವು ನೀಡಿ ಅವುಗಳ ‍ಪುನ‍ ಶ್ಚೇತನಕ್ಕೆ ಕಾರಣವಾದ ಹೆಗ್ಗಳಿಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಸಲ್ಲುತ್ತದೆ. ಪರಿಣಾಮವೇ ಇದೀಗ ರಾಜ್ಯದಲ್ಲೇ ನಮ್ಮ ಬ್ಯಾಂಕ್ ಲಾಭದಲ್ಲಿ 3ನೇ ಸ್ಥಾನ ಪಡೆದಿರುವುದಕ್ಕೆ ಸಾಕ್ಷಿ ಎಂದು ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು. ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕಿನ 106ನೇ ವಾರ್ಷೀಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ನಮ್ಮ ಬ್ಯಾಂಕ್8.53 ಕೋಟಿ ರೂ. ತೆರಿಗೆ ಪಾವತಿ ಬಳಿಕ 25.18 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಇತಿಹಾದಲ್ಲೇ ಇದು ದಾಖಲೆ ಬರೆದಿದೆ. 106 ವರ್ಷಗಳ ಇತಿಹಾಸದಲ್ಲಿ ನಮ್ಮ ಬ್ಯಾಂಕ್ 99 ವರ್ಷಗಳಲ್ಲಿ 245.90 ಕೋಟಿ ರೂ. ಲಾಭದಲ್ಲಿ ಮುನ್ನಡೆದು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿರುವುದು ನಮ್ಮ ಬ್ಯಾಂಕಿನ ಸಾಧನೆ. 7 ವರ್ಷಗ...

ಹಾಕಿಯ ಜಾದುಗಾರ ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ ಹಾಗೂ ಶಿಸ್ತುಪರ ವ್ಯಕ್ತಿತ್ವದ ಮಾದರಿ ಎಂದು ಸಿಂದಗಿ ಪೊರವಾಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರವಿ ಗೋಲಾ

ಇಮೇಜ್
 ವಿಜಯಪುರ: ಹಾಕಿಯ ಜಾದುಗಾರ ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ ಹಾಗೂ ಶಿಸ್ತುಪರ ವ್ಯಕ್ತಿತ್ವದ ಮಾದರಿ ಎಂದು ಸಿಂದಗಿ ಪೊರವಾಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರವಿ ಗೋಲಾ ಅವರು ಹೇಳಿದರು. “ನಗರದ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣಾ ಕಾರ್ಯಕ್ರಮದಲ್ಲಿ, ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನಚಂದರವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.” ಅವರ ಅದ್ಭುತ ಆಟದ ಬಗ್ಗೆ ಮಾತನಾಡಿ, ಹಿಟ್ಲರ್ ಕೂಡ ಧ್ಯಾನಚಂದರನ್ನು ಮೆಚ್ಚಿಕೊಂಡಿದ್ದ ಘಟನೆ ಪ್ರಸ್ತಾಪ ಮಾಡಿದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನದಿಂದ ಧ್ಯಾನಚಂದ ವಿಶ್ವದ ಗಮನ ಸೆಳೆದಿದ್ದರು. ಹಿಟ್ಲರ್ ಅವರಿಗೂ ಆಶ್ಚರ್ಯ ಹುಟ್ಟಿದಂತಹ ಕ್ರೀಡಾ ಪ್ರತಿಭೆ ಅವರದ್ದಾಗಿತ್ತು. ಧ್ಯಾನಚಂದರ ಸಾಧನೆಗಳು ಇಂದಿಗೂ ಪ್ರತಿಯೊಬ್ಬ ಕ್ರೀಡಾಭಿಮಾನಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.  ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ರಸಪ್ರಶ್ನೆ ನಡೆಸಿ    ನಗದು ಬಹುಮಾನ     ವಿತರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಭೋದಿಸಿ, ಮಕ್ಕಳಿಗೆ ಕ್ರೀಡೆಯ ಮಹತ್ವವನ್ನು ಮನದಟ್ಟು ಮಾ...

ನಷ್ಟಗೊಂಡ ಈರುಳ್ಳಿ ಬೆಳೆ ವಿಕ್ಷಣೆ ಮಾಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ

ಇಮೇಜ್
 ನಷ್ಟಗೊಂಡ ಈರುಳ್ಳಿ ಬೆಳೆ ವಿಕ್ಷಣೆ ಮಾಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ ಕಳಪೆ ಮಟ್ಟದ ಈರುಳ್ಳಿ ಬೀಜದಿಂದಾಗಿ ನಷ್ಟಗೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ ವಿಜಯಪುರ : ಕಳಪೆ ಮಟ್ಟದ ಈರುಳ್ಳಿ ಬೀಜದಿಂದಾಗಿ ನಷ್ಟಗೊಂಡ ರೈತರ ಜಮೀನಿಗೆ ತೋಟಗಾರಿಕಾ ಅಧಿಕಾರಿಗಳು ಬೇಟಿ ನೀಡಿ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶಾಂಪಲ್ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ರೈತ ಕುಟುಂಬಕ್ಕೆ ಧೈರ್ಯ ತುಂಬಿದ ಬಸನಗೌಡ ಪಾಟೀಲ, ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಶ್ರೀಮತಿ ಶಾರವ್ವ ಗುರಪ್ಪ ತಳವಾರ ಸರ್ವೇ ನಂ ೭೫/೫ ಒಟ್ಟು ೪ ಎಕರೆ ಪ್ರದೇಶದಲ್ಲಿ ಕಳಶ ಸಿಡ್ಸ್ ಕಂಪನಿಯ ಸಂಗಮ ಸೆಲೆಕ್ಷನ ಈರುಳ್ಳಿ ಬೀಜವನ್ನು ಬಿತ್ತನೆ ಮಾಡಿ ಇನ್ನೆನು ೧೫ ದಿನಗಳಲ್ಲಿ ಬೆಳೆ ಫಸಲಿಗೆ ಬರುವ ವೇಳೆ ಈರುಳ್ಳಿ ಬೇರು  ಕೆಳಗೆ ಹೋಗಿ ಉಳಿದಿರುವ ಗಡ್ಡಿ ಮೇಲೆ ಬಂದು ಸಂಪೂರ್ಣ ನಷ್ಟಗೊಂಡಿದೆ ಇದರಿಂದಾಗಿ ರೈತ ಸುಮಾರು ೫-೬ ಲಕ್ಷ ನಷ್ಟ ಅನುಭವಿಸುವಂತಾಗಿದೆ ಕೂಡಲೇ ಆ ಈರುಳ್ಳಿ ಬೀಜದ ಕಂಪನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಷ್ಟ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಾಸಿರು ಸೇನೆ ಮನವಿ ಸಲ್ಲಿಸಿರುವ ಮೇರೆಗೆ ಅಧಿಕಾರಿಗಳು ಜಮೀನಿಗೆ ಬೇಟಿ ನೀಡಿದರು.  ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಬಿರಾದಾರ, ಸಹಾಯಕ ನಿರ್ದೇಶಕರಾದ...

ಕೆಪಿಆರ್ ಶೋಗರ ಫ್ಯಾಕ್ಟರಿ ಸಿಬ್ಬಂದಿಗೆ ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿ ಸಾವು.

ಇಮೇಜ್
 ಅಪರಿಚಿತ ವಾಹನ ಡಿಕ್ಕ ಬೈಕ್ ಸವಾರ ಸ್ಥಳದಲ್ಲಿ ಸಾವು.  ಇಂಡಿ ತಾಲೂಕಿನ  ಲಚ್ಯಾಣ ಗ್ರಾಮದ ಪ್ರವಿನ ನಾಗನಾಥ ಮೊಜಗೊಂಡ  32 ವಯಸ ಮೃತ ದುರ್ದೈವಿ. ಮೃತನು ಕೆಪಿಆರ್ ಶೋಗರ ಫ್ಯಾಕ್ಟರಿ ನಾದ ಕೆ.ಡಿ ಗ್ರಾಮದಲ್ಲಿ   ಬಿ ಗ್ರಡ್ ಮಿಸ್ತರಿ ಯಾಗಿ ಕೆಲಸ ಮಾಡುತಿದ್ದ.   ರಾತ್ರಿ ವೇಳೆ ತಮ್ಮ  ಕೆಲಸ ಮಾಡಿ ಬೆಳಗಿನ ಜಾವಾ  5..30 ಗಂಟೆಗೆ ತಮ್ಮ ಗ್ರಾಮ ಲಚ್ಯಾಣಕ್ಕೆ ಹೊರಡುವಾಗ ತೆಗ್ಗೀಹಳಿ  ಕ್ರಾಸ್ ಬಳಿ  ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ವ್ಯಕ್ತಿ ಮರಣ ಹೊಂದಿದ್ದು.  ಅಪರಿಚಿತ  ವಾಹನ ಹಾಗೂ ಚಾಲಕ ಪರಾರಿಯಾಗಿ  ಹೋಗಿರುತ್ತಾರೆ.  ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ಧಾಖದಾಲಾಗಿದೆ.

ಕೃಷಿ ಚಟುವಟಿಕೆಯೊಂದಿಗೆ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಆಸಕ್ತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಹೇಳಿದರು.

ಇಮೇಜ್
 ವಿಜಯಪುರ. ಕೃಷಿ ಚಟುವಟಿಕೆಯೊಂದಿಗೆ ರೈತರು ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸಲು ಆಸಕ್ತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಹೇಳಿದರು. ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,              ಕೃಷಿ ಇಲಾಖೆ, ಹಾಗೂ ಕೆಪೆಕ್ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆಯ ಯೋಜನೆ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಜಿಲ್ಲೆಯಲ್ಲಿ ಸ್ವಸಹಾಯ ಗುಂಪು ಚಟುವಟಿಕೆಗಳ ಕಾರ್ಯವ್ಯಾಪ್ತಿ ವಿಸ್ತರಿಸುವ ದೃಷ್ಟಿಯಿಂದ ಸಣ್ಣ ಉದ್ದಿಮೆ ಆಹಾರ ಸಂಸ್ಕರಣಾ ಘಟಕಗ¼ನ್ನು ಸ್ಥಾಪಿಸುವ ಮೂಲಕ ಸಿಗುವ ಸಾಲ-ಸೌಲಭ್ಯ ಪಡೆದುಕೊಂಡು ಪ್ರಗತಿ ಸಾಧಿಸುವಂತೆ ತಿಳಿಸಿದ ಅವರು, ಈ ಬಗ್ಗೆ ಸಂಬAಧಿಸಿದ ಇಲಾಖೆಗಳು ಪೂರಕ ಮಾಹಿತಿ ಒದಗಿಸುವಂತೆ  ಬ್ಯಾಂಕಗಳು ಅರ್ಹರಿಗೆ ಸಾಲ ಸೌಲಭ್ಯ ಒದಗಿಸಿ ಈ ಯೋಜನೆಯ ಲಾಭ ಅರ್ಹರಿಗೆ ತಲುಪಿಸುವಂತೆ ಅವರು ಹೇಳಿದರು.   ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಿಳಿಜೋಳ ಹಾಗೂ ವಾಣಿಜ್ಯ ಬೆಳೆಗಳು ಸೆರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರು ತಮ್ಮ ವ್ಯವಸಾಯದೊಂದಿಗೆ ಕಿರು ಆಹಾರ ಧಾನ್ಯ ಘಟಕಗಳ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಉದ್ದಿಮೆದಾರರಾಗಿ ತಾವುಗಳು ಆರ್ಥ...

ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೇ ಮತ್ತು ಒಂದು ದಿನದ ಉಚಿತ ಕಾರ್ಯಾಗಾರ ಹಮ್ಮಿಕೊಂಡಲಾಗಿದೆ.: ಸುನಿಲಕುಮಾರ ಅತನೂರ.

ಇಮೇಜ್
 ಇಂಡಿ.  ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂಡಿ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೇ ಮತ್ತು ಒಂದು ದಿನದ ಉಚಿತ ಕಾರ್ಯಾಗಾರ ಹಮ್ಮಿಕೊಂಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಇಂಡಿ ತಾಲೂಕಿನ ಅಧ್ಯಕ್ಷ ಸುನಿಲ ಕುಮಾರ ಅತನೂರ ತಿಳಿಸಿದರು.  ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಪ್ಟಂಬರ್ 7 ರಂದು ಇಂಡಿ ನಗರದ ಗುರು ಭವನದಲ್ಲಿ ನಡೆಯಲಿದೆ ವಾಯ್.ವ್ಹಿ.ಪಾಟೀಲ ಫೌಂಡೇಷನ್ ವತಿಯಿಂದ  ಪ್ರಥಮ ಬಹುಮಾನ 25 ಸಾವಿರ. ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 11ಸಾವಿರ ನಾಲ್ಕನೆಯ ಬಹುಮಾನ 7500 ಸಾವಿರ ಐದನೆಯ ಬಹುಮಾನ 5 ಸಾವಿರ ಆರನೇಯ ಬಹುಮಾನ 3 ಸಾವಿರ ಮತ್ತು ಸಮಾಧಾನಕರವಾಗಿ 20 ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.  ಉಪನ್ಯಾಸಕರಾಗಿ ಮೇಜರ ಸಿದ್ದಲಿಂಗಯ್ಯ ಹಿರೇಮಠ (ಕೆ.ಎ.ಎಸ್.) ಮತ್ತು ವಶರಣ್ಯ ಭಂಡಾರಿಮಠ, ಮಲ್ಲು ಅತನೂರ, ಪಂಡೀತ ಇಮ್ಮನವರ, ಶಿವಮೂರ್ತಿ ಯಳಮೇಲಿ, ಆಗಮಿಸುತ್ತಿದ್ದುವ ಜಿಲ್ಲಾ 35 ವಯೋಮಿತಿಯ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ರಾಹುಲ ಮಡ್ಡಿಮನಿ, ಸಚಿನ ಹೋಸಮನಿ, ಪ್ರಕಾಶ ರವಳಿ, ಅಕಬರಖಾಣೆ, ಈಶ್ವರ ಸಜ್ಜನ, ಆನಂದ ಆಲಮೇಲ, ರಮೇಶ ಮಾವಿನಹಳ್ಳಿ, ಶರಣುಗೌಡ ಡೋಣೂರ, ಸಂತೋಷ ರವಳಿ, ಸುದೀಪ ಕಿತ್ತಲಿ, ರಾಹುಲ ಸುಲಾಖೆ, ಅಭಿಷೇ...

ವಿಜಯಪುರದಲ್ಲಿ ಧರ್ಮಸ್ಥಳ ಚಲೋ ಅಂಗವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಿತು.

ಇಮೇಜ್
 ವಿಜಯಪುರದಲ್ಲಿ ಧರ್ಮಸ್ಥಳ ಚಲೋ ಅಂಗವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಿತು. ವಿಜಯಪುರ : ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನ ನಡೆಸುತ್ತಿದ್ದು ಅದರ ಭಾಗವಾಗಿ ರಾಜ್ಯ ಸರ್ಕಾರದ ಧರ್ಮವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಗಾಂಧಿವೃತ್ತದಿAದ ಆರಂಭಗೊAಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಾಡಾಯಿತು. ರ‍್ಯಾಲಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರದ ಘೋಷಣೆ ಕೂಗಿದರು. ನೇತೃತ್ವ ವಹಿಸಿದ್ದ ಸಂಸದ ರಮೇಶ ಜಿಗಜಿಣಗಿ, ಧರ್ಮಸ್ಥಳ ಪವಿತ್ರ ಕ್ಷೇತ್ರ, ಹಿಂದೂಗಳು ಭಕ್ತಿಭಾವದಿಂದ ನಡೆದುಕೊಳ್ಳುವ ಧರ್ಮಸ್ಥಳದ ಮೇಲೆ ಕಳಂಕ ತರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ವನಾಶವಾಗುತ್ತದೆ, ಶಿವ ಎಲ್ಲವನ್ನೂ ನೋಡುತ್ತಿದ್ದಾನೆ, ಆತ ಮೂರನೇಯ ಕಣ್ಣು ತೆರೆದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದರು. ಯಾರೋ ಒಬ್ಬ ಅವಿವೇಕಿ ಹೇಳಿದ ಮಾತ್ರಕ್ಕೆ ಅಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುವುದೆಂದರೆ ಇನ್ನೇನು? ಇದು ಧರ್ಮವಿರೋಧಿ ಕಾರ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಅಪ್ಪಾಸಾಹ...

ಡಾ.ಬಿ.ಆರ್.ಅಂಬೆಡ್ಕರ್ ಕ್ರೀಡಾಂಗಣದಲ್ಲಿ ವಿಜಯಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಚಾಲನೆ ನೀಡಲಾಯಿತು.

ಇಮೇಜ್
 ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯಪುರ ಹಾಗೂ ಬೆಂಗಳೂರಿನ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಡಾ.ಬಿ.ಆರ್.ಅಂಬೆಡ್ಕರ್ ಕ್ರೀಡಾಂಗಣದಲ್ಲಿ ವಿಜಯಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ್ ದೈವಾಡಿ ಮಾತನಾಡಿ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ ಅವರ ಜನ್ಮ ದಿನಾಚರಣೆಯಾದ ಇಂದು ರಾಷ್ಟಿçÃಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಮಹಾನ್À ಕ್ರೀಡಾ ಸಾಧಕರ ಸಾಧನೆಯಿಂದ ಸ್ಪೂರ್ತಿ ಪಡೆದುಕೊಳ್ಳಬೇಕು. ನಿರ್ದಿಷ್ಟ ಗುರಿಯೊಂದಿಗೆ ಸತತ ಅಭ್ಯಾಸ, ತನ್ಮಯತೆ, ಕೌಶಲ್ಯ ಹಾಗೂ ಆ ದಿಸೆಯಲ್ಲಿನ ಪ್ರಯತ್ನ ಅಗತ್ಯವಾಗಿದೆ. ಕ್ರೀಡಾಪಟುಗಳು ತಮ್ಮ ಆಸಕ್ತಿಯ ಕ್ರೀಡೆÀಯಲ್ಲಿ ಬೆಳವಣಿಗೆ ಹೊಂದಲು  ಇಂತಹ ಕ್ರೀಡಾಕೂಟಗಳ ಆಯೋಜನೆ ಅವರ ಆಸಕ್ತಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದೆ ಎಂದು ಹೇಳಿದರು.    ಜಾವಿದ ಎಂ ಜಮಾದಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲವು ಸಾಮಾನ್ಯ. ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ನಿರಂತರವಾಗಿ ಪರಿಶ್ರಮದಿಂದ ಕ್ರೀಡೆಗಳಲ್ಲ...

ವಿಜಯಪುರ ತಾಲೂಕಿನ ಕವಲಗಿಯ ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಹಾಗೂ ಹೊನ್ನುಟಗಿಯ ಗ್ರಾಮ ಪಂಚಾಯತಿಯ ಆವರಣದಲ್ಲಿ ಖಾಯಂ ಜನತಾ ನ್ಯಾಯಾಲಯ ವಿಶೇಷ ಅಭಿಯಾನ

ಇಮೇಜ್
 ವಿಜಯಪುರ.  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ವಿಜಯಪುರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರ್ಗಿಯ ಖಾಯಂ ಜನತಾ ನ್ಯಾಯಾಲಯ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ವಿಜಯಪುರ ತಾಲೂಕಿನ ಕವಲಗಿಯ ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಹಾಗೂ ಹೊನ್ನುಟಗಿಯ ಗ್ರಾಮ ಪಂಚಾಯತಿಯ ಆವರಣದಲ್ಲಿ ಖಾಯಂ ಜನತಾ ನ್ಯಾಯಾಲಯ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಯಿತು.   ಅಭಿಯಾನವನ್ನು ಜಿಲ್ಲಾ ನ್ಯಾಯಾಧೀಶರು ಹಾಗೂ ಕಲಬುರ್ಗಿ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರಾದÀ ಎಸ್.ಎಲ್.ಚವ್ಹಾಣ ಅವರು ಉದ್ಘಾಟಿಸಿದರು. ಮದಭಾವಿ                 ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಭಾಗವ್ವ ಮಾದರ ಹಾಗೂ ಹೊನ್ನುಟಗಿಯ  ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಶಿವಪ್ಪ ಕೊಳುರ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಬುರಗಿ ಖಾಯಂ ಜನತಾ ನ್ಯಾಯಾಲಯದ ಸದಸ್ಯರಾದ ವಿಜಯ ವಿಠ್ಠಲ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಡಿ.ಜಿ.ಬಿರಾದಾರ, ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನಗೊಂಡ, ವಿಜಯಪುರ ತಾಲೂಕು ಪಂಚಾಯತಿಯ ಕಾರ್ಯ ನಿರ್ವಹಣಾಧಿಕಾರಿಯಾದ ಬಾಬು ರಾಠೋಡ ಭಾಗವಹಿಸಿದ್ದರು. ವಕೀಲರಾದ ಬಾಬು ಅವತಾಡೆ ಅವರು ಅತಿಥಿ ಉಪನ್ಯಾಸ ನ...

ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಮುಖ್ಯ: ಸಂತೋಷ ಬಂಡೆ

ಇಮೇಜ್
 ರಾಷ್ಟ್ರೀಯ ಕ್ರೀಡಾ ದಿನ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಮುಖ್ಯ: ಸಂತೋಷ ಬಂಡೆ ಇಂಡಿ: ವ್ಯಕ್ತಿಯ ದೈಹಿಕ, ಮಾನಸಿಕ ಯೋಗಕ್ಷೇಮ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯು ಮುಖ್ಯವಾಗಿದ್ದು,  ಇದು ಎಲ್ಲರಲ್ಲಿ ಏಕತೆಯ ಭಾವನೆಯನ್ನು ಮೂಡಿಸಿ, ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಬೆಳೆಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.      ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮೇಜರ್ ಧ್ಯಾನಚಂದ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ "ರಾಷ್ಟ್ರೀಯ ಕ್ರೀಡಾ ದಿನ"ವನ್ನು ಉದ್ಘಾಟಿಸಿ ಅವರು ಮಾತನಾಡಿದರು.        ಕ್ರೀಡೆಯು ವ್ಯಕ್ತಿಯ ವ್ಯಕ್ತಿತ್ವವನ್ನು ಸುಧಾರಿಸಿ, ಅವರಲ್ಲಿ  ಶಿಸ್ತು, ಕ್ರೀಡಾ ಮನೋಭಾವ, ತಂಡದ ಕೆಲಸ ಮತ್ತು ಸ್ಪರ್ಧಾತ್ಮಕತೆಯ ಮೌಲ್ಯಗಳನ್ನು ಕಲಿಸುತ್ತದೆ. ಅದು ವಿವಿಧ ಜನರನ್ನು ಒಟ್ಟುಗೂಡಿಸಿ, ಏಕತೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.       ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಕ್ರೀಡೆಯಿಂದ ಸಾಮಾಜಿಕ ಕೌಶಲ್ಯ ಅಭಿವೃದ್ಧಿ ಹೊಂದಿ, ಅದು ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತದೆ.ಕ್ರೀಡೆಯು ತಾಳ್ಮೆ, ಶಿಸ್ತು, ಪ್ರಾಮಾಣಿಕತೆ, ಸಮರ್ಪಣೆ ಮತ್ತು ಜೀವನದ ವೈಫಲ್ಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಹೇಳಿದರು.       ಶಿಕ್ಷಕರಾದ ...

ವಿದ್ಯಾರ್ಥಿ ಬೆಳವಣಿಗೆಯಲ್ಲಿ ಕ್ರೀಡೆಗಳು ಮುಖ್ಯ ಇಂಡಿ ಶಾಸಕರ ಸಹೋದರರಾದ ಬಸವಂತ್ರಾಯಗೌಡ ಪಾಟೀಲರು ಹೇಳಿದರು.

ಇಮೇಜ್
 ವಿದ್ಯಾರ್ಥಿ ಬೆಳವಣಿಗೆಯಲ್ಲಿ ಕ್ರೀಡೆಗಳು ಮುಖ್ಯ  ಅಗರಖೇಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ. ಇಂಡಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತೇವೆ ಎಂದು ಇಂಡಿ ವಿಧಾನಸಭೆ ಮತಕ್ಷೇತ್ರದ ಶಾಸಕರ ಸಹೋದರರಾದ ಬಸವಂತ್ರಾಯಗೌಡ ಪಾಟೀಲರು ಹೇಳಿದರು.      ‌.            ಅವರು ಜಿಲ್ಲಾ ಪಂಚಾಯಿತಿ, ವಿಜಯಪುರ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಇಂಡಿ ಹಾಗೂ ಅಗರಖೇಡ ಕ್ಲಸ್ಟರ್ ಇವರ ಅದೀನದಲ್ಲಿ ಪಡನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಗರಖೇಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.                      ಕ್ರೀಡೆಯಲ್ಲಿ ದೈಹಿಕವಾಗಿ ಗಟ್ಟಿಯಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಕ್ರೀಡಾ ಚಟುವಟಿಕೆಗಳನ್ನು ಕೊಡಗುತ್ತಾ, ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಅದಕ್ಕಾಗಿ ಮಕ್ಕಳು ಓದಿನ ಜೊತೆಗೆ ಪ್ರತಿದಿನ ಶಾಲೆಯಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯವಂತರಾಗಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.                      ಶಾಲೆಯ ಎಸ ಡಿ ಎಂ ಸಿ ಅಧ್ಯಕ್ಷ ಭೀಮಶಂ...

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಬಾರದೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ವತಿಯಿಂದ ಸಿಎಂಗೆ ಮನವಿ

ಇಮೇಜ್
 ವಿಜಯಪುರ : ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಬಾರದೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ರಾಜ್ಯ ಘಟಕದವತಿಯಿಂದ  ಜಿಲ್ಲಾಧಿಕಾರಿ ಆನಂದ ಕೆ. ಅವರ ಮೂಲಕ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ಸಂರ್ದಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಪ್ರಸ್ತುತ ನಡೆದಿರುವ ಮುಂಗಾರು ಅಧಿವೇಶನದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಇರಬೇಕೆಂಬ ಉದ್ದೇಶದಿಂದ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸಿದ್ದು ಅದರಂತೆ ಈಗ ನಡೆದಿರುವ ಅಧಿವೇಶನದಲ್ಲಿ ೪ ಜಿಲ್ಲೆಗಳಾದ ಕೊಪ್ಪಳ, ಬಾಗಲಕೋಟ. ವಿಜಯಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಮುಂದಾಗಿದೆ. ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸಂಪೂರ್ಣ ಸರ್ಕಾರದ ಸ್ವಾಮ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ವಿಜಯಪುರ ಹಾಗೂ ತುಮಕೂರು ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ನಡೆಸಲು ಸರ್ಕಾರ ಮುಂದಾಗಿದೆ. ಈ ನಿರ್ಣಯಕ್ಕೆ ಅಖಂಡ ಕರ್ನಾಟಕ ರೈತ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿ...

ನೂತನವಾಗಿ ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ ಆಯ್ಕೆ.

ಇಮೇಜ್
 ಇಂಡಿ :- ಇಂಡಿ ವಿಧಾನ ಸಭಾ ಕ್ಷೇತ್ರದ ಇಂಡಿ ಮತ್ತು ಬಳ್ಳೋಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಉಮುಖ್ಯ ಮಂತ್ರಿ ಹಾಗೂ ಅಧ್ಯಕ್ಷರು ಕರ್ನಾಟಕ ಪ್ರದೇಶ ಸಮಿತಿ ಬೆಂಗಳೂರು ಡಿ.ಕೆ ಶಿವುಕುಮಾರ ಇವರ ಆದೇಶದ ಮೇರೆಗೆ ಇಂಡಿ ಬ್ಲಾಕ್ ನೂತನ ಅಧ್ಯಕ್ಷರಾಗಿ ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೇಪ್ಪ ಚನ್ನಗೊಂಡ ಇವರ ಆಯ್ಕೆಮಾಡಲಾಗಿದೆ. ಅದರಂತೆ ಇಂಡಿ ವಿಧಾನ ಸಭಾ ಕ್ಷೇತ್ರದ ಬಳ್ಳೋಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಇಂಡಿ ತಾಲೂಕಿನ ಬಸನಾಳ ಗ್ರಾಮದ ಭೀಮಾಶಂಕರ.ಸಿ ಸಾಹುಕಾರ ಇವರನ್ನು ಮತ್ತು ಇಂಡಿ ನಗರ ಘಟಕದ ಅಧ್ಯಕ್ಷರಾಗಿ ಶ್ರೀಕಾಂತ ಕೂಡಿಗನೂರ ಇವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಆದೇಶವನ್ನು ರಾಜ್ಯಾಧ್ಯಕ್ಷರಾದ .ಡಿ.ಕೆ ಶಿವುಕುಮಾರ ಆದೇಶದ ಮೇರೆಗೆ ಮಾನ್ಯ ಶಾಸಕರಾದ ಯಶವಂತರಾಯಗೌಡ ಪಾಟೀಲ ಇವರು ಇಂದು ಪ್ರವಾಸಿ ಮಂದಿರದಲ್ಲಿ ಆದೇಶ ಪತ್ರ ನೀಡಿದರು. ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ ಮೋಮಿನ್ ಹಾಗೂ ಬಳ್ಳೋಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಲನಗೌಡ ಬಿರಾದಾರ ಇವರ ಸಮ್ಮುಖದಲ್ಲಿ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನೇಮಕ ಮಾಡಿದ ನಂತರ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ ದೀನ ದುರ್ಬಲರ ಹಿಂದುಳಿದವರ ಪಕ್ಷವಾಗಿದ್ದು ಈ ಹಿಂದೆ ನಿಕಟಪೂರ್ವ ಅಧ್ಯಕ್ಷರುಗಳಾದ ಇಂಡಿ ಬ್ಲಾಕ್ ಅಧ್ಯಕ್ಷ ಜಾವೀದ ಮೋಮಿನ್ ಹಾಗೂ ಬಳ್ಳೋಳ್ಳಿ ಬ್ಲಾಕ ಅಧ್ಯಕ್ಷ ಕಲ್ಲನಗೌಡ ಬಿರಾದಾರ ಪಕ್ಷ ಸಂ...

ಶೀತಲ್ ಆಪಟೆ ನಿಧನ

ಇಮೇಜ್
 ಶೀತಲ್ ಆಪಟೆ ನಿಧನ  ವಿಜಯಪುರ ನಗರದ ಮೀನಾಕ್ಷಿ ಚೌಕ್ ನಿವಾಸಿ ಶೀತಲ್ ದೀಪಕ್  ಆಪಟೆ ( 68) ಶುಕ್ರವಾರದಂದು ಹೃದಯಾಘಾತದಿಂದ ನಿಧಾನರಾದರು.  ಮೃತರಿಗೆ ಪುತ್ರ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ರಾಹುಲ್ ಅಪಟೆ ಹಾಗೂ ಓರ್ವ ಪುತ್ರಿ, ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.  ಇವರ ಅಗಲಿಕೆಗೆ ನಗರದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಜನಪದ ಕಲೆ ಗ್ರಾಮೀಣ ಸಂಸ್ಕೃತಿ, ಪರಂಪರೆಯ ಪ್ರತೀಕ- ಅಭಿನವ ಮುರುಗೇಂದ್ರ ಶ್ರೀಗಳು

ಇಮೇಜ್
 ಜನಪದ ಕಲೆ ಗ್ರಾಮೀಣ ಸಂಸ್ಕೃತಿ, ಪರಂಪರೆಯ ಪ್ರತೀಕ-  ಅಭಿನವ ಮುರುಗೇಂದ್ರ ಶ್ರೀಗಳು ಇಂಡಿ: ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ ಎಂದು ಕನ್ನಡ ಜಾನಪದ ಪರಿಷತ್ತಿನ ತಾಲೂಕ ಗೌರವಾಧ್ಯಕ್ಷರಾದ ಶ್ರೀ ಷ ಬ್ರ ಅಭಿನವ ಮುರುಗೇಂದ್ರ ಶಿವಾಚಾರ್ಯರು ಹೇಳಿದರು.        ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ಇಂಡಿ ಘಟಕದ ವತಿಯಿಂದ ಹಮ್ಮಿಕೊಂಡ "ವಿಶ್ವ ಜಾನಪದ ದಿನಾಚರಣೆ"ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.         ಜನಪದ ಕಲೆಗಳು ಗ್ರಾಮೀಣ ಜನರ ಜೀವನ ವಿಧಾನ, ನಂಬಿಕೆ, ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಅವು ಮನರಂಜನೆ ನೀಡುವ ಜತೆಗೆ ಸಾಮಾಜಿಕ ಬಾಂಧವ್ಯವನ್ನು ವೃದ್ಧಿಗೊಳಿಸಿ, ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಪರಂಪರೆಯನ್ನು ಕೊಂಡೊಯ್ಯುತ್ತವೆ ಎಂದು ಹೇಳಿದರು.           ಉಪನ್ಯಾಸ ನೀಡಿ ಮಾತನಾಡಿದ ಶಿಕ್ಷಕ ಸಂತೋಷ ಬಂಡೆ, ನಮ್ಮ ಸನಾತನ ಜನಪದ ಕಲೆಯು ಗ್ರಾಮೀಣ ಸಂಸ್ಕೃತಿ, ಪರಂಪರೆಯ ಪ್ರತೀಕ. ಗ್ರಾಮೀಣ ಜನರ ದೈನಂದಿನ ಬದುಕಿನಲ್ಲಿ ಜನಪದ ಕಲೆ ಹಾಸುಹೊಕ್ಕಾಗಿದೆ. ಸಾಹಿತ್ಯ ಮತ್ತು ಕಲೆಗಳ ಮೂಲ ಬೇರುಗಳು ಜಾನಪದದಲ್ಲಿವೆ. ಆದ್ದರಿಂದ ...

ರಾಜಸ್ಥಾನ ಮೂಲದ ಯುವಕನ ನಿಧನ – ಇಂಡಿ ಜನರಿಂದ ಸಹಾನುಭೂತಿ

ಇಮೇಜ್
 ರಾಜಸ್ಥಾನ ಮೂಲದ ಯುವಕನ ನಿಧನ – ಇಂಡಿ ಜನರಿಂದ ಸಹಾನುಭೂತಿ ರಾಜಸ್ಥಾನ ರಾಜ್ಯದ  ಪಾಳಿ ಜಿಲ್ಲೆಯ ಮೂಲದ ತೇಜ್‌ಪಾಲ್ ಜಗದೀಶ್ ಕುಮಾರ್ (14) ವರ್ಷದ ಯುವಕ ಇಂಡಿ ಪಟ್ಟಣ ಲಚ್ಯಾಣ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ  ತಾಯಿಯೊಂದಿಗೆ ವಾಸವಿದ್ದು ಕೆಳದ 6 ತಿಂಗಳಂದ  ಇಲ್ಲಿಯೇ ಕೆಲಸ  ಮಾಡುತ್ತಿದ್ದನು.  ಮೃತರ  ಯುವಕನ ತಾಯಿ ಮನೆ ಮನೆಗೆ ತೆರಳಿ ಬಟ್ಟ, ಪಾತ್ರೆ ತೊಳೆಯುವ ಮೂಲಕ ಜೀವನ ಸಾಗಿಸುತ್ತಿದ್ದರು.   ಆಕಸ್ಮಿಕವಾಗಿ ಕಾಮಣಿ ಕಾಯಿಲೆಯಿಂದ ಬೆಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯಲ್ಲಿಯೂ ಚೇತರಿಸಿಕೊಳ್ಳದೆ ದುರ್ಮರಣ ಹೊಂದಿದನು. ಮೃತ ಯುವಕನಿಗೆ ತಾಯಿ, ಒಬ್ಬ ಸಹೋದರ ಹಾಗೂ ಒಬ್ಬ ಸಹೋದರಿ ಇದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ಸಾಗಿಸಲು ಸುಮಾರು 70–80 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಈ ದುಃಖದ ಸಂದರ್ಭದಲ್ಲಿ ಇಂಡಿ  ಪೊಲೀಸ್ ಇಲಾಖೆ, ಮಹಿಳೆಯರು ಹಾಗೂ ಇಂಡಿ ನಗರದಲ್ಲಿರುವ ರಾಜಸ್ಥಾನ ಮೂಲದ ವ್ಯಾಪಾರಸ್ಥರು ಹಾಗೂ ಪಟ್ಟಣದ ಸಾರ್ವಜನಿಕರು,  ಯುವಕರು  ಕೈ ಜೋಡಿಸಿ ಅಗತ್ಯ ಹಣ ಸಂಗ್ರಹಿಸಿ, ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲು ನೆರವಾದರು.

ಡಿ ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ- ಸಂತೋಷ ಬಂಡೆ

ಇಮೇಜ್
 ಡಿ ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ- ಸಂತೋಷ ಬಂಡೆ ಇಂಡಿ: ಸಾಮಾಜಿಕ ನ್ಯಾಯದ ಹರಿಕಾರರಾದ ಡಿ.ದೇವರಾಜ ಅರಸು ಅವರ ದೂರದೃಷ್ಟಿ ಮತ್ತು ಬದ್ಧತೆ ರಾಜ್ಯದ ಅಭಿವೃದ್ಧಿಗೆ ದಾರಿದೀಪವಾಗಿದೆ. ಅವರ ಕಾರ್ಯ ಮತ್ತು ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.          ಬುಧವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.          ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆ ತಂದ ಅರಸು ಅವರು ದುರ್ಬಲ ವರ್ಗದವರಲ್ಲಿ ಸ್ವಾಭಿಮಾನದ ಕಲ್ಪನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಯುಗಪುರುಷರಾಗಿದ್ದಾರೆ ಎಂದು ಹೇಳಿದರು.          ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಬಡವರ ಬದುಕಿನಲ್ಲಿ ಹೊಸ ಭರವಸೆ ತಂದುಕೊಟ್ಟ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಕರ್ನಾಟಕದಲ್ಲಿ ಅನೇಕ ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಯಶಸ್ಸು ಸಾಧಿಸಿದ  ಮಹಾಮಾನವತಾವಾದಿಯಾಗಿದ್ದಾರೆ ಎಂದು ಹೇಳಿದರು.         ಇದೇ ಸಂದರ್ಭದಲ್ಲಿ ಇಂಗ್ಲೀಷ್ ಕೈಬರಹ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ನೋಟ್ ಬುಕ್-ಪೆನ...

ಭೀರಪ್ಪ ಹೊಸೂರಗೆ ರಾಜ್ಯಮಾಧ್ಯಮ ಸೇವಾರತ್ನ ಪ್ರಶಸ್ತಿ ಪ್ರಧಾನ

ಇಮೇಜ್
 ಭೀರಪ್ಪ ಹೊಸೂರಗೆ ರಾಜ್ಯಮಾಧ್ಯಮ ಸೇವಾರತ್ನ ಪ್ರಶಸ್ತಿ ಪ್ರಧಾನ  ಇಂಡಿ: ರವಿವಾರ  ಆಗಸ್ಟ್ 17 ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಫಿಲಂ ಚೇಂಬರ್ (ರಿ)ವತಿಯಿಂದ ಹಮ್ಮಿಕೊಂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪ್ರಶಸ್ತಿ,ಸನ್ಮಾನ ಸಮಾರಂಭದಲ್ಲಿ ಇಂಡಿ ತಾಲೂಕು ರವಿವಾಣಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಪತ್ರಕರ್ತ ಭೀರಪ್ಪ ಹೊಸೂರ ಅವರಿಗೆ ರಾಜ್ಯ ಮಾಧ್ಯಮ ಸೇವಾರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀವೇದಮೂರ್ತಿ ಡಾ.ಕಾಡಯ್ಯಾ ಶಿವಮೂರ್ತಿ ಹಿರೇಮಠ (ಸ್ವಾಮಿಗಳು) ಶ್ರೀ ದುರ್ಗಾಮಾತಾ ಮತ್ತು ಶ್ರೀ ಕಾಳಿಮಾತಾ ಆರಾಧಕರು,ಕೆ.ಎನ್. ರಮೇಶ್ DYSP, ಪೊಲೀಸ್ ಇಲಾಖೆ ತುಮಕೂರು ಜಿಲ್ಲೆ, ಟಿ.ಎಸ್. ನಾಗಭರಣ ಖ್ಯಾತ ನಟರು,ಲಯಕೋಕಿಲ ಖ್ಯಾತ ಹಾಸ್ಯನಟರು ಹಾಗೂ ಸಂಗೀತ ನಿರ್ದೇಶಕರು,ಭೂಮಿಕಾ ಎ.ಕ. ಚಲನಚಿತ್ರ ನಟಿ,ಸವಿ ಪ್ರಕಾಶ್ ಅಂತಾರಾಷ್ಟ್ರೀಯ ನಿರೂಪಕರು ದೂರದರ್ಶನ ಚಂದನ ವಾಹಿನಿಯ ನಿರೂಪಕಿ,ಎಂ ಎಸ್ ರವೀಂದ್ರ ಅಧ್ಯಕ್ಷರು, ಡಾ,ಎನ್ ಎನ್ ಪ್ರಹ್ಲಾದ್ ಉಪಾಧ್ಯಕ್ಷರು, ನರಸಿಂಹಯ್ಯ ಎನ್, ಆರ್ಯನ್ ರೆಡ್ಡಪ್ಪ ಎಂ ಆರ್, ಡಾ, ವಿಜಯ ಎಸ್ ಅಗಡಿ, ಅಲ್ಲೂರಿ ಸಿತಾರಾಮರಾಜು  ಬಿ ಆರ್,ಪ್ರೊ ಕೆ ವಿ  ಐಹಾನ್,ಡಾ, ಮಹಾದೇವಿ, ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ವಿತರಿಸಿದರು.

ಪಡಿತರ ಅಕ್ಕಿ ಅಕ್ರಮ ಸಾಗಾಟ ಬಯಲು – ವಾಹನ ಬಿಟ್ಟು ಪರಾರಿಯಾದ ಆರೋಪಿ

ಇಮೇಜ್
 ಇಂಡಿ: ಪಡಿತರ ಅಕ್ಕಿ ಅಕ್ರಮ ಸಾಗಾಟ ಬಯಲು – ವಾಹನ ಬಿಟ್ಟು ಪರಾರಿಯಾದ ಆರೋಪಿ ಇಂಡಿ ಪಟ್ಟಣದ ಕುಂಬಾರ ಓಣಿಯ ರಸ್ತೆಯಲ್ಲಿ ಪಡಿತರ ಅಕ್ಕಿಯ ಅಕ್ರಮ ಸಾಗಾಟ ಬಯಲಾಗಿರುವ ಘಟನೆ ನಿನ್ನೆ ಬೆಳಕಿಗೆ ಬಂದಿದೆ. ಆಹಾರ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ದಾಳಿಯ ವೇಳೆ, ಆರೋಪಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳದಲ್ಲೇ ಬಿಟ್ಟಿರುವ ಗೂಡ್ಸ್ ವಾಹನದಿಂದ 2,590 ಕೆಜಿ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ ರೂ. 75,110 ಆಗಿದ್ದು, ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಗೂಡ್ಸ್ ವಾಹನ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯಿಂದ ಪಟ್ಟಣದಲ್ಲಿ ಅಕ್ರಮ ಪಡಿತರ ಸಾಗಾಟದ ಬಗ್ಗೆ ಚರ್ಚೆ ಶುರುವಾಗಿದೆ.

ಶಮ್ಸ್ ಶಾಲೆಯಲ್ಲಿ ಮೊಹಮ್ಮದಿಯಾ ನಾತ್ ಕಮೀಟಿ ವತಿಯಿಂದ ತಾಲೂಕಾ ಮಟ್ಟದ ಇಸ್ಲಾಮಿಕ್ ಕ್ವಿಜ್ ಮತ್ತು ನಾತ್ ಸ್ಪರ್ಧೆ ಕಾರ್ಯಕ್ರಮ

ಇಮೇಜ್
 ಇಂಡಿ:  ನಗರದಲ್ಲಿರುವ ಶಮ್ಸ್ ಶಾಲೆಯಲ್ಲಿ ವಿಜಯಪುರದ ಮೊಹಮ್ಮದಿಯಾ ನಾತ್ ಸಮಿತಿಯ ವತಿಯಿಂದ ತಾಲೂಕಾ ಮಟ್ಟದ ಇಸ್ಲಾಮಿಕ್ ಕ್ವಿಜ್ ಮತ್ತು ನಾತ್ ಸ್ಪರ್ಧೆ ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವೀದ್ ಮೊಮಿನ್ ಮಾತನಾಡಿ, “ಇಂದು ನಮ್ಮ ಸಮುದಾಯಕ್ಕೆ ಇಂತಹ ಸ್ಪರ್ಧೆಗಳನ್ನು ನಡೆಸುವುದು ಬಹಳ ಅಗತ್ಯವಾಗಿದೆ. ಮೊಹಮ್ಮದಿಯಾ ನಾತ್ ಸಮಿತಿ ಕಳೆದ 43 ವರ್ಷಗಳಿಂದ ನಾತ್ ಸ್ಪರ್ಧೆ ಹಾಗೂ ಕ್ವಿಜ್‌ಗಳನ್ನು ನಡೆಸಿ ಬರುತ್ತಿದೆ. ಇಂಡಿಯ ಪರವಾಗಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ. ನೀವು ಇದೇ ರೀತಿ ಉತ್ತಮ ಕೆಲಸಗಳನ್ನು ಮುಂದುವರೆಸಬೇಕು. ನಾವು ಎಲ್ಲಾ  ರೀತಿಯ ಸಹಾಯ ಬೇಕಾದರೂ ನಿಮ್ಮೊಂದಿಗೆ ನಿಂತಿದ್ದೇವೆ” ಎಂದು ಹೇಳಿದರು. ವಿಜಯಪುರ ಸಮಿತಿಯ  ಅಬ್ದುಲ್ ರಜಾಕ್ ಕೋಲಾರ  ಮಾತನಾಡಿ, “43 ವರ್ಷಗಳ ಹಿಂದೆ ನಾವು ಮಕ್ಕಳಲ್ಲಿ ಹಜ್ರತ್ ಮುಹಮ್ಮದ್ (ಸ.ಅ.ವ) ಅವರ ಪ್ರೀತಿ ಬೆಳೆಸಲು ನಾತ್ ಸ್ಪರ್ಧೆ ಆರಂಭಿಸಿದ್ದೇವೆ. ಕಳೆದ 12 ವರ್ಷಗಳಿಂದ ನಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಗಮನದಲ್ಲಿಟ್ಟುಕೊಂಡು ಇಸ್ಲಾಮಿಕ್ ಕ್ವಿಜ್ ಸ್ಪರ್ಧೆ ಕೂಡ ಪ್ರಾರಂಭಿಸಿದ್ದೇವೆ. ಇಂದು ಸ್ಪರ್ಧೆ ಮಾಡುತಿರುವ ಎಲ್ಲಾ ಮಕ್ಕಳು ಕೇವಲ ಒಂದು ತಿಂಗಳ ಅವದಿಯಲ್ಲಿ  1400ಕು  ಹೆಚ್ಚು ಪ್ರಶ್ನೆಗಳನ್ನು ಒದಿಬಂದು ಇಲ್ಲಿ ಸ್ಪರ್ಧೆ ಮಾಡುತ್ತಿದ್ದ.   ಇಂದು ನಮ್ಮ ಕಮೀಟಿಯ ಎಲ್ಲಾ...

ನಾದ ಪಂಚಾಯತದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ.

ಇಮೇಜ್
 ನಾದ ಪಂಚಾಯತದಲ್ಲಿ 79ನೇ ಸ್ವಾತಂತ್ರೋತ್ಸವ ದಿನಾಚರಣೆ.    ಇಂಡಿ-  ತಾಲೂಕಿನ  ನಾದ ಕೆಡಿ ಗ್ರಾಮಪಂಚಾಯತದಲ್ಲಿ ಇಂದು 79ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.ಡಾ.ಬಿ.ಆರ್.ಅಂಬೇಡ್ಕರ, ಮಹಾತ್ಮ ಗಾಂಧೀಜಿ,ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಪೈಗಂಬರ್ ದೇಸಾಯಿ,ಶರಣಪ್ಪ ತಾವರಖೇಡ,ಹಾಗೂ ಮುತ್ತಪ್ಪ ಸಿನ್ನೂರ ಇವರಿಂದ ಪೂಜೆ ನೇರವೇರಿಸ್ಪಟ್ಟಿತು.ನಂತರ ಗ್ರಾ.ಪಂ.ಅಧ್ಯಕ್ಷರಾದ ಶ್ರೀ ಸಿಧರಾಯಗೌಡ ಐರೋಡಗಿ ಇವರು ಧ್ವಜಾರೋಹಣ ಮಾಡಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಲೋಣಿ ಇವರು ರಾಷ್ಟ್ರದ ಸ್ವಚ್ಚತಾ ಅಭಿಯಾನ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ನಂತರ ಸಭೆಯನ್ನುದ್ದೇಶಿಸಿ ಸ್ವಾತಂತ್ರ್ಯ ಎಂದರೆ ಕೇವಲ ಹೊರಗಿನ ಆಳ್ವಿಕೆಯಿಂದ ಮುಕ್ತಿಯಾಗುವುದಿಲ್ಲ.ಅದು ನಮ್ಮ ಆಲೋಚನೆ,ನಂಬಿಕೆ,ಮಾತು ಮತ್ತು ಕ್ರೀಯೆಯಲ್ಲಿ ಸ್ವತಂತ್ರರಾಗಿರುವುದನ್ನು ಸೂಚಿಸುತ್ತದೆ ಎಂದು ಹೇಳಿದರು.ಗ್ರಾ.ಪಂ.ಅಧ್ಯಕ್ಷರಾದ ಶ್ರೀ ಸಿಧರಾಯಗೌಡ ಐರೋಡಗಿಯವರುಮಾತನಾಡಿ-ಪ್ರತಿವಷ೯ಅಗಸ್ಟ್15ರಂದು ನಾವು ಈ ದಿನವನ್ನು ಆಚರಿಸುತ್ತೇವೆ .1947ಅಗಸ್ಟ್ 15ರಂದು ದೀಘ೯ಕಾಲದ ಹೋರಾಟ ಮತ್ತು ಅನೇಕ ಸ್ವಾತಂತ್ರ್ಯ ಸೈನಿಕರ ತ್ಯಾಗದಿಂದ ಭಾರತವು ಬ್ರೀಟಿಷರ ಆಳ್ವಿಕೆಯಿಂದ ಮುಕ್ತವಾಯಿತು.ಆ ದಿನದಿಂದ ಪ್ರತಿ ಭಾರತೀಯನು ತಲೆಯನ್...

ಒಂದು ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಆ ಭಾಗದಲ್ಲಿ ಶೈಕ್ಷಣಿಕವಾಗಿ ಬೆಳವಣಿಗೆಯಾದಾಗ ಮಾತ್ರ ಎಲ್ಲ ವಿಧದಲ್ಲು ಅಭಿವೃದ್ದಿ ಹೊಂದಲು ಸಾಧ್ಯ.

ಇಮೇಜ್
 ಇಂಡಿ: ಒಂದು ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಆ ಭಾಗದಲ್ಲಿ ಶೈಕ್ಷಣಿಕವಾಗಿ ಬೆಳವಣಿಗೆಯಾದಾಗ ಮಾತ್ರ ಎಲ್ಲ ವಿಧದಲ್ಲು ಅಭಿವೃದ್ದಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೈಕ್ಷಣಿಕ ನೀತಿ ಕೂಡಾ ಬವದಲಾವಣೆ ಮಾಡುವುದು ಅತಿ ಅವಶ್ಯಕವಾಗಿದೆ. ನಾವು ಮುಂದಿನ ದಿನಮಾನಗಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಸೂಪರ ಪವರ್ ದೇಶವಾಗಿ ಹೊರಹೊಮ್ಮಲಿದ್ದು ಆ ದೀಸೆಯಲ್ಲಿ ಸಂಕಲ್ಪ ಮಾಡಬೇಕು ಎಂದು  ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.  ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೭೯ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಇಂದು ನಾವು ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ನಮ್ಮ ಪೂರ್ವಜರನ್ನು ಸ್ಮರಿಸಿ ಗೌರವದಿಂದ ಕಾಣುವ ದಿನವಾಗಿದ್ದು  ಭವ್ಯ ಭಾರತ ದೇಶ ಸಂಸ್ಕೃತಿ ಆಚಾರ ವಿಚಾರದಲ್ಲಿ ಶ್ರೀಮಂತವಾಗಿದೆ. ಸ್ವಾತಂತ್ರö್ಯಕ್ಕಾಗಿ ಅನೇಕ ಜನ ತ್ಯಾಗ ಬಲಿದಾನ ಮಾಡಿದ್ದರ ಫಲವಾಗಿ ಇಂದು ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತ ದೇಶವನ್ನು ಸ್ವತಂತ್ರ ರಾಷ್ಟçವಾಗಿ ಅಭಿವೃದ್ದಿಯತ್ತ ಸಾಗುತ್ತಿದೆ. ಸರ್ವ ವಿಧದಲ್ಲು ಸರ್ವ ಶ್ರೇಷ್ಠ ಭಾರತ ದೇಶÀವಾಗಬೇಕು ಎಂಬ ಅಂಬೇಡಕರ ಮತ್ತು ಗಾಂಧೀಜಿಯವರ ಕನಸಾಗಿದ್ದು ಅದನ್ನು ನನಸಾಗಿಸಲು ಎಲ್ಲರ ಪ್ರಯತ್ನ ಅಗತ್ಯವಾಗಿದೆ ಎಂದರು.  ಕಂದಾಯ ಉಪವಿಬಾಗಾಧಿಕಾರಿ ಅ...

“ಕರ್ನಾಟಕ ಸೇವಾ ರತ್ನ” ಬೆಳ್ಳಿ ಪದಕ ಪ್ರಶಸ್ತಿಗೆ ದಾವಲಸಾಬ ನಂದರಗಿ ಆಯ್ಕೆ.

ಇಮೇಜ್
 ಇಂಡಿ: ಕರ್ನಾಟಕ ಯುವರಕ್ಷಣಾ ವೇದಿಕೆ ವತಿಯಿಂದ  ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ “ಕರ್ನಾಟಕ ಸೇವಾ ರತ್ನ” ಬೆಳ್ಳಿ ಪದಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ, ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಪ್ರಭಾವಶೀಲವಾದ ಸೇವೆ ಸಲ್ಲಿಸಿರುವ ಇಂಡಿಯ ದಾವಲಸಾಬ ನಂದರಗಿ ಅವರನ್ನು 2025ರ ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ದಾವಲಸಾಬ ನಂದರಗಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜಮುಖಿ ಕಾರ್ಯಕ್ರಮಗಳು, ಜನಜಾಗೃತಿ ಅಭಿಯಾನಗಳು ಸೇರದಂತೆ ಅನೇಕ ಮಹತ್ವದ ಕಾರ್ಯಗಳನ್ನು ನಿರ್ವಹಿಸಿದ್ದು, ಅವರ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ. ದಿನಾಂಕ 17-08-2025 ರಂದು ಮೈಸೂರು ನಗರದಲ್ಲಿನ ಅಮೃತ ಮಹೋತ್ಸವದ ಜೆ.ಕೆ. ಗ್ರೌಂಡ್ ಹಾಲ್‌ನಲ್ಲಿ ಭವ್ಯ ಸಾಂಸ್ಕೃತಿಕ ಉತ್ಸವ ಹಾಗೂ ರಾಜ್ಯಮಟ್ಟದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಅನೇಕ ಗಣ್ಯರು, ಸಾಹಿತಿಗಳು, ಕಲಾವಿದರು ಹಾಗೂ ಸಮಾಜಸೇವಕರು ಈ ಸಂದರ್ಭದಲ್ಲಿ ಹಾಜರಾಗಲಿದ್ದಾರೆ.

ಒಂದು ತಿಂಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ ವೃತ್ತ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲ ಎಂದರೆ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮುತ್ತಿಗೆ ಹಾಕಲಾಗುವುದು.

ಇಮೇಜ್
 ಇಂಡಿ. ಒಂದು ತಿಂಗಳೊಳಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ವತ್ತದ ಕಾಮಗಾರಿ ಹಾಗೂ ಬುದ್ಧ ವಿಹಾರ ಕಾಮಗಾರಿ ಪ್ರಾರಂಭಿಸಬೇಕು ಎಂದು ನಾಗೇಶ ತಳಕೇರಿ ಆಗ್ರಹಿಸಿದ್ದಾರೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ವೃತ್ತ ಹಾಗೂ ಬುದ್ಧ ವಿಹಾರ ಕಾಮಗಾರಿಯನ್ನು ಒಂದು ತಿಂಗಳ ಒಳಗೆ ಪ್ರಾರಂಭಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್.ಪಿ.ಐ.) ಪಕ್ಷದ ಅಧ್ಯಕ್ಷ ನಾಗೇಶ ತಳಕೇರಿ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ  ಶಾಸಕರು ಹಾಗೂ ಅಧಿಕಾರಿಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಅಮರ್ ಇಂಟರ್ನ್ಯಾಷನಲ್ ಹೋಟೇಲ್‌ನಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿ ಬಾರಿಯೂ ನಮ್ಮ ದಲಿತ ಸಮಾಜಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಅಭಿವೃದ್ಧಿ ಯೋಜನೆಗಳಲ್ಲಿ ನಮ್ಮ ಹಕ್ಕಿನ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ನಮಗೆ ಕೇವಲ ಚುನಾವಣೆಯ ವೇಳೆಯಲ್ಲಿ ಮತ ಕೇಳುವುದಕ್ಕಾಗಿ ಮಾತ್ರ ನೆನಪಿಸುತ್ತದೆ, ಆದರೆ ನಮ್ಮ ಬೇಡಿಕೆಗಳನ್ನು ನಿರಂತರವಾಗಿ ಕಡೆಗಣಿಸಿದೆ,” ಎಂದು ಆರೋಪಿಸಿದರು. ಸಮಾಜದ ಹಿತಕ್ಕಾಗಿ ಹೋರಾಟ, “ಅಂಬೇಡ್ಕರ್ ವೃತ್ತ ಹಾಗೂ ಬುದ್ಧ ವಿಹಾರ ನಿರ್ಮಾಣ ನಮ್ಮ ಸಮುದಾಯದ ಆತ್ಮಗೌರವದ ಪ್ರಶ್ನೆ. ನಾವು ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಸಂಬಂಧಿಸಿದವರನ್ನು ಕೇಳಿದರು ಉಡಾಪೆಯ ಉತ್ತರ ನೀಡುತ್ತಾ ಬಂದಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಕೆಲಸ ಪ್ರಾರಂಭಿಸಬೇಕು,” ಎಂದು ಒತ...

ಗ್ರಂಥಾಲಯ ಸುಸಂಸ್ಕೃತ ಸಮಾಜದ ಹೆಗ್ಗುರುತು- ಸಂತೋಷ ಬಂಡೆ

ಇಮೇಜ್
 ಗ್ರಂಥಾಲಯ ಸುಸಂಸ್ಕೃತ ಸಮಾಜದ ಹೆಗ್ಗುರುತು- ಸಂತೋಷ ಬಂಡೆ ಇಂಡಿ: ಜ್ಞಾನಾರ್ಜನೆಯ ಸ್ಥಳವಾದ ಗ್ರಂಥಾಲಯವು ಜ್ಞಾನ, ಮಾಹಿತಿ, ಸಂಸ್ಕೃತಿಯ ಭಂಡಾರವಾಗಿದೆ. ಸಮಾಜದ ಪ್ರಗತಿಗೆ ಗ್ರಂಥಾಲಯದ ಅವಶ್ಯವಿದ್ದು, ಅದನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.        ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಅರಿವು ಕೇಂದ್ರದಲ್ಲಿ ಡಾ.ಎಸ್ ಆರ್ ರಂಗನಾಥನ್ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ 'ಗ್ರಂಥಪಾಲಕರ ದಿನ'ವನ್ನು ಉದ್ಧೇಶಿಸಿ ಅವರು ಮಾತನಾಡಿದರು.       ಗ್ರಂಥಾಲಯವು ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ಮನುಷ್ಯನಿಗೆ ಖಿನ್ನತೆ, ಹತಾಶೆಯಂತಹ ಸಂದರ್ಭದಲ್ಲಿ ಧನಾತ್ಮಕವಾಗಿ ಯೋಚಿಸುವ ಶಕ್ತಿಯನ್ನು ನೀಡಬಲ್ಲ ಪುಸ್ತಕಗಳನ್ನು ಒದಗಿಸುತ್ತದೆ. ಅದು ಸುಸಂಸ್ಕೃತ ಸಮಾಜದ ಹೆಗ್ಗುರುತಾಗಿದೆ ಎಂದು ಹೇಳಿದರು.         ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಗ್ರಂಥಾಲಯಗಳು ಶಿಕ್ಷಣ, ಸಂಶೋಧನೆ, ವೈಯಕ್ತಿಕ ಅಭಿವೃದ್ಧಿ ಮತ್ತು ಸಮಾಜದ ಪ್ರಗತಿಗೆ ಅವಶ್ಯಕವಾಗಿದ್ದು, ಅವು ಜ್ಞಾನದ ದೀಪಗಳಾಗಿವೆ. ಭವಿಷ್ಯದ ಪೀಳಿಗೆಗೆ ಜ್ಞಾನದ ಹಸಿವನ್ನು ನೀಗಿಸಿ,ತಿಳುವಳಿಕೆಯ ಶಕ್ತಿಯನ್ನು ವಿಸ್ತರಿಸುತ್ತದೆ ಎಂದು ಹೇಳಿದರು.         ಪ್ರಾಸ್ತಾವಿಕವಾಗಿ ಗ್ರಂಥಪಾಲಕ ಸಚ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು