ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮಾ ಕಂಪನಿ ಪರಿಹಾರ ನೀಡ ಬೇಕೆಂದು ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು ಇಂಡಿ ಕೃಷಿ ಅಧಿಕಾರಿಗಳಾದ ಮಹಾಂತೇಶ ಶಟ್ಟೆನವರ ಅವರಿಗೆ ಮನವಿ

ಇಮೇಜ್
 ಇಂಡಿ. ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮಾ ಕಂಪನಿ ಪರಿಹಾರ ನೀಡ ಬೇಕೆಂದು ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು ಇಂಡಿ ಕೃಷಿ ಅಧಿಕಾರಿಗಳಾದ  ಮಹಾಂತೇಶ ಶಟ್ಟೆನವರ ಅವರಿಗೆ ಮನವಿ ಸಲ್ಲಿಸಿ ಅಗ್ರಹಿಸಿದ್ದರು.  ಈ  ಸಂದರ್ಭದಲ್ಲಿ ಕರವೇ ತಾಲೂಕಾ ಅಧ್ಯಕ್ಷರಾದ ಬಾಳು ಮುಳಜಿ,  ಮಾತನಾಡಿ  ಮುಂಗಾರು ತೊಗರಿ ಬೆಳೆ ಇಂಡಿ ತಾಲೂಕಿನಲ್ಲಿ ಶೇ 90 ರಷ್ಟು ತೊಗರಿ ಬೆಳೆ ನಷ್ಟ ಆಗಿರುತ್ತದೆ. ನಮ್ಮ ತಾಲೂಕಿನ ರೈತರು ಕಂಗಾಲ ಆಗಿದ್ದಾರೆ. ತೀವ್ರ  ಸಂಕಷ್ಟದಲ್ಲಿದ್ದಾರೆ  ಸರ್ಕಾರ ನಮ್ಮ ತಾಲೂಕಿನಲ್ಲಿ ತೊಗರಿ ಬೆಳೆ ಬಗ್ಗೆ ಸಮಗ್ರ ಸರ್ವೆ ನಡೆಸಿ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ತಾಲ್ಲೂಕು 35 ವರ್ಷಗಳಿಂದ ಬೀಕರ ಬರಗಾಲ ಆವರಿಸಿದ್ದು, ಈ ವರ್ಷ ಒಳ್ಳೆ ಮಳೆಯಾಗಿದ್ದು, ರೈತರು ತಮ್ಮ ಹೊಲಗಳಿಗೆ ಸಾಲ ಮಾಡಿ ಕೃಷಿ ಉತ್ಪನ ಬರುತದೆ ಅವಲಬಿಂತರಾಗಿದ್ದು, ಇಂತಹ ಸಮಯದಲ್ಲಿ ತೊಗರಿ ಬೆಳೆ ಕೈ ಕೊಟ್ಟಿದ್ದು, ರೈತರ ಕಂಗಾಲ ಆಗಿದ್ದಾರೆ ರೈತರು ತೊಗರಿ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಖರೀದಿಸಿ ಬೀತ್ತನೆ ಮಾಡಿದ್ದಾರೆ. ಕಳಪೆ ಗುಣಮಟ್ಟದ ಬೀಜ ವಿತರಿಸಿದರಿಂದ ತೊಗರಿ ಬೆಳೆ ಹೂವು ಉದುರಿ ಕಾಳುಕಟ್ಟಾಗಿದೆ ಸಂಪೂರ್ಣ ತೊಗರಿ ಬೀಜದಿಂದಾಗಿದ್ದು, ಹಾಗೂ ರೋಗ ಬಂದಿದ್ದು ಅದರಿಂದ ರೈತರ ಬದುಕು ಕಷ್ಟದಲ್ಲಿದೆ ನಮ್ಮ ಇಂಡಿ ತಾಲೂಕಿನಲ್ಲಿ ಸಂಪೂರ್ಣ ಎಲ್ಲಾ ಜಮೀನುಗಳಿಗ...

ಸಾಹಿತ್ಯ ಪ್ರೀಯರಿಗೆ ಖುಷಿಯ ಸುದ್ದಿ: ಇಂಡಿ ನಗರದಲ್ಲಿ ಅಝಿಮುಶ್ಶಾನ ಉರ್ದು ಮುಶಾಯರಾ.

ಇಮೇಜ್
 ಇಂಡಿ: ಎಲ್ಲ ಸಾಹಿತ್ಯ ಪ್ರೇಮಿಗಳು ಮತ್ತು ಉರ್ದು ಸಾಹಿತ್ಯಾಸಕ್ತರಿಗೆ ತಿಳಿಸಬೇಕಾದುದು ಏನೆಂದರೆ, ಇಂಡಿ ನಗರದಲ್ಲಿ ರಾಯಲ್ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಆಲ್ ಇಂಡಿಯಾ ಅಝಿಮುಶ್ಶಾನ ಮುಶಾಯರಾ (ಕವಿ ಸಮಾವೇಶ) ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ದೇಶದ ಪ್ರಖ್ಯಾತ ಮತ್ತು ಪ್ರಸಿದ್ಧ ಕವಿಗಳು ಭಾಗವಹಿಸುತಿದ್ದಾರೆ ಮತ್ತು ತಮ್ಮ ಸುಂದರ ಕಾವ್ಯಗಳ ಮೂಲಕ ಶ್ರೋತೃಗಣರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಈ ಮುಶಾಯರಾ ಉರ್ದು ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಒಂದು ಪ್ರಮುಖ ಹಂತವಾಗಿದ್ದು, ಸಾಹಿತ್ಯಾಸಕ್ತರಿಗಾಗಿ ಒಂದ ಸ್ವರ್ಣ ಅವಕಾಶವಾಗಿದೆ. ಈ ಸ್ಮರಣೀಯ ಸಮಾರಂಭದಲ್ಲಿ ಭಾಗವಹಿಸಿ, ಅದನ್ನು ಯಶಸ್ವಿ ಮಾಡಲು ನಿಮ್ಮೆಲ್ಲರಿಗೂ ವಿನಂತಿ. ದಿನಾಂಕ: ಶನಿವಾರ, 1 ಫೆಬ್ರವರಿ 2025, ಸಂಜೆ 8 ಗಂಟೆಗೆ ಸ್ಥಳ: ರಾಯಲ್ ಇಂಟರ್ ನ್ಯಾಷನಲ್ ಶಾಲೆ, ಲಚ್ಚಾನ್ ರಸ್ತೆ, ಇಂಡಿ  ಕಾವ್ಯ ಮತ್ತು ಸಾಹಿತ್ಯವನ್ನು ಪ್ರೀತಿಸುವವರಿಗಾಗಿ ಇದು ಒಂದು ಅಪೂರ್ವ ಅವಕಾಶ. ಖ್ಯಾತ ಕವಿಗಳ ಸುಂದರ ಕಾವ್ಯವನ್ನು ಆಲಿಸಿ, ಉರ್ದು ಸಾಹಿತ್ಯದ ಮಧುರ ಸುಗಂಧವನ್ನು ಅನುಭವಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಸ್ಲಂ ಪಟೇಲ್: 9686645050, ಮೊಹಮ್ಮದ್ ರಫೀಕ್ ಗುಲ್ಬರ್ಗಾ: 9945786044

ಪತ್ರಕರ್ತರಿಗೆ ಗೂಡ್ ನ್ಯೂಸ್: ಉಚಿತ್ ಬಸ್ ಪಾಸ್ ಸೌಲಭ್ಯ.

ಇಮೇಜ್
 ಬೆಂಗಳೂರು: ಗ್ರಾಮಿಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಜಿ ಆಹ್ವಾನಿಸಲಾಗಿದೆ. ಮಾಧ್ಯಮ ಮಾನ್ಯತಾ ಪತ್ರ ಹೊಂದಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್‌ ಸೌಲಭ್ಯವನ್ನು ಕರ್ನಾಟಕ ರಾಜ್ಯ ಸರ್ಕಾರ ಕಲ್ಪಿಸಿದೆ. ಈ ಮೂಲಕ ಬಜೆಟ್‌ನಲ್ಲಿ ಘೋಷಣೆ ಮಾಡಿ ಅದನ್ನು ಯಥಾವತ್ತಾಗಿ ಜಾರಿಗೆ ಕೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದಿದೆ.   ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಖಾತೆ ವಿವರ ಸೇರಿದಂತೆ ಯಾವುದೇ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು.ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್...

ರಕ್ತಹೀನತೆಯು ಗರ್ಭಿಣಿಯರು, ಚಿಕ್ಕ ಮಕ್ಕಳು, ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ: ಭಜಂತ್ರಿ

ಇಮೇಜ್
 ರಕ್ತಹೀನತೆ ತಡೆಗಟ್ಟಲು ಎಲ್ಲರ ಸಹಕಾರ ಮುಖ್ಯ-ಭಜಂತ್ರಿ ಇಂಡಿ: ರಕ್ತಹೀನತೆಯು ಗರ್ಭಿಣಿಯರು, ಚಿಕ್ಕ ಮಕ್ಕಳು, ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ತಡವಲಗ ಸಮುದಾಯ ಆರೋಗ್ಯ ಕೇಂದ್ರದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ರಾಮಗೊಂಡ ಭಜಂತ್ರಿ ಹೇಳಿದರು.          ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ 'ಅನಿಮೀಯ ಮುಕ್ತ ಅಭಿಯಾನ'ವನ್ನು ಉದ್ಧೇಶಿಸಿ ಮಾತನಾಡಿದರು.         10 ರಿಂದ 19 ವಯಸ್ಸಿನವರಲ್ಲಿ ಕಂಡುಬರುವ ರಕ್ತಹೀನತೆ ಪ್ರಮಾಣ ನಿಯಂತ್ರಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರತಿಶತ 55%ಕ್ಕಿಂತ ಹೆಚ್ಚು ಗಂಡು ಮತ್ತು ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಪ್ರತಿವಾರಕ್ಕೆ ಒಂದು ಕಬ್ಬಿಣಾಂಶದ ಮಾತ್ರೆಯನ್ನು ನೀಡಿ, ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.        ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ರಕ್ತಹೀನತೆಯು ಸಾರ್ವತ್ರಿಕ ಆರೋಗ್ಯ ಸಮಸ್ಯೆಯಾಗಿದ್ದು, ನಿತ್ಯ ಹಸಿರು ತರಕಾರಿ, ಬೇಳೆಕಾಳುಗಳಿಂದ ತಯಾರಿಸಿದ ಊಟ ಸೇವಿಸುವುದರ ಜೊತೆಗೆ ಹಣ್ಣು, ಮೊಸರು ಸೇವಿಸಿ ರಕ್ತ ಹೀನತೆಯಿಂದ ದೂರವಿರುವಂತೆ ತಿಳ...

ಇಂಡಿ: ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಜರುಗಿದ ಗಣರಾಜ್ಯೋತ್ಸವದ ಸಮಾರಂಭದಲ್ಲಿ ತಾಲೂಕಿನ ಸಾಧಕರಿಗೆ ಸನ್ಮಾನ

ಇಮೇಜ್
 ಗಣರಾಜ್ಯೋತ್ಸವ: ಸಾಧಕರಿಗೆ ಸನ್ಮಾನ ಇಂಡಿ: ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಜರುಗಿದ ಗಣರಾಜ್ಯೋತ್ಸವದ ಸಮಾರಂಭದಲ್ಲಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರ ಅನುಪಮ ಶೈಕ್ಷಣಿಕ, ಸಾಂಸ್ಕೃತಿಕ ಸೇವೆಯ ಸಾಧನೆಗಾಗಿ ಹಾಗೂ ಬಂಥನಾಳದ ಸಂಗನಬಸವ ಸ್ವಾಮೀಜಿ ಅವರ ಪ್ರೇರಣೆಯಿಂದ ಪಡನೂರ ಗ್ರಾಮದ ನಿವೃತ್ತ ಶಿಕ್ಷಕ ಸಂಗಣ್ಣ ಭೈರಜಿ ಅವರು ವಿಜಯಪುರದ ಬಿ ಎಲ್ ಡಿ ಈ ಆಸ್ಪತ್ರೆಗೆ ದೇಹದಾನ ಮಾಡಿದ್ದಕ್ಕಾಗಿ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಅವರು ಸನ್ಮಾನಿಸಿದರು.        ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ ಬಿ ಎಸ್ ಕಡಕಭಾವಿ, ಪೊಲೀಸ್ ಉಪಾಧಿಕ್ಷಕ ಜಗದೀಶ ಎಚ್ ಎಸ್, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ರಾವೂರ, ಬಸವರಾಜ ಗೊರನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಥಮ ಬಾರಿಗೆ ಮತದಾನ ಮಾಡುವ ಯುವ ಜನತೆ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು ಎಂದು ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಹೇಳಿದರು.

ಇಮೇಜ್
 ರಾಷ್ಟ್ರೀಯ ಮತದಾರರ ದಿನಾಚರಣೆ  ವಿಜಯಪುರ ಜ. 25 :- ಪ್ರಥಮ ಬಾರಿಗೆ ಮತದಾನ ಮಾಡುವ ಯುವ ಜನತೆ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು ಎಂದು ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಹೇಳಿದರು. ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಶನಿವಾರ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು  ರಾಜಕೀಯ ವ್ಯವಸ್ಥೆ ಕೆಟ್ಟಿದೆ ಎಂದು ದುರುತ್ತಾ ಕೂಡುವ ಬದಲು ಯೋಗ್ಯರನ್ನು ಆಯ್ಕೆ ಮಾಡುವ ಕಾರ್ಯ ಯುವ ಮತದಾನರಿಂದ ನಡೆಯಬೇಕು ಎಂದು ಅವರು ಯುವ ಜನತೆಗೆ ಕರೆಕೊಟ್ಟರು.  ಚುನಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮತದಾನರು ಭಾಗಿಯಾಗುವುದರಿಂದ ಜನಪರ ಸರ್ಕಾರ ಆಡಳಿತಕ್ಕೆ ಬರಲು ಸಾಧ್ಯ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ. ಭೂಬಾಲನ ಮಾತನಾಡಿ ಚುನಾವಣಾ ಆಯೋಗ ಕಳೆದ 15 ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಪ್ರತಿ  ಜನವರಿ 25 ನ್ನು ಆಚರಿಸುತ್ತ ಬಂದಿದ್ದು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳು ಅದರಲ್ಲಿಯೂ ಬೂತ್ ಮಟ್ಟದ ಅಧಿಕಾರಿಗಳು,  ಮಾಸ್ಟರ್ ಟ್ರೈನರ್ಗಳು , ಸ್ವೀಪ್ ಚಟುವಟಿಕೆಗಳಲ್ಲಿ ಭಾಗವಹಿಸಿದ  ಎಲ್ಲಾ ಅಧಿಕಾರಿಗಳಿಗೆ ನಮ್ಮ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಲು  ಕಾರಣವಾದ ಕಾರಣ ಅವರ...

ಅಗಷ್ಟ್ ಕೊಮ್ಟ್ರವರ ಜಯಂತಿ ದಿನಾಚರಣೆಯ

ಇಮೇಜ್
 ಅಗಷ್ಟ್ ಕೊಮ್ಟ್ರವರ ಜಯಂತಿ ದಿನಾಚರಣೆಯ ದಿನಾಂಕ: ೨೧-೦೧-೨೦೨೫ ರಂದು  ನಗರದ ಎಸ್.ಎಸ್.ವ್ಹಿ.ವ್ಹಿ ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ‘ಅಗಷ್ಟ್ ಕೊಮ್ಟ್’ ರವರ ಜಯಂತಿ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ.ರವೀಂದ್ರ ಬಿ. ಮುದ್ದೇಬಿಹಾಳ ಉಪನ್ಯಾಸಕರು, ಇವರು ಮಾತನಾಡುತ್ತ ‘ಅಗಷ್ಟ್ ಕೊಮ್ಟ್ (೧೭೯೮-೧೮೫೭) ಪಾಸಿಟಿವಿಸಂನ ಸಂಸ್ಥಾಪಕ, ಕಾಮ್ಟೆ ಅವರ ತಂದೆ ತೆರಿಗೆ ಅಧಿಕಾರಿ ಲೂಯಿಸ್ ಕಾಮ್ಟೆ ಮತ್ತು ಅವರ ತಾಯಿ ರೊಸಾಲಿ ಬೋಯರ್. ಬಲವಾದ ರಾಜಮನೆತನದ ಮತ್ತು ಆಳವಾದ ಪ್ರಾಮಾಣಿಕ ರೋಮನ್ ಕ್ಯಾಥೋಲಿಕರು. ಆದರೆ ಅವರ ಸಹಾನುಭೂತಿಯು ಫ್ರೆಂಚ್ ಕ್ರಾಂತಿಯ ನಂತರ ಫ್ರಾನ್ಸ್ನಾದ್ಯಂತ ವ್ಯಾಪಿಸಿದ ಗಣರಾಜ್ಯವಾದ ಮತ್ತು ಸಂದೇಹವಾದಕ್ಕೆ ವಿರುದ್ಧವಾಗಿತ್ತು. ಕಾಮ್ಟೆ ರೋಮನ್ ಕ್ಯಾಥೊಲಿಕ್ ಮತ್ತು ರಾಜಪ್ರಭುತ್ವವನ್ನು ಸಮಾನವಾಗಿ ತಿರಸ್ಕರಿಸುವ ಮೂಲಕ ಚಿಕ್ಕ ವಯಸ್ಸಿನಲ್ಲೇ ಈ ಸಂಘರ್ಷಗಳನ್ನು ಪರಿಹರಿಸಿದರು . ಅವರು ಬೌದ್ಧಿಕವಾಗಿ ಪೂರ್ವಭಾವಿಯಾಗಿದ್ದರು ಮತ್ತು ೧೮೧೪ ರಲ್ಲಿ ಎಕೋಲ್ ಪಾಲಿಟೆಕ್ನಿಕ್ ಅನ್ನು ಪ್ರವೇಶಿಸಿದರು.’ ಎಂದು ಹೇಳಿದರು.     ಕಾರ್ಯಕ್ರಮದ ಅಧ್ಯಕ್ಷಸ್ಥಾನನವನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಬಿ.ಜಾಧವ ಮಾತನಾಡುತ್ತ ‘ಒಂದು ಶ...

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಪ್ರಥಮ ಸ್ಥಾನ ಪಡೆದ ಪೂರ್ಣಿಮಾ ಕೆಂಭಾವಿ

ಇಮೇಜ್
 ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ: ಪ್ರಥಮ ಸ್ಥಾನ ಪಡೆದ ಪೂರ್ಣಿಮಾ ಕೆಂಭಾವಿ ಇಂಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಧಾರವಾಡದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಜರುಗಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕಿನ ಶಿರಕನಹಳ್ಳಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ವರ್ಗದ ವಿದ್ಯಾರ್ಥಿನಿ ಪೂರ್ಣಿಮಾ ಕೆಂಭಾವಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.        ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹಾಗೂ ಯೋಜನಾಧಿಕಾರಿ ಭಾರತಿ ಶೆಟ್ಟರ ಅವರು ವಿಜೇತ ಪೂರ್ಣಿಮಾಳಿಗೆ ಪ್ರಶಸ್ತಿ ಪತ್ರ ಹಾಗೂ 25000 ರೂ.ಗಳ ಚೆಕ್ ನೀಡಿ ಗೌರವಿಸಿದ್ದಾರೆ.         ರೈತರಾದ ತಂದೆ ರಮೇಶ ಹಾಗೂ ತಾಯಿ ಮಲ್ಲಮ್ಮಳ ಸುಪುತ್ರಿಯಾದ ಪೂರ್ಣಿಮಾ ಕೆಂಭಾವಿ-ಈ ವಿದ್ಯಾರ್ಥಿನಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ,ಶಿಕ್ಷಣ ಸಂಯೋಜಕ ಪ್ರಕಾಶ ನಾಯಕ, ಬಿ ಆರ್ ಪಿ ಎ ಜಿ ಚೌಧರಿ, ಸಿ ಆರ್ ಪಿ ಸಂತೋಷ ನೆರಕಿ, ಮುಖ್ಯ ಶಿಕ್ಷಕ ಭೀಮು ಲಮಾಣಿ, ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರಗೌಡ ಪಾಟೀಲ ಸೇರಿದಂತೆ ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು,ಗ್ರಾಮಸ...

ವೇಮನರ ಚಿಂತನೆ ಬದುಕಿಗೆ ಮಾರ್ಗದರ್ಶಿ-ಸಂತೋಷ ಬಂಡೆ

ಇಮೇಜ್
 ವೇಮನರ ಚಿಂತನೆ ಬದುಕಿಗೆ ಮಾರ್ಗದರ್ಶಿ-ಸಂತೋಷ ಬಂಡೆ ಇಂಡಿ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜ ಸುಧಾರಕರಾಗಿ, ಜನರಾಡುವ ಭಾಷೆಯಲ್ಲಿ ಬೋಧನೆ ಮಾಡಿದ ಜನಪರ ನಿಲುವಿನ ಮಹಾಯೋಗಿ ವೇಮನ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ  ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.          ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಹಾಯೋಗಿ ವೇಮನರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.        ಕನ್ನಡದಲ್ಲಿ ಸರ್ವಜ್ಞರಿದ್ದಂತೆ, ತೆಲುಗಿನಲ್ಲಿ ವೇಮನ. ಯೋಗ ವಿಚಾರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರ ಕವಿತೆಗಳಲ್ಲಿ ಸಾಮಾಜಿಕ, ನೈತಿಕ, ವಿಡಂಬನಾತ್ಮಕ ಸಂಗತಿಗಳಿವೆ. ಸಮಾಜ ಚಿಂತಕರಾಗಿ ಅವರು ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದವರು. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.            ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಧರ್ಮ- ಅಧರ್ಮ, ಜ್ಞಾನ-ಅಜ್ಞಾನ ಸೇರಿದಂತೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವಜ್ಞನೆನಿಸಿಕೊಂಡಿದ್ದ ವೇಮನರ ವಿಚಾರಗಳು ಇಂದಿಗೂ ಮಹತ್ವ ಪಡೆದಿವೆ ಎಂದು ಹೇಳಿದರು.              ಮ...

ಚುನಾವಣೆಗಳು ಬರತವೇ- ಹೋಗುತ್ತವೆ ಆದರೆ ನಾವೆಲ್ಲರು ಸ್ನೇಹಮಯ ಜೀವಿಗಳಾಗಿರಬೇಕು ನಿಮ್ಮ ಎರಡು ಹಂತದ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಿಮ್ಮೆಲ್ಲರಿಗೂ ಅಬಿನಂದನೆಗಳು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್

ಇಮೇಜ್
 ಇಂಡಿ. ಚುನಾವಣೆಗಳು ಬರತವೇ- ಹೋಗುತ್ತವೆ ಆದರೆ ನಾವೆಲ್ಲರು ಸ್ನೇಹಮಯ ಜೀವಿಗಳಾಗಿರಬೇಕು ನಿಮ್ಮ  ಎರಡು ಹಂತದ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಿಮ್ಮೆಲ್ಲರಿಗೂ  ಅಬಿನಂದನೆಗಳು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.   ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂಡಿ ಪಟ್ಟಣದ ನೌಕರ ಸಂಘದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ  ನೂತನವಾಗಿ ಆಯ್ಕೆಯಾದ ಇಂಡಿ ತಾಲೂಕಾ ನೌಕಕರ ಸಂಘದ  ಅಧ್ಯಕ್ಷರಾದ  ಬಸವರಾಜ ರಾವುರ  ಮತ್ತು ಪದಾಧಿಕಾರಿಗಳು ಹಾಗೂ ನಿರ್ದೇಶಕ ಮಂಡಳಿಯವರಿಗೂ ಹಾಗೂ ವಿಜಯಪುರ- ಬಾಗಲಕೋಟ ಅವಳಿ  ಜಿಲ್ಲೆಗಳ ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನೂತನ  ಅಧ್ಯಕ್ಷರಾದ  ಆನಂದಗೌಡ  ಬಿರಾದಾರ ಮತ್ತು ಅವರ ಪದಾಧಿಕಾರಿಗಳ,ನಿರ್ದೇಶಕ ಮಂಡಳಿಯವರಿಗು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು    ನೀವು ಮಾಡುತ್ತಿರುವ ನೌಕರರ ಹಾಗೂ ಶಿಕ್ಷಕರ ಪರ ಉತ್ತಮ ಕಾರ್ಯಗಳೆ ನಿಮ್ಮನ್ನು ಗೆಲ್ಲಿಸಿದೆ. ನಾನು ಬಹಳ ದಿನಗಳಿಂದ ಗಮನಿಸುತ್ತಿರುವೆ ನಿಮ್ಮ ಈ ತಂಡದ ಕಾರ್ಯ ಶ್ಲಾಘನೀಯ ನಿಮ್ಮ  ಕಾರ್ಯಕ್ಷಮತೆ ಮತ್ತು  ಸೇವಾ ಮನೋಧೋರಣೆಯಿಂದ  ಈಗ ಜಿಒಸಿಸಿ  ಪ್ರತಿಷ್ಠಿತ ಬ್ಯಾಂಕ್  ಆಗಿದೆ ಹಾಗೂ  ಜಿಲ್ಲೆಯಲ್ಲೆ ಇಂಡಿ ತಾಲೂಕಿನ ಶಿಕ್ಷಕರ/ನೌಕರರ    ಸಂಘಟನೆ ನೌಕರರಿಗೆ  ಉತ್ತಮ ಸೇವೆ...

ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ತುಂಬಾ ಸಹಕಾರಿ.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲ್ಗೂರ

ಇಮೇಜ್
 ಇಂಡಿ. ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ತುಂಬಾ ಸಹಕಾರಿ. ಸಮಾಲೋಚನಾ ಸಭೆಗಳು ಮಕ್ಕಳ ಕಲಿಕೆ ಪ್ರೇರೇಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲ್ಗೂರ  ಹೇಳಿದರು. ಪಟ್ಟಣದ ಸರಕಾರಿ ಉರ್ದು ಗಂಡ ಮಕ್ಕಳ ಶಾಲೆಯಲ್ಲಿ ಆಶ್ರಯ ಕಾಲೋನಿಯಲ್ಲಿ  ನಡೆದ ಮೂರರಿಂದ ಐದನೇ ತರಗತಿ ಬೋಧಿಸುತ್ತಿರುವ ಶಿಕ್ಷಕರ ಸಮಾಲೋಚನೆ ಸಭೆ ಉದ್ಘಾಟಸಿ ಹಾಗೂ  ಜುಲೈ 2024 ರಿಂದ ಜನವರಿ 2025ರ ವರೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದ ಅವರು   ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ತರಬೇತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಶಿಕ್ಷಕರು ಸಮಾಲೋಚನೆ ಸಭೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.  ಮಕ್ಕಳು ದಿನನಿತ್ಯ ಚಟುವಟಿಕೆಗಳಲ್ಲಿ ತೊಡುಗುವ ಮೂಲಕ ಕಲಿಕೆಯನ್ನು ಸಾಧಿಸಲು ನಿರಂತರ ಪ್ರಯತ್ನ ನಡೆದಿದೆ. ತರಗತಿ ಅಭಿವೃದ್ಧಿ ಮಾಡುವುದು ,ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ತೊಂದರೆಗಳು ಸಮಸ್ಯೆ ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿಯಾಗಲಿದೆ ಎಂದ ತಿಳಿಸಿದರು. ಈ ಸಂದರ್ಭದಲ್ಲಿ , ಕ್ಷೇತ್ರ ಸಮನ್ವಾಯ ಅಧಿಕಾರಿಗಳು ಎಸ್. ಆರ್. ನಡುಗಡ್ಡಿ, ಬಿ ಆರ್ ಪಿ ಗಳಾ...

ಇಂಡಿ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಪುಜಾರಿ ಅವರ ವತಿಯಿಂದ ದನಗಳು ಮಾಲೀಕರಿಗೆ ನೋಟಿಸ್.

ಇಮೇಜ್
 ಇಂಡಿ. ಪಟ್ಟಣ ಬಹುತೇಕ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ವಾಹನ ಸವಾರರು, ಜನರು, ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 30ರಿಂದ 40 ದನಗಳು ನಿತ್ಯ ಕಂಡು ಬರುತ್ತವೆ. ರಸ್ತೆ ಮೇಲೆ ಕುಳಿತರೆ ಮೇಲೆ ಏಳುವುದೇ ಇಲ್ಲ. ಪಟ್ಟಣದ ಪ್ರಮುಖ ರಸ್ತೆಗಳಾದ ಸಿಂದಗಿ ರಸ್ತೆ, ವಿಜಯಪುರ ರಸ್ತೆ, ಅಗರಖೇಡ ರಸ್ತೆ, ಚಡಚಣ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಓಡಾಡಿಕೊಂಡಿವೆ. ಅಲ್ಲದೆ ಬಸವೇಶ್ವರ ವೃತ್ತದಲ್ಲಿ  ನಿಲ್ದಾಣದಲ್ಲಿ,  ರಸ್ತೆ ಮೇಲೆ ಕುಳಿತುಕೊಳ್ಳುವ ದನಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಕೆಲವೊಮ್ಮೆ ವಾಹನಗಳು ದನಗಳ ಕಾಲುಗಳ ಮೇಲೆಯೇ ಹಾದು ಹೋಗಿರುವ ಘಟನೆಗಳೂ ನಡೆದಿವೆ. ಆದರೂ ದನಗಳ ಮಾಲೀಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ಗಾಂಧಿ ವೃತ್ತದಲ್ಲಿಯ  ತರಕಾರಿ ಮಾರುಕಟ್ಟೆಯಲಂತೂ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಮಾರಟಕ್ಕೆ ಇಟ್ಟ ಹಣ್ಣು–ತರಕಾರಿಗಳನ್ನು ತಿನ್ನಲು ನುಗ್ಗಿ ಬರುತ್ತವೆ. ದನಗಳನ್ನು ಮಾರುಕಟ್ಟೆಯಿಂದ ಓಡಿಸಲು ವ್ಯಾಪಾರಿಗಳು ಹರಸಾಹಸ ಪಡುವಂತಾಗಿದೆ. ಒಂದು ಕಡೆ ಓಡಿಸಿದರೆ ಮತ್ತೊಂದು ಅಂಗಡಿಗಳಿಗೆ ನುಗ್ಗುತ್ತವೆ. ನಿತ್ಯ ವ್ಯಾಪಾರ ಮಾಡುವುದಕ್ಕಿಂತ ಹೆಚ್ಚಾಗಿ ದನ ಓಡಿಸುವುದೇ ದೊಡ್ಡ ಕೆಲಸವಾಗಿದೆ. ಸಂತೆಯ ದಿನ ವ್ಯಾಪಾರಕ್ಕೆ ಬಂದ ಮಕ್ಕಳು, ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ.ಸೇರಿದಂತೆ ವಿವಿಧ ವ...

ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಅಬುತಾಲಿಬ ಹೂಸೂರ.

ಇಮೇಜ್
 ಇಂಡಿ. ಪಟ್ಟಣದ  ಮಾಡಲ್ ಪಬ್ಲಿಕ್ ಉರ್ದು ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವವು ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸಲಾಯಿತು. ಈ ಕ್ರೀಡೋತ್ಸವವು ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಮಹತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನವಾಗಿತ್ತು. ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ನಿರ್ದೇಶಕ ಅಬುತಾಲಿಬ ಹೂಸುರ ಮಾತನಾಡಿ ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಆರೋಗ್ಯವಾದ ಶರೀರದಲ್ಲಿ ಆರೋಗ್ಯಕರವಾದ ಮನಸ್ಸಿರುತ್ತದೆ ಎಂದು ಪ್ರತಿಪಾದಿಸಿದರು. ಕ್ರೀಡೆಗಳು ವಿದ್ಯಾಭ್ಯಾಸದ ಒಂದು ಅಂಗವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಆರೋಗ್ಯ ಚೆನ್ನಾಗಿರುವವರಿಗೆ ಮಾನಸಿಕ ಏಕಾಗ್ರತೆ ಹಾಗೂ ಆರೋಗ್ಯ ಲಭಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಕ್ರೀಡಾಪಟುಗಳು ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಭಾಗವಹಿಸದವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಸೋಲು ಗೆಲುವಿನ ಸೋಪಾನ. ಶ್ರಮವಹಿಸಿ ಸತತ ಅಭ್ಯಾಸ ಮಾಡಿದರೆ ಜಯ ದೊರೆಯುತ್ತದೆ. ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಇಂಡಿ  ಪುರಸಭೆ ನಾಮ ನಿರ್ದೇಶಕ ಸದಸ್ಯ ಅಬ್ದುಲ್ ರಶೀದ ...

ಸಮಾಜದ ಒಳಿತಿಗಾಗಿ ಶ್ರಮಿಸಿದ ಸಿದ್ಧರಾಮರು-ಸಂತೋಷ ಬಂಡೆ

ಇಮೇಜ್
 ಸಮಾಜದ ಒಳಿತಿಗಾಗಿ ಶ್ರಮಿಸಿದ ಸಿದ್ಧರಾಮರು-ಸಂತೋಷ ಬಂಡೆ ಇಂಡಿ: ಯೌವ್ವನದಲ್ಲೇ ಸಮಾಜಮುಖಿ ಬದುಕನ್ನು ಆರಂಭಿಸಿದ್ದ ಸಿದ್ಧರಾಮರು ಕರ್ಮಯೋಗಿ, ಶಿವಯೋಗಿ, ಕಾಯಕಯೋಗಿಯಾಗಿ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿ ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.         ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶಿವಯೋಗಿ ಸಿದ್ಧರಾಮರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.        ಸಿದ್ಧರಾಮೇಶ್ವರರು 12ನೇ ಶತಮಾನದಲ್ಲೇ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸುವ ಮೂಲಕ ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಕಾಯಕ ಮತ್ತು ಜನಹಿತಾಸಕ್ತಿ ಅವರ ಬದುಕಿನ ಎರಡು ಕಣ್ಣುಗಳಾಗಿದ್ದವು. ಸಿದ್ಧರಾಮರು ಬದುಕಿದ್ದಾಗಲೇ ದೈವತ್ವಕ್ಕೇರಿದ ಮಹಾಮಾನವರಾಗಿದ್ದಾರೆ ಎಂದು ಹೇಳಿದರು.        ಹಿರಿಯ ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, 12ನೇ ಶತಮಾನದಲ್ಲಿ ಎರಡು ಅಂಕಿತನಾಮವಿರುವ ಏಕೈಕ ವ್ಯಕ್ತಿ ಶಿವಯೋಗಿ ಸಿದ್ಧರಾಮರು. ಅವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿಗಳು, ಸಾಮಾಜಿಕ ಕಳಕಳಿ, ಸರಳ ತತ್ವಗಳು ಎದ್ದು ಕಾಣುತ್ತವೆ ಎಂದು ಹೇಳಿದರು.        ಶಿಕ್ಷಕಿ ಎನ್ ಬಿ ಚೌಧರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ಥರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ ಮಕ್ಕಳು ಉಪಸ್ಥಿತರಿ...

ಜಮಾತೆ ಅಹ್ಲೇಹದೀಸ್ ಇಜ್ತೆಮಾ ಇಂಡಿ. ಅಬ್ದುಲ ಘಫ್ಫಾರ ಸಲಫಿ.

ಇಮೇಜ್
 ಇಂಡಿ: ಜಮಾತೆ ಅಹ್ಲೇಹದೀಸ್ ಮತ್ತು ಮರಕಜಿ ಮದಿನಾ ಮಸೀದಿ ಲೋಹಾರ ಗಲ್ಲಿ ಇಂಡಿ ಅವರ ವತಿಯಿಂದ  ಇಜ್ಲಾಸೆ ಆಮ್  ಇಜ್ತೆಮಾ ಆಯೋಜಿಸಲಾಗಿತ್ತು. ಈ ಸಭೆ ಅತ್ಯಂತ ಯಶಸ್ವೀ ಮತ್ತು ಐತಿಹಾಸಿಕ ಕಾರ್ಯಕ್ರಮವಾಗಿತ್ತು.  ಈ ಸಂದರ್ಭದಲ್ಲಿ ಪ್ರಸಿದ್ಧ ಅಲಿಮ್ ಮೌಲಾನಾ ಅಬ್ದುಲ್ ಘಪ್ಪಾರ್  ಸಲ್ಫಿ ಅವರು "ಮಾನವ ಜೀವನದ ಮೇಲೆ ತೌಹೀದ್ ನ ಭಾವನೆಯ ಪರಿಣಾಮಗಳು" ಎಂಬ ವಿಷಯದ ಮೇಲೆ  ಭಾಷಣ ಮಾಡಿದರು. ಮೌಲಾನಾ ಅವರು ತೌಹೀದ್ ನ ಮಹತ್ವ ಮತ್ತು ಮಾನವ ಜೀವನದ ಮೇಲೆ ಅದರ ಆಳವಾದ ಪರಿಣಾಮಗಳನ್ನು ಕುರಾನ್ ಮತ್ತು ಸುನ್ನತ್ ಬೆಳಕಿನಲ್ಲಿ ಸುಂದರವಾಗಿ ವಿವರಿಸಿದರು. ಅವರು ಹೇಳಿದರು ತೌಹೀದ್ ಒಂದು ನಂಬಿಕೆ ಮಾತ್ರವಲ್ಲ, ಇದು ಮಾನವನ ಚಿಂತನೆ, ಚರಿತ್ರೆ ಮತ್ತು ಕ್ರಿಯೆಯನ್ನು ಶ್ರೇಷ್ಟಗೊಳಿಸುವ ಸಮಗ್ರ ವ್ಯವಸ್ಥೆಯಾಗಿದೆ. ಅವರು ತೌಹೀದ್ ಅಲ್ಲಿ ತೊಡಗಿರುವ ವಿಶಿಷ್ಟತೆ, ಸತ್ಯ ನಂಬಿಕೆ ಮತ್ತು ಲೋಕವಾಸನೆಯ ಉತ್ಕರ್ಷವನ್ನು ವಿವರಿಸಿದರು. ಮೌಲಾನಾ ಉಮರ್ ಫಾರೂಕ್ ಮುಹಮ್ಮದಿ ಅವರು "ಕಿಯಾಮತ್ ನ ಭಯಾನಕತೆ" ಎಂಬ ವಿಷಯದ ಮೇಲೆ ಅತೀ ಹೃದಯಸ್ಪರ್ಶಿ ಮತ್ತು ಭಾವನಾತ್ಮಕ ಭಾಷಣ ಮಾಡಿದರು. ಅವರು ಕುರಾನ್ ಮತ್ತು ಹದೀಸಿನ ಆದಾರದ ಮೇಲೆ ಕಿಯಾಮತ್ ನ ದಿನದ ಭೀಕರ ದೃಶ್ಯಗಳನ್ನು ವಿವರಿಸಿದರು.  ಆ ದಿನ ಎಲ್ಲ ಪರಿಕರಗಳು ನಾಶವಾಗುತ್ತವೆ, ಬೆಟ್ಟಗಳು ರೇಷ್ಮೆಯಂತೆ ಹಾರಿ ಹೋಗುತ್ತವೆ, ಮತ್ತು ಪ್ರತಿಯೊಬ್ಬ ವ್ಯಕ್ತಿ ತನ್ನ ಕೃತ್ಯಗಳ ಲೆಕ್ಕಸಾಕ್ಷಿ ನೀ...

ಕಳೆದ ೫ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಸರಕಾರದಿಂದ ೨೫ ಆದೇಶಗಳನ್ನು ಮಾಡಿಸಿದ್ದೇನೆ.

ಇಮೇಜ್
 ಇಂಡಿ: ಮುಂಬರುವ ೨೦೨೬ಕ್ಕೆ ಕೇಂದ್ರ ಸರ್ಕಾರ ೮ನೇ ವೇತನ ಆಯೋಗ ಜಾರಿಗೆ ತರಲಿದ್ದು, ಅದನ್ನು ಯಥಾವತ್ತಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಜಾರಿಯಾಗುವಂತೆ ಕ್ರಮ ಜರುಗಿಸಲಾಗುವದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ನೀಡಿದರು.  ಅವರು ಶುಕ್ರವಾರ ಇಂಡಿ ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಸಭಾ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ ೫ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಸರಕಾರದಿಂದ ೨೫ ಆದೇಶಗಳನ್ನು ಮಾಡಿಸಿದ್ದೇನೆ. ಇದನ್ನು ಅರಿತ ರಾಜ್ಯದ ನೌಕರರು ಸಂಘಟನೆಯ ಸತ್ಯ ಮತ್ತು ನ್ಯಾಯವನ್ನು ಕಂಡು ಮತ್ತೊಮ್ಮೆ ನನಗೆ ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವದಾಗಿ ಹೇಳಿದರು.  ಸಂಘದ ಸಂವಿಧಾನವನ್ನು ತಿದ್ದಿ ೧೨೨ ಪುಟಗಳಿಗೆ ಹೆಚ್ಚಿಸಿದ್ದೇನೆ. ಇದರ ಅಡಿಯಲ್ಲಿ ಎಲ್ಲಾ ನೌಕರರಿಗೂ ನ್ಯಾಯ ಸಿಗುವಂತೆ ಮಾಡಲಾಗಿದೆ. ಭ್ರಷ್ಟಾಚಾರ ಕೊನೆಗೊಳಿಸಲು ಸಂಕಲ್ಪ ತೊಡಲಾಗಿದೆ. ಸರ್ಕಾರದ ೨೫ ಕೋಟಿ ಅನುದಾನ ಬಳಸಿಕೊಂಡು ಸಂಘದ ಅಡಿಯಲ್ಲಿ ಸಭಾ ಭವನ ನಿರ್ಮಿಸಲಾಗಿದೆ ಎಂದರು. ನೌರರಿಗಾಗಿ ಎನಪಿಎಸ್ ತೆಗೆದು ಓಪಿಎಸ್ ಜಾರಿಗೊಳಿಸುವದು, ನಗದು ರಹಿತ ಚಿಕಿತ್ಸೆ ಮಾಡುವ ಬಗ್ಗೆ ಸರ್ಕಾರ ಭರವಸೆ ನೀಡಿದೆ. ಇದರ ಜೊತೆಗೆ ನೌಕರ ಮರಣ ಹೊಂದಿದರೆ ಅವರ ಕುಟುಂಬಕ್ಕೆ ೧ ಕೋಟಿ ರೂ, ಬರುವಂತೆ ಇನ್ಸುರೆನ್ಸ ಮಾಡಿಸು...

ಕನ್ನಡ ಜಾನಪದ ಪರಿಷತ್ತಿನ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ-ಶ್ರೀ ಪಂಡಿತ ಭೀ ಅವಜಿ ನೇಮಕ.

ಇಮೇಜ್
 ಕನ್ನಡ ಜಾನಪದ ಪರಿಷತ್ತಿನ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ-ಶ್ರೀ ಪಂಡಿತ  ಭೀ ಅವಜಿ ನೇಮಕ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ , ಕನ್ನಡ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ರನ್ನಾಗಿ ಶ್ರೀ ಪಂಡಿತ ಭೀ ಅವಜಿ ಇವರನ್ನು ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ  ಅವರು ಆದೇಶ ಹೊರಡಿಸಿದ್ದಾರೆ.ಆದೇಶದಲ್ಲಿ ಕರ್ನಾಟಕ ರಾಜ್ಯಾದ್ಯಾಂತ ಜಾನಪದ ಕಲೆಗಳ ಕ್ಷೇತ್ರಕಾರ್ಯ, ದಾಖಲೀಕರಣ, ತರಬೇತಿ ಮೂಲಕ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾ ಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಸ್ತು ಸಮಗ್ರಹ, ಧ್ವನಿ ಮುದ್ರಣ, ಜಾನಪದ ಕಲಾವಿದ ಮಾನ-ಸನ್ಮಾನ-ಪ್ರಶಸ್ತಿ ಪ್ರಧಾನ ಇತ್ಯಾದಿ ಕೆಲಸಗಳನ್ನು ನಿರ್ವಹಿಸುವತ್ತ ಕಾರ್ಯಪ್ರವೃತ್ತವಾಗಿದೆ. ಇದೀಗ ತನ್ನ ಎಲ್ಲಾ ನಗರ ಕೇಂದ್ರಿತ ಜಾನಪದೀಯ ಚಟುವಟಿಕೆಗಳನ್ನು ತಮ್ಮ ತಾಲ್ಲೂಕಿನ ಗ್ರಾಮ/ಯೊಬ್ಬಳಿ ಹಂತದಿಂದಲು ನಿರ್ವಹಿಸಲು ತಮ್ಮನ್ನು "ಕನ್ನಡ ಜಾನಪದ ಪರಿಷತ್‌ನ ಇಂಡಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ" ಈ ದಿನದಿಂದ ಮುಂದಿನ ಆದೇಶದವರೆಗೂ ನೇಮಕ ಮಾಡಲಾಗಿದೆ. ಹಾಲಿ ಇದ್ದ ತಾಲೂಕು ಅಧ್ಯಕ್ಷ ಶ್ರೀ ಆರ್ ವಿ ಪಾಟೀಲ ಇವರನ್ನು ವಿಜಯಪುರ ಜಿಲ್ಲಾ ಘಟಕದ ಸಮಿತಿಗೆ ಬಡ್ತಿ ನೀಡಲಾಗಿದೆ.ತಾಲ್ಲೂಕು ಸಮಿತಿಯನ್ನು ರಚಿಸಿ ಅದರ ಪಟ್ಟಿಯನ್ನು 15 ದಿನದೊಳ್ಳಗಾಗಿ ಈ ಕಛೇರಿಗೆ ಜಿಲ್ಲಾಧ್ಯಕ್ಷರ ಮೂಲಕ ಅನುಮೋದನೆಗೆ ಕಳುಹಿಸಲು ಕೋರಿದೆ ಎಂದು ತಿಳಿಸಲಾಗಿದೆ.

ಆಧುನಿಕ ಶಿಕ್ಷಣದ ಜನನಿ ಸಾವಿತ್ರಿಬಾಯಿ ಫುಲೆ-ಸಂತೋಷ ಬಂಡೆ

ಇಮೇಜ್
 ಆಧುನಿಕ ಶಿಕ್ಷಣದ ಜನನಿ ಸಾವಿತ್ರಿಬಾಯಿ ಫುಲೆ-ಸಂತೋಷ ಬಂಡೆ ಇಂಡಿ: ಹೆಣ್ಣು ಮಕ್ಕಳು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟಗಳನ್ನು ಲೆಕ್ಕಿಸದೆ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.        ಅವರು ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ನಿಮಿತ್ತ ಹಮ್ಮಿಕೊಂಡ 'ಆಧುನಿಕ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ' ಕುರಿತ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.       ಸಾವಿತ್ರಿಬಾಯಿ ಫುಲೆ ಭಾರತದ ಮೊಟ್ಟಮೊದಲ ಶಿಕ್ಷಕಿ. ಸಾಮಾಜಿಕ-ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಅನೇಕ ಶಾಲೆಗಳನ್ನು ಸ್ಥಾಪಿಸಿದ, ಆಧುನಿಕ ಶಿಕ್ಷಣದ ಜನನಿಯ ಜೀವನಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.         ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೊಸ್ಕರ ಪ್ರಪ್ರಥಮವಾಗಿ ಶಾಲೆಗಳನ್ನು ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಎಲ್ಲರಿಗೂ ವಿದ್...

ಕೆಜಿಪಿಎ ಅಸೋಶಿಯೇಶನ್ ಬಿಜಾಪುರ: ಚಳಿಗಾಲದಲ್ಲಿ ಬಡವರಿಗೆ ಬ್ಲಾಂಕೆಟ್ ವಿತರಣೆ

ಇಮೇಜ್
 ಕೆಜಿಪಿಎ ಅಸೋಶಿಯೇಶನ್ ಬಿಜಾಪುರ: ಚಳಿಗಾಲದಲ್ಲಿ ಬಡವರಿಗೆ ಬ್ಲಾಂಕೆಟ್ ವಿತರಣೆ ಬಿಜಾಪುರ: ಕೆಜೆಪಿಎ ಅಸೋಸಿಯೇಶನ್ ಬಿಜಾಪುರ ವತಿಯಿಂದ  ಬಡ ಹಾಗೂ ಆಶ್ರಯವಿಲ್ಲದ ವ್ಯಕ್ತಿಗಳಿಗೆ ಚಳಿಗಾಲದ ಬ್ಲಾಂಕೆಟ್ ವಿತರಣೆ ಕಾರ್ಯಕ್ರಮವು ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೆದ್ದಾರಿ ಪಕ್ಕದ ಫುಟ್‌ಪಾತದಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದರ್ಗಾ, ಮಂದಿರದಲ್ಲಿ,  ನಿದ್ರಿಸುತ್ತಿರುವ ಬಡಜನರ ನೆರವಿಗೆ ಬಂದ ಸಂಘಟನೆಯ ಕಾರ್ಯಕರ್ತರು, ತಕ್ಷಣವೇ ಬ್ಲಾಂಕೆಟ್‌ಗಳನ್ನು ವಿತರಿಸಿ, ಸಾಮಾಜಿಕ ಕಳಕಳಿಯ ಉದಾಹರಣೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಜಿಯಾ ಪಠಾಣ್ ಚಳಿಗಾಲದಲ್ಲಿ ಬಡವರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ನಮ್ಮ ಸಣ್ಣ ಸಹಾಯದಿಂದ ಅವರು ಚಳಿಯ ತೀವ್ರತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಕೆಜಿಪಿಎ ಅಸೋಸಿಯಶನ್ ಸದಸ್ಯರು ಹೊದಿಕೆ‌ ವಿತರಣೆ ಕಾರ್ಯವನ್ನು ಪ್ರತಿವರ್ಷವೂ ನಡೆಸುತ್ತಾ ಬಂದಿದ್ದಾರೆ. ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಈ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ಡಿಸೆಂಬರ್ ಬಂತೆಂದರೆ ಎಲ್ಲೆಲ್ಲೂ ಚಳಿ ಹೆಚ್ಚಾಗಿರಲಿದ್ದು, ಈ ವೇಳೆ ಅನೇಕರು ಮನೆಯಿಂದ ಹೊರಗೆ ಬರಲು ಸಹ ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಮನೆ ಇಲ್ಲದೆ ಎಲ್ಲೆಂದರಲ್ಲಿ ಬದುಕು ದೂಡುವ ನಿರಾಶ್ರಿತ ಜನರಿಗೆ ನೆರವಾಗುವ ಉದ್ದೇಶದಿಂದ ಕೆಜಿಪಿಎ  ಸದಸ್ಯರು ಸದ್ದಿಲ್ಲದೆ ಹೊದಿಕೆ ವಿತರಣೆ ಮಾ...

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದ್ವಿತೀಯ ಪುಣ್ಯಸ್ಮರಣೆ ಹಾಗೂ ಸೇವಾದಳ ಸಪ್ತಾಹ ಆಚರಣೆ

ಇಮೇಜ್
 ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದ್ವಿತೀಯ ಪುಣ್ಯಸ್ಮರಣೆ ಹಾಗೂ ಸೇವಾದಳ ಸಪ್ತಾಹ ಆಚರಣೆ. ಇಂ ಡಿ:ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ತತ್ವ,ಆದಶ೯ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಭಾರತ ಸೇವಾದಳ ಶಿಸ್ತಿನ ಸಂಸ್ಥೆಯಾಗಿದ್ದು, ಇಲ್ಲಿ ಭಾಗವಹಿಸುವ ಎಲ್ಲ ಶಿಕ್ಷಕರು, ಮಕ್ಕಳು ಶಿಸ್ತಿಗೆ ಬದ್ದರಾಗಿರಬೇಕು. ಹಾಗೂ ಇಲ್ಲಿ ಶಿಸ್ತು, ಸಮಯಪ್ರಜ್ಞೆ, ಸೇವಾ ಮನೋಭಾವನೆ, ಶಾರೀರಿಕ ಚಟುವಟಿಕೆಗಳನ್ನು ಉತ್ತಮವಾಗಿ ಕಲಿತು ತಮ್ಮ ಶಾಲಾ ಮಕ್ಕಳಿಗೆ ಕಲಿಸಬೇಕು. ಮಕ್ಕಳಲ್ಲಿ ದೇಶಾಭಿಮಾನವನ್ನು ಬೆಳೆಸಬೇಕೆಂದು ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.                                  ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಭಾರತ ಸೇವಾದಳ ಎಲ್ಲಾ ತಾಲೂಕು ಸಮಿತಿ ಹಾಗೂ ಸರ್ಕಾರಿ ಪ್ರೌಢಶಾಲೆ ಇಂಡಿ ಇವರುಗಳ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ಸೇವಾದಳ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.                              ...

ನೌಕರರ ಸಂಘದ ರಾಜ್ಯ ಅಧ್ಯಕ್ಷ ಷಡಕ್ಷರಿಗೆ ಇಂಡಿಯಲ್ಲಿ ಅಭಿನಂದನಾ ಸಮಾರಂಭ.

ಇಮೇಜ್
 ಇಂಡಿ. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರಿಗೆ ಇಂಡಿ ತಾಲ್ಲೂಕು ನೌಕರರ ಸಂಘದ ವತಿಯಿಂದ ಅಭಿನಂದನಾ ಸಮಾರಂಭವನ್ನು ದಿನಾಂಕ 03-01-2025 ರಂದು ನೌಕರರ ಸಭಾ ಭವನದಲ್ಲಿ ನೆಡಯಲಿದೆ ಎಂದು ಇಂಡಿ ತಾಲೂಕಾ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾವೂರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು ನಿರ್ದೇಶಕರು ಸೇರಿದಂತೆ  400 ನೂರಕ್ಕೂ ಹೆಚ್ಚು ನೌಕರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.   ನಮ್ಮ ಪ್ರಮುಖ ಬೇಡಿಕೆಯಾದ ಏಳನೇ ವೇತನ ವನ್ನು ಕರ್ನಾಟಕ  ಸರಕಾರ ಜಾರಿಮಾಡಿದೆ. ಈಗ ನಮ್ಮ ಮುಂದೆ ಇರುವುದು  ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್.ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವುದು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು